ಮುಂಬೈ ಆ 18 : ಕೊರೊನಾ ಸೋಂಕು ಕೊಂಚ ಇಳಿಕೆಯಾದ ಹಿನ್ನಲೆಯಲ್ಲಿ ಐಸಿಸಿ ಇಗಾಗಲೇ ಟಿ20 ವಿಶ್ವಕಪ್ ಗೆ ವೇಳಾಪಟ್ಟಿ ಕೂಡ ಬಿಡುಗಡೆಗೊಳಿಸಿದೆ. ಈ ಹಿನ್ನಲೆಯಲ್ಲಿ ಎಲ್ಲಾ ತಂಡಗಳು ಮಹತ್ವದ ಟೂರ್ನಿಗೆ ಸಜ್ಜುಗೊಂಡಿದ್ದು, ಬಿಸಿಸಿಐ ಕೂಡ ಬಲಿಷ್ಠ 15 ಮಂದಿ ಆಟಗಾರರ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.
ಈ ನಡುವೆ ಗಾಯದಿಂದ ಚೇತರಿಸಿಕೊಂಡು ಸಾಕಷ್ಟು ಸಮಯದ ಬಳಿಕ ತಂಡ ಸೇರಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ಪಂದ್ಯಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ನೀಡದಿರುವುದು ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಹಾರ್ದಿಕ್ ಸ್ಥಾನಕ್ಕೆ ಆಲ್ ರೌಂಡರ್ ಗಳ ಪಟ್ಟಿಯಲ್ಲಿ 3 ಮಂದಿ ಪ್ರತಿಭಾನ್ವಿತ ಆಟಗಾರರಿದ್ದು ಈ ಆಟಗಾರರ ಪೈಕಿ, ಕಳೆದ ಹಲವು ತಿಂಗಳಿನಿಂದ ಉತ್ತಮ ಫಾರ್ಮ್ ನಲ್ಲಿರುವ ಶಿವಂ ದುಬೆ ಮೊದಲ ರೇಸ್ ನಲ್ಲಿದ್ದಾರೆ. ಎರಡನೆದಾಗಿ ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ದೀಪಕ್ ಚಹಾರ್ ಕೂಡ ಇದ್ದು, ಜೊತಗೆ ಕಳೆದ ಕೆಲವು ಪಂದ್ಯಗಳಿಂದ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಮಿಂಚುತ್ತಿರುವ ಶಾರ್ದೂಲ್ ಠಾಕೂರ್ ಕೂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ರೇಸ್ನಲ್ಲಿ ಇದ್ದಾರೆ. ಈ ಮೂವರು ಆಟಗಾರರಲ್ಲಿ ಯಾರಿಗೆ ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಸ್ಥಾನ ದೊರೆಯುತ್ತದೆ ಎಂಬುವುದು ಶೀಘ್ರದಲ್ಲೇ ಬಿಸಿಸಿಐನಿಂದ ತಿಳಿಯಲಿದೆ.