ನವದೆಹಲಿ : ರಾಜಕೀಯ ಪಕ್ಷಗಳು(Political Partys) ಮತದಾರರಿಗೆ(Voters) ಭರವಸೆ ನೀಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನ(Supreme Court) ಮುಖ್ಯನ್ಯಾಯಮೂರ್ತಿ ಎನ್ವಿ ರಮಣ(NV Raman) ನೇತೃತ್ವದ ಪೀಠ ಹೇಳಿದೆ.

ಚುನಾವಣಾ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ನೀಡುವ ಸಂಸ್ಕೃತಿಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ, ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಪೀಠ, ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆ ನೀಡುವುದನ್ನು ತಡೆಯಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಜನರ ಕಲ್ಯಾಣ ಮಾಡುವುದು ಸರ್ಕಾರದ ಕರ್ತವ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇನ್ನೊಂದೆಡೆ ಸುಪ್ರೀಂಕೋರ್ಟ್‌ನಲ್ಲಿ ಡಿ.ವೈ.ಚಂದ್ರಚೂಡ ನೇತೃತ್ವದ ನ್ಯಾಯಪೀಠ, ಭಾರತೀಯ ಪುಟ್‌ಬಾಲ್ ಫೆಡರೇಷನ್ ಅನ್ನು ಫಿಪಾ ಅಮಾನತುಗೊಳಿಸಿರುವ ಪ್ರಕರಣದ ಕುರಿತು ವಿಚಾರಣೆ ನಡೆಸಿತು. ಭಾರತೀಯ ಪುಟ್‌ಬಾಲ್ ಫೆಡರೇಷನ್(Football Federation) ಅನ್ನು ಫಿಪಾ ಅಮಾನತುಗೊಳಿಸಿರುವ ವಿಚಾರದ ಕುರಿತು ಸ್ಪಷ್ಟನೆ ನೀಡುವಂತೆ ನ್ಯಾಯಪೀಠ ಕೇಂದ್ರ ಸರ್ಕಾರವನ್ನು ಕೇಳಿತು.

ಈ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಫಿಫಾ ಎಐಎಫ್ಎಫ್ ಅನ್ನು ಅಮಾನತುಗೊಳಿಸಿದ ನಂತರ, ಭಾರತದಲ್ಲಿ ಅಂಡರ್-17 ವಿಶ್ವಕಪ್ ಅನ್ನು ಯೋಜಿಸಿದಂತೆ ನಡೆಸಲು ಭಾರತ ಸರ್ಕಾರವು ಫಿಫಾದೊಂದಿಗೆ ಸಕ್ರಿಯ ಚರ್ಚೆಯಲ್ಲಿದೆ ಎಂದು ಅವರು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ. ಆದರೆ ಅಂಡರ್-17 ವಿಶ್ವಕಪ್ ಪಂದ್ಯಾವಳಿಯನ್ನು ಮುಂದಿಟ್ಟುಕೊಂಡು, ಅಮಾನತು ಶಿಕ್ಷೆ ಎದುರಿಸುವುದು ಸರಿಯಾದ ಕ್ರಮವಲ್ಲ.
ಈ ವಿಷಯದಲ್ಲಿ ಭಾರತ ಸರ್ಕಾರವು ಸಕ್ರಿಯ ಪಾತ್ರವನ್ನು ವಹಿಸುವಂತೆ ನ್ಯಾಯಾಲಯವು ಕೇಳಿಕೊಂಡಿದೆ. ಇನ್ನು ಫಿಪಾ ಭಾರತೀಯ ಪುಟ್‌ಬಾಲ್‌ಫೆಡರೇಷನ್‌ಅನ್ನು ಅಮಾನತುಗೊಳಿಸಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಅಂಡರ್-೧೭ ವಿಶ್ವಕಪ್ ಭಾರತದಲ್ಲಿ ನಡೆಯಲು ಸಾಧ್ಯವಿಲ್ಲ. ಅದೇ ರೀತಿ ಅಮಾನತು ತೆರವುವಾಗುವವರೆಗೂ ಭಾರತ ತಂಡ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ.