Bangalore : ಪಿಯುಸಿ (PUC) ವಿದ್ಯಾರ್ಥಿನಿ ಪ್ರಬುದ್ದ (Prabudda) ಅನುಮಾನಾಸ್ಪದ ಸಾವು ಪ್ರಕರಣವು ಎಲ್ಲರನ್ನು ಆತಂಕಕ್ಕೆ ದೂಡುವಂತೆ ಮಾಡಿತ್ತು. ಮನೆಯ ಬಾತ್ ರೂಂನಲ್ಲಿ 21 ವರ್ಷದ ಪ್ರಬುದ್ಧ ಕುತ್ತಿಗೆ ಕೊಯ್ದುಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಳು (died) . ಸದ್ಯ ಈ ಅನುಮಾನಾಸ್ಪದ ಸಾವಿನ (Death) ಕುರಿತು ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಬುದ್ದ ಮೊಬೈಲ್ ಅನ್ನು ಸೀಜ್ ಮಾಡಿದ್ದಾರೆ.

ಮರಣೋತ್ತರ ಪರೀಕ್ಷೆ (Postmortem examination)
ಆದರೆ ಅದಕ್ಕೂ ಮೊದಲು ವೈದ್ಯರಿಂದ (Doctors) ಮೃತದೇಹದ ಮರಣೋತ್ತರ ಪರೀಕ್ಷೆ ಬಗ್ಗೆ ಮೌಖಿಕ ಒಪಿನಿಯನ್ ಪೊಲೀಸರು ಪಡೆದಿದ್ದಾರೆ. ಮತ್ತೊಂದೆಡೆ ಮೃತ ವಿದ್ಯಾರ್ಥಿನಿ ಮೊಬೈಲ್ (Student Mobile) ನಲ್ಲಿ ಅಸಲಿ ಸತ್ಯ ತಿಳಿಯಲು ಪೊಲೀಸರು ಭೇದಿಸಲು ಹೊರಟಿದ್ದಾರೆ. ಕೊಲೆಯೋ, ಆತ್ಮಹತ್ಯೆಯೋ ಅನ್ನೊದು ವೈದ್ಯರ ಒಪಿನಿಯನ್ ಹಾಗೂ ವರದಿಯಿಂದ ಗೊತ್ತಾದ್ರೆ, ಘಟನೆ ಹಿಂದಿನ ಅಸಲಿ ಕಾರಣ ಮೊಬೈಲ್ ಪರಿಶೀಲನೆಯಿಂದ ಹೊರಬೀಳೋ ಸಾಧ್ಯತೆಯಿದೆ.
ಸಿಕ್ತು ಮೂರು ಡೆತ್ ನೋಟ್ (Death notes)
ಪ್ರಬುದ್ಧ ಸಾವಿನ ಕುರಿತು ತನಿಖೆ (Investigation) ಕೈಗೊಂಡ ಪೊಲೀಸರಿಗೆ ಮೂರು ಡೆತ್ ನೋಟ್ (Death Note) ಸಿಕ್ಕಿದೆ. ಸದ್ಯ ಈ ಡೆತ್ ನೋಟ್ ಪೊಲೀಸರ ತನಿಖೆಗೆ ಸವಾಲಾಗಿದೆ. ‘ಅಮ್ಮಾ ಸಾರಿ’ ಎಂದು ಮೂರು ಡೆತ್ ನೋಟ್ನಲ್ಲೂ ಬರೆಯಲಾಗಿದೆ ಎನ್ನಲಾಗುತ್ತಿದೆ. ಸದ್ಯ ಆ ಡೆತ್ ನೋಟ್ ನಲ್ಲಿರೋ ಅಕ್ಷರಗಳಿಗೂ ಮೃತ ಪ್ರಬುದ್ದ ನೋಟ್ ಬುಕ್ ನ ಈ ಹಿಂದಿನ ಬರವಣಿಗೆಗೂ ಮ್ಯಾಚ್ ಆಗ್ತಿಲ್ಲ ಎನ್ನಲಾಗ್ತಿದೆ.
ಸುಬ್ರಹ್ಮಣ್ಯ ಪುರ ಪೊಲೀಸರು (Subrahmanyapur Police) ಮನೆಯಲ್ಲಿ ದೊರೆತಿರೋ ಮೂರು ಡೆತ್ ನೋಟ್ ಹಾಗೂ ಮೃತ ಪ್ರಬುದ್ದ ಹಳೆಯ ಕೈ ಬರವಣಿಗೆಯನ್ನ ಸಾಮ್ಯತೆಗೆ ಎಫ್.ಎಸ್.ಎಲ್ (F.S.L) ಗೆ ಕಳಿಸಲು ಮುಂದಾಗಿದ್ದಾರೆ. ಡೆತ್ ನೋಟ್ ನಲ್ಲಿನ ಬರಹ ಪ್ರಬುದ್ದಳದ್ದೇನಾ ಅಥವಾ ಬೇರೆಯದ್ದ ಅನ್ನೊದು ಎಫ್.ಎಸ್.ಎಲ್ ರಿಪೋರ್ಟ್ (Report) ನಿಂದ ಗೊತ್ತಾಗಲಿದೆ.
ಇದರ ಜೊತೆಗೆ ನಿನ್ನೆ ಮಧ್ಯಾಹ್ನ 1:30 ಕ್ಕೆ ಪ್ರಬುದ್ದ ಮನೆಯೊಳಗೆ (Prabudda House) ಹೋದಾಗಿನಿಂದ 3:30 ಕ್ಕೆ ಶವವಾಗಿ ಪತ್ತೆಯಾಗಿರೋವರೆಗಿನ ಎರಡು ತಾಸುಗಳ ಎಲ್ಲ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳನ್ನ ಪೊಲೀಸರು ಸಿಸಿಟಿವಿ ಮೂಲಕ ಮಾನಿಟರ್ ಮಾಡುತ್ತಿದ್ದಾರೆ. ಪ್ರಬುದ್ದ ವಾಸವಿದ್ದ ನಿವಾಸ ಬೃಂದಾವನ್ ಲೇಔಟ್ (Brindavan Layout) ಮನೆಯ ಸುತ್ತಮುತ್ತಲು ರಸ್ತೆಯ ನೂರಕ್ಕೂ ಹೆಚ್ಚು ಸಿಸಿಟಿವಿ ಡಿವಿಆರ್ (CCTV DVR) ಪರಿಶೀಲನೆ ನಡೆಸಿದ್ದಾರೆ.