T20 World Cup 2024: ಟಿ20 ವಿಶ್ವಕಪ್ ಟೂರ್ನಿಯು ಜೂನ್ (June) 2ರಿಂದ ಆರಂಭವಾಗಲಿದ್ದು, ಈ ಬಾರಿ ಒಟ್ಟು 20 ತಂಡಗಳು ಭಾಗವಹಿಸುತ್ತಿದೆ. ಮೊದಲ ಹಂತದಲ್ಲಿ ಎಲ್ಲ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಆಯಾ ಗುಂಪಿನಲ್ಲಿರುವ ತಂಡಗಳ ನಡುವೆ 4 ಲೀಗ್ ಪಂದ್ಯಗಳು ನಡೆಯಲಿವೆ. ಈ ಹಂತದಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದು ಸೂಪರ್ 08 ಪಂದ್ಯಗಳನ್ನು ಆಡಲಿವೆ.
ಈ ಬಾರಿಯ T20 World Cupನ್ನು ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ರಾಷ್ಟ್ರಗಳು ಜಂಟಿಯಾಗಿ ನಡೆಸುತ್ತಿದ್ದು,ಮೊದಲ ಲೀಗ್ ಹಂತದ ಕೆಲವು ಪಂದ್ಯಗಳಿಗೆ USA ಆತಿಥ್ಯವಹಿಸಿದ್ರೆ, ಇನ್ನು ಸೂಪರ್ – 8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ (West Indies) ಜರುಗಲಿವೆ. ಇನ್ನು ಈ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ನಾಳೆ ಅಂದರೆ ಜೂನ್ 2ರಿಂದ ಶುರುವಾಗಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಸ್ಎ ಹಾಗೂ ಕೆನಡಾ ತಂಡಗಳು ಮೊದಲ ಪಂದ್ಯವನ್ನು ನ್ಯೂಯಾರ್ಕ್ (New York) ನಲ್ಲಿ ಆಡಲಿವೆ.
ಇನ್ನು ಟೀಮ್ ಇಂಡಿಯಾ (Team India) ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ದ ಆರಂಭಿಸಲಿದೆ. ಜೂನ್ 5 ರಂದು ನಡೆಯಲಿರುವ ಈ ಪಂದ್ಯಕ್ಕೆ ನ್ಯೂಯಾರ್ಕ ನಗರದ ನಸ್ಸೌ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಲಿದೆ.
ಭಾರತ vs ಪಾಕಿಸ್ತಾನ ರೋಚಕ ಪಂದ್ಯ :
ಇನ್ನು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್ 9 ರಂದು ಮುಖಾಮುಖಿಯಾಗಲಿದ್ದು, ಈ ಪಂದ್ಯವೂ ಸಹ ನ್ಯೂಯಾರ್ಕನ ನಸ್ಸೌ ಸ್ಟೇಡಿಯಂ (Nassau Stadium) ನಲ್ಲೇ ನಡೆಯಲಿದೆ. ಈ ಪಂದ್ಯವೂ ಸಹ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಈ ಪಂದ್ಯವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.
ಭಾರತದ ಲೀಗ್ ಪಂದ್ಯಗಳು :
ಜೂನ್ 5 – ಭಾರತ vs ಐರ್ಲೆಂಡ್ – ನ್ಯೂಯಾರ್ಕ್
ಜೂನ್ 9 – ಭಾರತ vs ಪಾಕಿಸ್ತಾನ್ – ನ್ಯೂಯಾರ್ಕ್
ಜೂನ್ 12 – ಯುಎಸ್ಎ vs ಭಾರತ – ನ್ಯೂಯಾರ್ಕ್
ಜೂನ್ 15 – ಭಾರತ vs ಕೆನಡಾ – ಲಾಡರ್ಹಿಲ್
ಮೊದಲ ನಾಲ್ಕು ಲೀಗ್ ಪಂದ್ಯಗಳ ಬಳಿಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವ 2 ತಂಡಗಳು ಸೂಪರ್-8 ಹಂತಕ್ಕೇರಲಿವೆ. ನಂತರ 8 ತಂಡಗಳ ನಡುವೆ ಸೂಪರ್-8 ಪಂದ್ಯಗಳು ನಡೆಯಲಿದ್ದು,ಇದರಲ್ಲಿ ಮೊದಲ ೪ ತಂಡಗಳು ಸೆಮಿಫೈನಲ ನ್ನು ಆಡಲಿವೆ. ಆ ಬಳಿಕ ಸೆಮಿಫೈನಲ್ (Semifinal) ಪಂದ್ಯಗಳು 27 ಜೂನ್ ಮತ್ತು ಫೈನಲ್ ಪಂದ್ಯ ಜೂನ್ 29 ರಂದು ನಡೆಯಲಿವೆ.
ಈ ಬಾರಿಯ ಭಾರತ ಟಿ20 ವಿಶ್ವಕಪ್ ತಂಡ ಇಂತಿದೆ : ರೋಹಿತ್ ಶರ್ಮಾ (Rohit Sharma) (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಮೀಸಲು ಆಟಗಾರರು: ಶುಭ್ಮನ್ ಗಿಲ್ (Shubhman Gil), ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.
ಶಿವಪ್ರಸಾದ್