Calcutta : ತೃಣಮೂಲ ಕಾಂಗ್ರೆಸ್(TMC) ಸಂಸದ ದೇವ್ ಅವರು ಜಾನುವಾರು ಕಳ್ಳಸಾಗಣೆ ಆರೋಪಿಗಳಿಂದ 5 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಪಶ್ಚಿಮ ಬಂಗಾಳ(West Bengal) ಬಿಜೆಪಿ ನಾಯಕ ಸುವೇಂದು ಅಧಿಕಾರಿ(Suvendu Adhikari Allegation) ಆರೋಪಿಸಿದ್ದಾರೆ.

ಗಡಿಯಾಚೆಗಿನ ಜಾನುವಾರು ಕಳ್ಳಸಾಗಣೆ ದಂಧೆಯ ಪ್ರಮುಖ ಆರೋಪಿ ಎಂಡಿ ಇನಾಮುಲ್ ಹಕ್‌ನಿಂದ ನಟ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ (Suvendu Adhikari Allegation) ದೇವ್ ಅವರು 5 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದು,
ಬಂಗಾಳಿ ನಟ ಮತ್ತು ತೃಣಮೂಲ ಸಂಸದ ದೇವ್ (ದೀಪಕ್ ಅಧಿಕಾರಿ) ಅಪರಾಧದ ಆದಾಯವನ್ನು ಎನಾಮುಲ್‌ನಿಂದ ಚಲನಚಿತ್ರ ಮಾಡಲು ತೆಗೆದುಕೊಂಡಿದ್ದಾರೆ.
ಅವರ ಖಾತೆಗೆ ಹಣ ವರ್ಗಾವಣೆಯಾಗಿದೆ. ಆದರೆ ಸಿನಿಮಾ ನಿರ್ಮಾಣಕ್ಕೆ ಹಣ ತೆಗೆದುಕೊಂಡಿದ್ದೇನೆ ಎಂದು ಅದನ್ನು ತೋರಿಸುತ್ತಿದ್ದಾರೆ ಎಂದು ಸುವೇಂದ್ರ ಅಧಿಕಾರಿ ಹೇಳಿದ್ದಾರೆ.
https://youtu.be/cZaD2xSJotQ ಸಾಲು ಸಾಲು ಸಮಸ್ಯೆಗಳಿಂದ ಕೂಡಿದೆ ಅಜ್ಜೀಪುರ ಗ್ರಾಮ.
ಇನ್ನು ಕೇಂದ್ರೀಯ ತನಿಖಾ ದಳ(CBI) 2020ರಲ್ಲಿ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಟಿಎಂಸಿ ಬಿರ್ಭಮ್ ಜಿಲ್ಲಾ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಆಪ್ತ ಸಹಾಯಕ ಅನುಬ್ರತಾ ಮೊಂಡಲ್ ಅವರನ್ನು ಬಂಧಿಸಿತ್ತು.
2023ರ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗೆ ಮುನ್ನವೇ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಡಲಿದೆ ಎಂಬುದಕ್ಕೆ ಮುನ್ನೆಚ್ಚರಿಕೆ ವಹಿಸುವ ಮೂಲಕ ವಾಗ್ದಾಳಿ ನಡೆದಿದೆ.
https://vijayatimes.com/non-bailable-warrant/
ತೃಣಮೂಲ ಕಾಂಗ್ರೆಸ್ ಸಂಸದ ದೇವ್‌ವಿರುದ್ದ ಬಿಜೆಪಿ ನಾಯಕ ಸುವೇಂದ್ರ ಅಧಿಕಾರಿ ಮಾಡಿರುವ ಈ ಆರೋಪ ಪಶ್ಚಿಮ ಬಂಗಾಳ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.

ಈ ಆರೋಪವನ್ನು ಟಿಎಂಸಿ ತಳ್ಳಿ ಹಾಕಿದ್ದು, ಪಂಚಾಯತ್ ಚುನಾವಣೆ ದೃಷ್ಟಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಈ ಆರೋಪಗಳನ್ನು ಮಾಡುತ್ತಿದೆ ಎಂದಿದೆ. ಈ ಕುರಿತು ತನಿಖೆ ನಡೆಸುವಂತೆ ಸುವೇಂದ್ರ ಅಧಿಕಾರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
- ಮಹೇಶ್.ಪಿ.ಎಚ್