Bangalore: ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ಶರಣಾದ ಆರು ನಕ್ಸಲರು (Naxals) ತಮ್ಮ ಶಸ್ತ್ರಾಸ್ತ್ರಗಳನ್ನು (Weapons) ಕಾಡಿನ ರಹಸ್ಯ ಸ್ಥಳದಲ್ಲಿಯೇ ಅಡಗಿಸಿಟ್ಟಿದ್ದಾರೆ ಎನ್ನಲಾಗಿದ್ದು, ಶಸ್ತ್ರಾಸ್ತ್ರಗಳನ್ನು (Weapons) ವಶಕ್ಕೆ ಪಡೆಯುವ ನಿಟ್ಟಿಯಲ್ಲಿ ಪೊಲೀಸರು ವಿಚಾರಣೆ (Police investigation) ಆರಂಭಿಸಿದ್ದಾರೆ. ಬಾಡಿ ವಾರಂಟ್ (Body warrant) ಪಡೆದು ನಕ್ಸಲರನ್ನು ಕಾಡಿಗೆ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಶರಣಾದ ಆರು ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ (National Investigation Agency) ವಿಶೇಷ ನ್ಯಾಯಾಲಯಕ್ಕೆ (Special Court) ಹಾಜರು ಪಡಿಸುವ ಸಾಧ್ಯತೆ ಇದ್ದು, ಇದಕ್ಕೂ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಕೆಲ ನಕ್ಸಲರು ರಹಸ್ಯ ಸ್ಥಳದಲ್ಲಿ (Naxals in secret place) ಶಸ್ತ್ರಾಸ್ತ್ರಗಳನ್ನು ಅಡಗಿಸಿ ಇಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. AK 47, ಮಿಷಿನ್ ಗನ್ಗಳನ್ನು (AK 47, machine guns) ಇವರು ಬಳಸುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗಿದೆ.
ಪರಪ್ಪನ ಅಗ್ರಹಾರದಲ್ಲಿ ನಕ್ಸಲರು (Naxals in Parappa’s Agrahara) : ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್. ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಅವರನ್ನು ಕೋರ್ಟ್ (Court) ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial custody) ಒಪ್ಪಿಸಿದೆ. ಹೀಗಾಗಿ ನಕ್ಸಲರನ್ನು ಗುರುವಾರ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಕೋರ್ಟ್ಗೆ ಹಾಜರು ಪಡಿಸುವ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ (Health Checkup at Victoria Hospital) ನಡೆಸಲಾಯಿತು. ಶರಣಾದ ನಕ್ಸಲರ ವಿರುದ್ಧವೂ ‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ’(UAPA) ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ (NIA to Special Court) ಹಾಜರುಪಡಿಸಲಾಗಿದೆ.
ಬಂಧಿತ ನಕ್ಸಲರಿಂದ ಪೊಲೀಸರು ಅನೇಕ ಮಹತ್ವದ ವಿವರಗಳನ್ನು ಪಡೆದುಕೊಳ್ಳಬೇಕಿದೆ. ಸಂಘಟನೆಯ ಮಾಹಿತಿ, ಕಾರ್ಯಾಚರಣೆಯ ವಿವರಗಳು, ಶಸ್ತ್ರಾಸ್ತ್ರ ಪೂರೈಕೆ ಜಾಲ, ಕೇರಳದಲ್ಲಿರುವ ನಕ್ಸಲ ನಾಯಕರು (Naxal leaders in Kerala) , ಸಂಪರ್ಕ ಸಾಧನಗಳ ವಿವರ, ಹಣಕಾಸಿನ ವಿವರ ಹೀಗೆ ಅನೇಕ ಮಾಹಿತಿಯನ್ನು ಪೊಲೀಸರು ಶರಣಾಗತರಾದವರಿಂದ ಪಡೆದುಕೊಳ್ಳಬೇಕಿದೆ.