New Delhi : ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್(Hijab) ನಿಷೇಧದ ಕುರಿತ ಕರ್ನಾಟಕ ಹೈಕೋರ್ಟ್(Karnataka Highcourt) ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ(Supreme Court) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ,

“ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗೆ ಬೇಕಾದುದನ್ನು ಧರಿಸಬಹುದೇ? ನೀವು ಶಾಲೆಗಳಲ್ಲಿ ಸಮವಸ್ತ್ರದೊಂದಿಗೆ ಧರ್ಮವನ್ನು ಅಭ್ಯಾಸ ಮಾಡಬಹುದೇ? ಎಂದು ಹಿಜಾಬ್ ಪರ ಅರ್ಜಿದಾರರನ್ನು ಪ್ರಶ್ನಿಸಿದೆ. ಶಾಲೆಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಬೇಕೆಂದು ಕೋರಿ 23 ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದ್ದು,
ಅರ್ಜಿಗಳ ವಿಚಾರಣೆ ಆರಂಭಿಸಿರುವ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ಪೀಠವು ಪ್ರಕರಣದ ಪ್ರಮುಖ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿತು. “ವಿದ್ಯಾರ್ಥಿಯು ಮಿನಿಸ್, ಮಿಡಿಗಳಲ್ಲಿ ಏನು ಬೇಕಾದರೂ ಧರಿಸಿ ಬರಬಹುದೇ?
https://vijayatimes.com/health-facts-about-heart/
ನೀವು ಧಾರ್ಮಿಕ ಹಕ್ಕನ್ನು ಹೊಂದಿರಬಹುದು. ಆದರೆ ಸಮವಸ್ತ್ರವನ್ನು ಸೂಚಿಸಿರುವ ಶಿಕ್ಷಣ ಸಂಸ್ಥೆಯೊಳಗೆ ನೀವು ಆ ಹಕ್ಕನ್ನು ಆಚರಿಸಲು ಸಾಧ್ಯವೇ?. ನೀವು ಹಿಜಾಬ್ ಅಥವಾ ಸ್ಕಾರ್ಫ್ ಧರಿಸಲು ಅರ್ಹರಾಗಿರಬಹುದು. ಆದರೆ ಸಮವಸ್ತ್ರವನ್ನು ಸೂಚಿಸುವ ಶಿಕ್ಷಣ ಸಂಸ್ಥೆಯೊಳಗೆ ನೀವು ಆ ಹಕ್ಕನ್ನು ಹೊಂದಬಹುದೇ?” ಎಂದು ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸಂಜಯ್ ಹೆಗ್ಡೆ, ”ಯಾರನ್ನಾದರೂ ಏಕರೂಪ ಸಂಹಿತೆ ಪಾಲನೆ ಮಾಡದ ಕಾರಣ ಕಾಲೇಜಿನಿಂದ ಹೊರಗಿಡಬಹುದೇ? ಇದು ಸರಿಯೇ? ಬಹುತೇಕ ಕಾಲೇಜುಗಳು ಸಲ್ವಾರ್, ಕಮೀಜ್ ಮತ್ತು ದುಪಟ್ಟಾವನ್ನು ಶಿಫಾರಸು ಮಾಡುತ್ತವೆ. ಆದ್ದರಿಂದ ಈಗ ನಾವು, ಬೆಳೆದ ಮಹಿಳೆಗೆ ನೀವು ತಲೆಯ ಮೇಲೆ ದುಪಟ್ಟಾವನ್ನು ಧರಿಸಲು ಸಾಧ್ಯವಿಲ್ಲ ಎಂದು ಹೇಳಬಹುದೇ? ಇದನ್ನು ಪಟಿಯಾಲದಲ್ಲಿ ಮಾಡಬಹುದೇ? ಬಹುಶಃ ಇಲ್ಲ” ಎಂದು ಹೆಗ್ಡೆ ಉತ್ತರಿಸಿದರು.

ಈ ವೇಳೆ, ನ್ಯಾಯಮೂರ್ತಿ ಗುಪ್ತಾ ಅವರು ಉನ್ನತ ನ್ಯಾಯಾಲಯದಲ್ಲಿ ಮಹಿಳಾ ವಕೀಲೆಯೊಬ್ಬರು ಜೀನ್ಸ್ ಧರಿಸಿ ಕಾಣಿಸಿಕೊಂಡ ಘಟನೆಯನ್ನು ನೆನಪಿಸಿಕೊಂಡರು. ಶಿಕ್ಷಣ ಸಂಸ್ಥೆಯು ವಸ್ತ್ರಸಂಹಿಂತೆ ನಿಯಮವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ನೀವು ಹೇಳುತ್ತೀರಿ, ಆದರೆ ಡ್ರೆಸ್ ಕೋಡ್ ಅನ್ನು ನಿಷೇಧಿಸುವ ಕಾನೂನು ರಾಜ್ಯ ಮಾಡಬಹುದೇ? ” ಎಂದು ಪ್ರಶ್ನಿಸಿದರು.
ಆಗ ಹೆಗ್ಡೆ ಅವರು, ಸರ್ಕಾರದ ಆದೇಶ ಕರ್ನಾಟಕ ಶಿಕ್ಷಣ ಕಾಯ್ದೆಗೆ ಹೇಗೆ ಹೊಂದಿಕೆಯಾಗುತ್ತಿಲ್ಲ ಎಂದು ಪೀಠಕ್ಕೆ ವಿವರಿಸಿದರು. ಇನ್ನು ವಿಚಾರಣೆ ಮುಂದುವರೆದಿದ್ದು, ನಾಳೆ ಮತ್ತೆ ವಿಚಾರಣೆ ನಡೆಯಲಿದೆ.