ಮುದ್ದಾದ ನಗುವಿನ ಮೂಲಕವೇ ಗಮನ ಸೆಳೆಯುತ್ತಿದ್ದ ಸುಶಾಂತ್ ಸಿಂಗ್ ರಜಪೂತ್(Sushanth Singh Rajput) ಅವರು ಬಾಲಿವುಡ್ನಲ್ಲಿ(Bollywood) ಸ್ಟಾರ್ ಕಲಾವಿದನಾಗಿ ಮಿಂಚುತ್ತಿದ್ದರು. ಪ್ರೇಕ್ಷಕರ ನೆಚ್ಚಿನ ಹೀರೋ ಆಗಿ ಅವರು ಗುರುತಿಸಿಕೊಂಡಿದ್ದರು. ಆದರೆ ಅವರು ಏಕಾಏಕಿ ಹೀಗೆ ಇಹಲೋಕ ತ್ಯಜಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 2020ರ ಜೂನ್ 14ರಂದು ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಎಲ್ಲರಿಗೂ ಅಘಾತವಾಗಿತ್ತು.

ಆ ಸಂದರ್ಭದಲ್ಲಿ ಸುಶಾಂತ್ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿಯ(Riya Chakraborthy) ಬಗ್ಗೆ ಕೆಲವು ಆರೋಪಗಳು ಕೇಳಿಬಂದಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನಲ್ಲಿ ಮೊದಲ ಬಾರಿ ಆರೋಪ ಕೇಳಿಬಂದಾಗ, ರಿಯಾ ಚಕ್ರವರ್ತಿ ಅವರು ಜೈಲುವಾಸ ಅನುಭವಿಸಬೇಕಾಯಿತು. ಇದಾದ ತಿಂಗಳ ಬಳಿಕ ಅವರು ಜಾಮೀನು ಪಡೆದು ಹೊರಬಂದರು. ಬಳಿಕ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆ ಆರಂಭಿಸಿದ ಸಿಬಿಐ(CBI) ಅಧಿಕಾರಿಗಳಿಗೆ ಡ್ರಗ್ಸ್ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಬಗ್ಗೆ ಹೊಸ ಹೊಸ ಟ್ವಿಸ್ಟ್ ಸಿಗಲು ಶುರುವಾಯಿತು.
ಸುಶಾಂತ್ಗೆ ಡ್ರಗ್ಸ್ ನೀಡಲಾಗಿತ್ತು ಎಂಬ ವಿಚಾರ ಬಯಲಾಯಿತು. ಅವರಿಗೆ ಮಾದಕ ವಸ್ತುಗಳನ್ನು ನೀಡಿದ್ದರಲ್ಲಿ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿ ಸೇರಿದಂತೆ ಅನೇಕರ ಕೈವಾಡ ಇದೆ ಎಂಬ ಬಗ್ಗೆ ತನಿಖೆಯಾಗಿ, ಆ ಕುರಿತು ಎನ್ಸಿಬಿ(NCB) ಇವರ ವಿರುದ್ಧ ಚಾರ್ಜ್ಶೀಟ್(Chargesheet) ಸಲ್ಲಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಸರ್ಪಾಂಡೆ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಆರೋಪಗಳನ್ನು ಉಳಿಸಿಕೊಂಡಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಪಟ್ಟಂತೆ ಡ್ರಗ್ಸ್ ಕೇಸ್(Drugs Case) ವಿಚಾರವಾಗಿ ಈ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಈಗಾಗಲೇ ಆರೋಪಿಗಳಲ್ಲಿ ಕೆಲವರು ದೂರು ವಜಾಗೊಳಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆಯಾದ ನಂತರದಲ್ಲಿ ಈ ಅರ್ಜಿಗಳ ವಿಚಾರಣೆ ನಡೆಸಲಾಗುವುದು. ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿರುವ ವ್ಯಕ್ತಿಗಳು ಕೋರ್ಟ್ ಮುಂದೆ ವಿಚಾರಣೆಗಾಗಿ ಹಾಜರಾಗಬೇಕಿದೆ. ಜುಲೈ 12ರಂದು ರಿಯಾ ಚಕ್ರವರ್ತಿ, ಶೋವಿಕ್ ಸೇರಿದಂತೆ ಆರೋಪಿಗಳು ಕೋರ್ಟ್ಗೆ ಹಾಜರಾಗಬೇಕು.
ಆಗ ಈ ದೂರಿನ ವಿಚಾರಣೆ ನಡೆಯಲಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ವಿ.ಜಿ ರಘುವಂಶಿ ಅವರು ಜುಲೈ 12 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು.