Visit Channel

‘ವೇಶ್ಯಾವಾಟಿಕೆ ಅಕ್ರಮವಲ್ಲ’ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು!

Delhi-SupremeCourt-nocredit-June2021

ವೇಶ್ಯಾವಾಟಿಕೆ(Prostitution) ಕುರಿತು ಸುಪ್ರೀಂಕೋರ್ಟ್‍ನ(Supremecourt) ಹಿರಿಯ ನ್ಯಾಯಮೂರ್ತಿ ಎಲ್. ನಾಗೇಶ್ವರ್ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಮಹತ್ವದ ತೀರ್ಪು(Verdict) ನೀಡಿದೆ.

Supremecourt

ವೇಶ್ಯಾವಾಟಿಕೆಯೂ ಕಾನೂನುಬದ್ದವಾಗಿದ್ದು ಇದರ ವಿರುದ್ದ ಕ್ರಿಮಿನಲ್ ಕೇಸ್(Criminal Case) ದಾಖಲಿಸದಂತೆ ಪೊಲೀಸರಿಗೆ ಸೂಚನೆ ನೀಡಿದೆ. ವೇಶ್ಯಾವಾಟಿಕೆ ಕುರಿತು ಸುದಿರ್ಘ ವಿವರಣೆ ನೀಡಿರುವ ನ್ಯಾಯಮೂರ್ತಿ ಎಲ್.ನಾಗೇಶ್ವರ್ ರಾವ್ ನೇತೃತ್ವದ ತ್ರಿಸದಸ್ಯ ಪೀಠ, ವೇಶ್ಯಾವಾಟಿಕೆಯೂ ಕೂಡಾ ಕಾನೂನು ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡಬಾರದು. ಲೈಂಗಿಕ ಕಾರ್ಯಕರ್ತರು ಕೂಡಾ ಕಾನೂನಿನ ಸಮಾನ ರಕ್ಷಣೆಯನ್ನು ಹೊಂದಿರುತ್ತಾರೆ.

ಸಂವಿಧಾನದ(Constitution) 21ನೇ ವಿಧಿಯ ಪ್ರಕಾರ ದೇಶದ ಎಲ್ಲ ನಾಗರಿಕರು ಸಮಾನ ಹಕ್ಕುಗಳನ್ನು ಹೊಂದಿದ್ದು, ಗೌರವಯುತವಾದ ಜೀವನ ನಡೆಸಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಕುರಿತು ಆರು ಪ್ರಮುಖ ನಿರ್ದೇಶನಗಳನ್ನು ನೀಡಿರುವ ನ್ಯಾಯಪೀಠ, ಲೈಂಗಿಕ ಕಾರ್ಯಕರ್ತರು(Sex Workers) ಕೂಡಾ ಕಾನೂನಿನ ರಕ್ಷಣೆಗೆ ಅರ್ಹರಾಗಿರುತ್ತಾರೆ. ಲೈಂಗಿಕ ಕಾರ್ಯಕರ್ತರು ವಯಸ್ಕರಾಗಿದ್ದು, ಪರಪ್ಪರ ಒಪ್ಪಿತ ಆಧಾರದ ಮೇಲೆ ಭಾಗವಹಿಸುತ್ತಿದ್ದರೆ, ಇದರಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡುವಂತಿಲ್ಲ. ಒಪ್ಪಿತ ಲೈಂಗಿಕ ಕ್ರಿಯೆಯನ್ನು ಅಕ್ರಮವೆಂದು ಹೇಳಲು ಸಾಧ್ಯವಿಲ್ಲ.

Supremecourt

ಇದರ ವಿರುದ್ದ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಬಾರದು. ಏಕೆಂದರೆ ಲೈಂಗಿಕ ಕಾರ್ಯಕರ್ತರು ಕೂಡಾ ಕಾನೂನಿನ ಸಮಾನ ರಕ್ಷಣೆಗೆ ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ. ಇನ್ನು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಮಹತ್ವದ ತೀರ್ಪು ಎನ್ನಲಾಗಿದ್ದು, ವ್ಯಕ್ತಿ ಸ್ವಾತಂತ್ರ್ಯವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ. ನಮ್ಮ ಸಂವಿಧಾನದ 21ನೇ ವಿಧಿಯ ಪ್ರಕಾರ ಎಲ್ಲರಿಗೂ ಸಮಾನ ಕಾನೂನಿನ ರಕ್ಷಣೆ ನೀಡಬೇಕು. ಹೀಗಾಗಿ ಇದರಿಂದ ಲೈಂಗಿಕ ಕಾರ್ಯಕರ್ತರನ್ನು ಹೊರಗಿಡುವುದು ಸೂಕ್ತವಲ್ಲ.

ಅವರು ಕೂಡಾ ಗೌರವಯುತವಾದ ಜೀವನ ನಡೆಸಲು ಕಾನೂನಿನ ರಕ್ಷಣೆ ಹೊಂದಲು ಅರ್ಹರಾಗಿತ್ತಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.