Calcutta : ಪಶ್ಚಿಮ ಬಂಗಾಳದ (West Bengal) ಮೊಮಿನ್‌ಪುರ ಹಿಂಸಾಚಾರದ (Violence) ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ (Suvendu Adikari),

ಶುಕ್ರವಾರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಹಿಂದೂಗಳನ್ನು ಕೆಲವು ಪ್ರದೇಶಗಳಿಂದ ತೆಗೆದುಹಾಕಲು ಬಯಸಿದೆ ಎಂದು ಆರೋಪಿಸಿದ್ದಾರೆ.
ಟಿಎಂಸಿ ಅವರು ಮೊಮಿನ್‌ಪುರ, ಇಕ್ಬಾಲ್‌ಪುರ್ ಮತ್ತು ಖಿದಿರ್‌ಪುರದಿಂದ ಹಿಂದೂಗಳನ್ನು ತೊಡೆದುಹಾಕಲು ಬಯಸುತ್ತಿದ್ದಾರೆ.
ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮತಬ್ಯಾಂಕ್(Vote Bank) ರಾಜಕೀಯವಾಗಿದೆ. ಹಿಂದೂ ಮತಗಳು ಬಿಜೆಪಿಯತ್ತ(BJP) ಹೋಗುತ್ತಿವೆ,
ಮತ್ತು ಸಿಎಂ ಬ್ಯಾನರ್ಜಿ ಅವರು ಬೆದರಿಕೆ ಮತ್ತು ಕೋಮು ಪ್ರಚಾರ ಮಾಡುವ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಸುವೆಂದು ಅಧಿಕಾರಿ ಟಿಎಂಸಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : https://vijayatimes.com/first-bone-bank-in-indore/
ಈ ಹಿಂದೆ, ಈ ಪ್ರದೇಶದಲ್ಲಿ ಕೇಂದ್ರ ಪಡೆಗಳನ್ನು ತುರ್ತು ನಿಯೋಜನೆಗೆ ಒತ್ತಾಯಿಸಿ ಸುವೆಂದು ಅಧಿಕಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗವರ್ನರ್ ಲಾ ಗಣೇಶನ್ ಅವರಿಗೆ ಪತ್ರ ಬರೆದಿದ್ದರು.
ಲಕ್ಷ್ಮಿ ಪೂಜೆಯ ಬಳಿಕ ಕೋಲ್ಕತ್ತಾದ ಖಿದಿರ್‌ಪೋರ್, ಮೊಮಿನ್‌ಪುರ್ ಪ್ರದೇಶದಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಗೂಂಡಾಗಳು ಮತ್ತು ಸಮಾಜ ವಿರೋಧಿಗಳು ಹಿಂದೂಗಳಿಗೆ ಸೇರಿದ ಅನೇಕ ಅಂಗಡಿಗಳು ಮತ್ತು ಬೈಕ್‌ಗಳನ್ನು ಧ್ವಂಸಗೊಳಿಸಿದ್ದಾರೆ.
ಹೌರಾ ಜಿಲ್ಲೆಯ ಉಲುಬೇರಿಯಾ ಪ್ರದೇಶದಲ್ಲಿ ಜೂನ್‌ನಲ್ಲಿ ನಡೆದ ಪಂಚ್ಲಾ ಹಿಂಸಾಚಾರಕ್ಕೆ ಈ ದಾಳಿಯು ಹೋಲಿಕೆಯನ್ನು ಹೊಂದಿದೆ. ಆ ಸಮಯದಲ್ಲಿ,
ಹಿಂಸಾಚಾರವು ಪಶ್ಚಿಮ ಬಂಗಾಳದಾದ್ಯಂತ, ವಿಶೇಷವಾಗಿ ನಾಡಿಯಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಹರಡಿತು ಎಂದು ಉಲ್ಲೇಖಿಸಿ ಬರೆದಿದ್ದಾರೆ.

ಈ ನಡುವೆ ಮೋಮಿನ್‌ಪುರ ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಕೊಲ್ಕತ್ತಾ ಹೈಕೋರ್ಟ್ ಬುಧವಾರ ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶನ ನೀಡಿದೆ. ತನಿಖೆಯ ನಂತರ, ಎಸ್‌ಐಟಿ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ.
ಇನ್ನು ಮುಂದೆ ಯಾವುದೇ ಹಿಂಸಾಚಾರ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ಕೊಲ್ಕತ್ತಾ ಹೈಕೋರ್ಟ್(Calcutta Highcourt) ನಿರ್ದೇಶನ ನೀಡಿದೆ.
ಮಿಲಾದ್-ಉನ್-ನಬಿ ಹಬ್ಬಕ್ಕಾಗಿ ಪ್ರದೇಶದಲ್ಲಿ ಹಾಕಲಾದ ಧಾರ್ಮಿಕ ಧ್ವಜಗಳನ್ನು ಹರಿದು ಹಾಕಲಾಗಿದೆ ಎಂದು ಆರೋಪಿಸಿ ಮೊಮಿನ್‌ಪುರದಲ್ಲಿ ಭಾನುವಾರ ಉದ್ವಿಗ್ನತೆ ಉದ್ಬವಗೊಂಡಿತು.
https://youtu.be/UZ1NRbXEu2g ಖಾಸಗಿ ಸಂಸ್ಥೆ ಪಾಲಾದ ರುದ್ರಭೂಮಿ.
ಇದು ಶೀಘ್ರದಲ್ಲೇ ಹಲವಾರು ವಾಹನಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುವುದರೊಂದಿಗೆ ಹಿಂಸಾಚಾರಕ್ಕೆ ತಿರುಗಿತು.