alert

ಡೆಲ್ಟಾ ರೂಪಾಂತರಿ ವೈರಸ್‌ ಪತ್ತೆ, ಡೆಲ್ಟಾಗಿಂತಲೂ ಶೇ 10ರಷ್ಟು ವೇಗವಾಗಿ ಹರಡಬಲ್ಲ ವೈರಸ್‌

ಕಳೆದ ವಾರ ಬ್ರಿಟನ್ ಆರೋಗ್ಯ ಭದ್ರತಾ ಏಜೆನ್ಸಿ ಡೆಲ್ಟಾ ರೂಪಾಂತರಿಯ ಸಬ್ ಟೈಪ್ ಕೊರೋನಾ ವೈರಾಣು ದೇಶದಲ್ಲಿ ಹರಡುತ್ತಿರುವುದನ್ನು ಘೋಷಿಸಿತ್ತು. ಅಮೆರಿಕಾದ ಬಳಿಕ ಬ್ರಿಟನ್ ಜಾಗತಿಕವಾಗಿ ಅತಿ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳನ್ನು ವರದಿ ಮಾಡುತ್ತಿರುವ ರಾಷ್ಟ್ರವಾಗಿದೆ. ಸೆ.27 ರಂದು ಪ್ರಾರಂಭವಾದ ವಾರದಲ್ಲಿ ಸಾರ್ಸ್ ಸಿಒವಿ2 ನ ಎಲ್ಲಾ ಜೆನೆಟಿಕ್ ಸೀಕ್ವೆನ್ಸ್ ಗಳ ಪೈಕಿ ಹೊಸದಾಗಿ ಪತ್ತೆಯಾಗಿರುವ ವೈರಾಣು ತಳಿ ಶೇ.6 ರಷ್ಟು ಇದೆ.