Visit Channel

20 years of PM Narendra Modi in power

ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಜೀವನಕ್ಕೆ 20 ವರ್ಷ

 13 ವರ್ಷ ಮುಖ್ಯ​ಮಂತ್ರಿ​ಯಾಗಿ ಅಧಿಕಾರ ನಿರ್ವಹಿಸಿದ್ದು, 7 ವರ್ಷ​ದಿಂದ ಪ್ರಧಾನಿ ಹುದ್ದೆ​ಯಲ್ಲಿ ಕೆಲ​ಸ ಮಾಡುತ್ತಿದ್ದಾರೆ. 2001ರಿಂದ 2014ರವರೆಗೆ ಗುಜರಾತ್​​ನ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಅವರು, ಅಲ್ಲಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಎಂಪಿ ಸೀಟ್​​ನಿಂದ ಗೆದ್ದು ಪ್ರಧಾನಮಂತ್ರಿ ಹುದ್ದೆಗೆ ಏರಿದರು. 20 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜಕೀಯದಲ್ಲಿ ತನ್ನ 20 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ವಿಡಿಯೋ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದೆ.