ಆರೋಗ್ಯದ ಧನ್ವಂತರಿ ಎಂದು ಸಿಹಿಗೆಣಸನ್ನು (Sweet potato) ಕರೆಯಬಹುದು ಯಾಕೆಂದರೆ ಈ ಸಿಹಿ ಗೆಣಸು ಮಾರುಕಟ್ಟೆಯಲ್ಲಿ ಯಾವಾಗಲು ಸಿಗುತ್ತದೆ.ಈ ಸಿಹಿಗೆಣಸಿನಲ್ಲಿ ಸಾಕಷ್ಟು ಆರೋಗ್ಯ ಗುಣಗಳು (Health properties) ಅಡಗಿದೆ.ಎಲ್ಲ ರೀತಿಯನ್ನು ಜನರ ಆರೋಗ್ಯವನ್ನು ಸಿಹಿ ಗೆಣಸು (Sweet potato) ಕಾಪಾಡುತ್ತದೆ.ಆಯುರ್ವೇದದ (Ayurveda) ಪದ್ಧತಿ ಪ್ರಕಾರ ಸಿಹಿಗೆಣಸು ಆರೋಗ್ಯಕ್ಕೆ ರಾಮಬಾಣ.ಯಾರು ಹೆಚ್ಚಾಗಿ ಸಿಹಿಗೆಣಸು ಅವರು ಕಣ್ಣಿನ ಸಮಸ್ಯೆ (Eye problem), ಕರುಳಿನ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಸಿಹಿಗೆಣಸಿನಲ್ಲಿ ಬೀಟಾ ಕ್ಯಾರೋಟಿನ್ (Beta carotene) ಪ್ರಮಾಣವನ್ನುಹೆಚ್ಚಾಗಿದ್ದು ಇದು ನಮ್ಮ ದೇಹದಲ್ಲಿ ವಿಟಮಿನ್ ಎ (Vitamin A) ಆಗಿ ಬದಲಾಗುತ್ತದೆ ಹಾಗೂ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.ಜೀರ್ಣಾಂಗ ವ್ಯವಸ್ಥೆಯಲ್ಲಿ ಸಿಹಿಗೆಣಸು ಸಕಾರಾತ್ಮಕ ಪರಿಣಾಮ ಬೀರುತ್ತದೆ.ಸಿಹಿ ಗೆಣಸಿನಲ್ಲಿ ನಾರಿನಂಶ (fiber) ಹೆಚ್ಚಾಗಿದ್ದು ಇದು ಮಲಬದ್ಧತೆ (Constipation) ಸಮಸ್ಯೆಯನ್ನು ದೂರಮಾಡುತ್ತದೆ.
ಸಿಹಿ ಗೆಣಸಿನಲ್ಲಿ ಸಿಹಿ ಸೂಚ್ಯಂಕ ಕಡಿಮೆ ಇದ್ದು, ರಕ್ತದಲ್ಲಿ ನಿಧಾನವಾಗಿ ಗ್ಲುಕೋಸ್ (Glucose) ಬಿಡುಗಡೆ ಆಗುವಂತೆ ನೋಡಿಕೊಳ್ಳುತ್ತದೆ.ಇದು ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.ಮಾರುಕಟ್ಟೆಯಲ್ಲಿ ಸಿಗುವ ನೆರಳೆ ಬಣ್ಣದ ಸಿಹಿ ಗೆಣಸು ಕ್ಯಾನ್ಸರ್ (Cancer) ಕಾಯಿಲೆ ಬರದಂತೆ ತಡೆಗಟ್ಟುವ ಗುಣ ಹೊಂದಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಇದರಲ್ಲಿರುವ ಕ್ಯಾರೋಟಿನ್ ಅಂಶಗಳು (Carotene elements)v ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಪಡೆದಿವೆ.ಸಿಹಿಗೆಣಸು ಹೃದಯದ ಆರೋಗ್ಯಕ್ಕೂ ಸಹ ಒಳ್ಳೆಯದು.