vijaya times advertisements
Visit Channel

houston

ಗೋಡೆಗೆ ಅಪ್ಪಳಿಸಿ ವಿಮಾನ ಸ್ಫೋಟ, 21 ಪ್ರಯಾಣಿಕರು ಪಾರು

ಅಮೆರಿಕದ ( America) ಹೂಸ್ಟನ್ ವಿಮಾನ ನಿಲ್ದಾಣದಲ್ಲಿ (Houston airport) ನಿನ್ನೆ ವಿಮಾನ ಟೇಕಾಫ್‌ ಆಗುತ್ತಿದ್ದಂತೆ ಗೋಡೆಗೆ ಅಪ್ಪಳಿಸಿ ಸ್ಫೋಟಗೊಂಡಿದೆ. ಆದ್ರೆ ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್ ಸೇರಿ 21 ಪ್ರಯಾಣಿಕರು ಬಚಾವಾಗಿದ್ದಾರೆ. ಏರ್​ಪೋರ್ಟ್​ನಿಂದ 18 ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗುತ್ತಿದ್ದಂತೆ ಖಾಸಗಿ ವಿಮಾನ ಗೋಡೆಗೆ ಅಪ್ಪಳಿಸಿದೆ. ಇದರಿಂದ ವಿಮಾನ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡ ವಿಮಾನದಲ್ಲಿದ್ದ 18 ಪ್ರಯಾಣಿಕರು ಹಾಗೂ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.