buses

ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಹೆಚ್ಚುವರಿ 1,000 ಬಸ್‌ಗಳನ್ನು ಬಿಡಲು ಕೆಎಸ್‌ಆರ್‌ಟಿಸಿ ನಿರ್ಧಾರ

ಕರ್ನಾಟದಲ್ಲಿ ಹಬ್ಬಗಳು ಶುರುವಾಗುತ್ತಿದಂತೆ ಜನರು ತಮ್ಮ ತಮ್ಮ ಊರಿಗೆ ಹೋಗಲು ಸಜ್ಜಾಗುತ್ತಾರೆ, ಅರದಲ್ಲೂ ದಸರಾ, ದೀಪಾವಳಿ ಅಂತಹ ಸಂಧರ್ಭದಲ್ಲಿ ಬಸ್‌, ಟ್ರೈನ್‌, ಕ್ಯಾಬ್‌, ಕಾರು ಎಲ್ಲವೂ ಬರ್ತಿಯಾಗಿಬಿಡುತ್ತದೆ. ರಾಜ್ಯದ ಅನೇಕ ಭಾಗಗಳಿಂದಲ್ಲದೇ ದೇಶ, ವಿದೇಶಗಳ ವಿವಿಧ ಭಾಗಗಳಿಂದ ಮೈಸೂರು ದಸರ ನೋಡಲು ಬರುತ್ತಾರೆ. ಈಗೆ ಬರುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಯಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರ ಸಾಮ್ಯದ ಕೆಎಸ್‌ಆರ್‌ಟಿಸಿ ಜವಾಬ್ಧಾರಿಯಾಗಿದ್ದು. ಹಾಗಾಗಿಯೇ ಪ್ರಯಾಣಿಕರಿಗೆ ಯಾವುದೇ ರೀತಿಯ ಕಿರಿಕಿರಿ ಅಥವಾ ಜನ ದಟ್ಟಣೆಯಾಗದಂತೆ 1000 ಹೆಚ್ಚುವರಿ ಬಸ್ಗಳನ್ನು ನಿಗಮ ಓಡಿಸಲಿದೆ ನಿರ್ಧರಿಸಿದೆ.