Visit Channel

Aryan Khan

aryan khan

ಶಾರೂಖ್ ಖಾನ್ ಪುತ್ರನಿಗೆ ಕ್ಲೀನ್ ಚಿಟ್ ; ನನ್ನ ಕ್ಷಮಿಸಿ ನಾನು ಉತ್ತರಿಸಲಾರೆ : ಸಮೀರ್ ವಾಂಖಡೆ!

ಸಮೀರ್ ವಾಂಖೆಡೆ(Sameer Whankade), ಈ ಪ್ರಕರಣದಲ್ಲಿ ಸ್ಟಾರ್ ಮಗನಿಗೆ ಕ್ಲೀನ್ ಚಿಟ್(Clean Chit) ನೀಡಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೊರ ನಡೆದಿದ್ದಾರೆ.

ಆರ್ಯನ್‌ ಬೆನ್ನಿಗೆ ನಿಂತ ನಟಿ ರಮ್ಯಾ

ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ಆರ್ಯನ್ ಖಾನ್ ಬಳಿ ಮಾದಕ ವಸ್ತು ಇರುವುದಕ್ಕೆ ಅಥವಾ ಆರ್ಯನ್ ಮಾದಕ ವಸ್ತು ಸೇವಿಸಿದ್ದರ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರನ್ನು ಬಂಧಿಸಿ, ವಿಚಾರಣೆ ಮಾಡಲಾಗಿದೆ. ಆದರೆ, ಕೇಂದ್ರ ಸಚಿವರ ಪುತ್ರ ಕಾರು ಚಲಾಯಿಸಿ, ನಾಲ್ವರು ರೈತರನ್ನು ಕೊಲೈಗೈದಿದ್ದಾನೆ ಮತ್ತು ಆದಾಗ್ಯೂ ಆತ ಆರಾಮಾಗಿ ಓಡಾಡಿಕೊಂಡಿದ್ದಾನೆ. ಯಾಕೆ ಆತನ ಬಂಧನ ಇನ್ನೂ ಆಗಿಲ್ಲ? ಯಾವುದೇ ಮಾಹಿತಿ ನೀಡದೆ, ಮೃತ ರೈತರ ಕುಟುಂಬದವರನ್ನು ಭೇಟಿಯಾಗಲು ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸುತ್ತೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟದಿಂದ ದೇಶ ನಡೆಯುತ್ತಿದೆ ಎಂದು ನಟಿ ರಮ್ಯಾ ಆಕ್ರೋಶ ವ್ಯೆಕ್ತಪಡಿಸಿದ್ದಾರೆ.

ಡ್ರಗ್ಸ್‌ ವಿಚಾರದಲ್ಲಿ ಶಾರುಖ್ ಮೇಲೆ ದಾಳಿ – ಶಶಿ ತರೂರ್ ಟ್ವೀಟ್

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾನು ಡ್ರಗ್ಸ್‌ ಪ್ರಿಯನಲ್ಲ. ಎಂದಿಗೂ ಅದನ್ನು ಬಳಸಿಲ್ಲ. ಆದರೆ, ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್‌ ಖಾನ್‌ ಬಂಧನವಾದ ವಿಚಾರವನ್ನು ಇಟ್ಟುಕೊಂಡು ಶಾರುಖ್‌ ಖಾನ್‌ ಅವರ ಮೇಲೆ ದಾಳಿ ಮಾಡುತ್ತಿರುವುದನ್ನು ಕಂಡು ಅಸಹ್ಯವಾಗಿದೆ. ಅವರ ವಿಚಾರದಲ್ಲಿ ಸ್ವಲ್ಪ ಸಹಾನುಭೂತಿ ಇರಬೇಕು. ಸಾರ್ವಜನಿಕ ತುಚ್ಚೀಕರಣ ಸರಿಯಲ್ಲ. 23 ವರ್ಷದ ಹುಡುಗನ ಮೇಲೆ ಇಷ್ಟು ಸಂತೋಷದಿಂದ ದಾಳಿ ಮಾಡುವುದು ಬೇಕಿಲ್ಲ,’ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ

ಶಾರುಖ್ ಮಗ ಇನ್ನೂ ಮಗು – ಸುನೀಲ್ ಶೆಟ್ಟಿ

ಯಾವುದೇ ಕಡೆ ರೇಡ್ ಆದಾಗ ಅಲ್ಲಿನ ಎಲ್ಲರನ್ನೂ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಆ ಮಗು ಡ್ರಗ್ಸ್ ಸೇವಿಸಿತ್ತು, ಆ ಮಗು ಹಾಗೆ ಮಾಡಿತ್ತು, ಈ ಮಗು ಹೀಗೆ ಮಾಡಿದೆ ಎಂದೆಲ್ಲ ಹೇಳಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ, ಆ ಮಗುವಿಗೆ ಸ್ವಲ್ಪ ಉಸಿರಾಡಲು ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ  ಸುನಿಲ್ ಶೆಟ್ಟಿ.ತಮ್ಮ ಅಭಿಪ್ರಾಯವನ್ನು ವ್ಯೆಕ್ತಪಡಿಸಿದ್ದಾರೆ.

ಶಾರುಖ್‌ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಮಗ!

“ ನನ್ನ ಮಗ ಹುಡುಗಿಯರ ಜೊತೆ ಡೇಟ್ ಮಾಡಬಹುದು. ಸಿಗರೇಟ್ ಸೇದಬಹುದು. ಲೈಂಗಿಕತೆ ಮತ್ತು ಮಾದಕವಸ್ತುಗಳನ್ನು ಸಹ ಅನಂದಿಸಬಹುದು. ತಾನು ಯೌವ್ವನದಲ್ಲಿ ಮಾಡಲಾಗದ ಎಲ್ಲಾ ಕೆಲಸಗಳನ್ನು ಮಾಡಲು ಅವನಿಗೆ ಮುಕ್ತವಾದ ಅವಕಾಶವಿದೆ” ಅಂತ ಶಾರುಖ್ ತಮಾಷೆಯಾಗಿ ಹೇಳುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಗೆ ನೈತಿಕ ಬೆಂಬಲ ನೀಡಲು ಬಾಲಿವುಡ್ ಮಂದಿ ರಾತ್ರಿಯಿಂದಲೇ ಶಾರುಖ್ ಖಾನ್ ನಿವಾಸ ‘ಮನ್ನತ್ ಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್, ಶಾರುಖ್ ಖಾನ್ ನಿವಾಸದಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ನೈತಿಕ ಬೆಂಬಲ ಮತ್ತು ಧೈರ್ಯ ತುಂಬುವ ಕೆಲಸ ಮಾಡಿ ಬಂದಿದ್ದಾರೆ. ಇನ್ನೊಂದೆಡೆ ಸುನಿಲ್ ಶೆಟ್ಟಿ ಪೂಜಾ ಭಟ್, ಸುಚಿತ್ರ ಕೃಷ್ಣಮೂರ್ತಿ ಸೇರಿದಂತೆ ಅನೇಕ ಬಾಲಿವುದ ತಾರೆಗಳು ಶಾರುಖ್ ಖಾನ್ ಬೆಂಬಲಕ್ಕೆ ಸಂಕಷ್ಟದ ಸಮಯದಲ್ಲಿ ನಿಂತು ನಮ್ಮ ಟ್ವಿಟರ್ ಖಾತೆಗಳ ಮೂಲಕ ಬಹಿರಂಗವಾದ ಬೆಂಬಲವನ್ನು ನೀಡುತ್ತಿದ್ದಾರೆ.