Viral News : ನಮಗೆ ಮುಟ್ಟಿನ ಸಮಸ್ಯೆ(Menstrual problem) ಎದುರಾದಾಗ ಬಹುತೇಕ ಎಲ್ಲರೂ ಚಾಕೊಲೇಟ್ ಅಥವಾ ಸಿಹಿ ಸವಿಯಲು ಹಂಬಲಿಸುತ್ತೇವೆ. ಈ ನಮ್ಮ ಭಾವನೆಯನ್ನು (Swiggy sent free chocolates) ಅರ್ಥೈಸಿಕೊಂಡು ಸ್ವಿಗ್ಗಿ ಇನ್ಸ್ಟಾಮಾರ್ಟ್(Swiggy Instamart)
ನನಗೆ ಸ್ಯಾನಿಟರಿ ಪ್ಯಾಡ್ಸ್ ಜೊತೆಗೆ ಚಾಕಲೇಟ್ ಕೂಕಿಯನ್ನು ಕಳಿಸಿಕೊಟ್ಟಿದೆ ಎಂದು ಸಮೀರಾ(Sameera) ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಇದು ನಮ್ಮ ಮನೋಸ್ಥೈರ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುವುದಲ್ಲದೆ, ಮುಟ್ಟಿನ ಸೆಳೆತವನ್ನು ಸಹ ಸರಾಗಗೊಳಿಸುತ್ತವೆ.
ಚಾಕೊಲೇಟ್‌ಗಳು ನಮಗೆ ಮುಟ್ಟಿನ ನೋವುಗಳನ್ನು ಕಡಿತಗೊಳಿಸುವಲ್ಲಿ ಒಂದು ರೀತಿ ಕೆಲಸ ಮಾಡುತ್ತದೆ.
ಇದನ್ನು ಪರಿಗಣಿಸಿ, ಸ್ವಿಗ್ಗಿ ಸಂಸ್ಥೆ ತನ್ನ ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ನಾನು ಆರ್ಡರ್ ಮಾಡಿದ್ದ ಸ್ಯಾನಿಟರಿ ಪ್ಯಾಡ್‌ಗಳ ಜೊತೆ ಚಾಕೊಲೇಟ್ ಕುಕೀಗಳನ್ನು ನನಗೆ ಕಳಿಸಿಕೊಟ್ಟಿದೆ.
ಆರ್ಡರ್ ನನಗೆ ತಲುಪಿದಾಗ ನಾನು ಅದನ್ನು ಸ್ವೀಕರಿಸಿದ ಬಳಿಕ ತೆರೆದು ನೋಡಿದಾಗ ನನಗೆ ಅಚ್ಚರಿ ಕಾದಿತ್ತು!
ನಾನು ಅದನ್ನು ಸ್ವೀಕರಿಸಿದಾಗ ನನಗೆ ಸ್ಯಾನಿಟರಿ ಪ್ಯಾಡ್ ಜೊತೆಗೆ ಒಂದು ಚಾಕಲೇಟ್ ಕೂಕಿ ಬುತ್ತಿ ಕೂಡ ಇತ್ತು. ಇದನ್ನು ನೋಡಿದಾಗ ನಿಜಕ್ಕೂ ನನಗೆ ಸಂತಸವಾಯಿತು ಎಂದು ಸಮೀರಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಾನೀಗ ಸ್ಟ್ರಾಂಗ್ ವುಮನ್ ಆಗಿದ್ದೇನೆ : ವರ್ಕೌಟ್ ವಿಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಇನ್ನು ಈ ಬಗ್ಗೆ ಟ್ವೀಟ್ (Tweet)ಮಾಡಿರುವ ಅವರು, “ನಾನು ಸ್ವಿಗ್ಗಿ ಇನ್ಸ್ಟಾಮಾರ್ಟ್ @SwiggyInstamart ನಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು(Sanitary pad) ಆರ್ಡರ್ ಮಾಡಿದೆ ಮತ್ತು ಬ್ಯಾಗ್‌ನ ಕೆಳಭಾಗದಲ್ಲಿ ಚಾಕೊಲೇಟ್ ಕೂಕಿಗಳ ಬುತ್ತಿ ಇರುವುದನ್ನು ನೋಡಿದೆ.
ನಿಜಕ್ಕೂ ಅಚ್ಚರಿಯಾಯಿತು! ಆದರೆ ಇದನ್ನು ಸ್ವಿಗ್ಗಿ ಮಾಡಿದೆಯೋ? ಅಥವಾ ಅಂಗಡಿಯವರು ಮಾಡಿದ್ದಾರೋ? ನನಗೆ ತಿಳಿದಿಲ್ಲ ಮತ್ತು ಈ ಬಗ್ಗೆ ಖಚಿತ ಇಲ್ಲ ಎಂದು ಸ್ವಿಗ್ಗಿಯನ್ನು ಟ್ಯಾಗ್ ಮಾಡಿ ಸಮೀರಾ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ನೋಡುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಸ್ವಿಗ್ಗಿ ಸಂಸ್ಥೆ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿ ಉತ್ತರಿಸಿದ್ದು, ಸ್ವಿಗ್ಗಿ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತದೆ.
ನೀವು ಮುಂದೆ ಆಹ್ಲಾದಕರ ದಿನವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ, ಸಮೀರ ಎಂದು ಬರೆದು ಪೋಸ್ಟ್(Post) ಮಾಡಿ ತಿಳಿಸಿದೆ. ಈ ಒಂದು ಟ್ವೀಟ್‌ಗೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ವಿಗ್ಗಿ ಸಂಸ್ಥೆಯ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದೆ.