india sex ratio

ಲಿಂಗಾನುಪಾತದಲ್ಲಿ ಮೊದಲ ಬಾರಿಗೆ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಲಿಂಗಾನುಪಾತದಲ್ಲಿ ಹೆಚ್ಚಳ ಕಂಡಿದೆ. ಆದರೆ, ಪುರುಷರಿಗಿಂತ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-5 ರ ಸಂಶೋಧನಾ ವರದಿ ಪ್ರಕಾರ ಲಿಂಗಾನುಪಾತವು 1,000: 1,020 ( 1000 ಪುರುಷರಿಗೆ 1020 ಮಹಿಳೆಯರು) ಆಗಿದ್ದು, ಇದು ಜನಸಂಖ್ಯಾ ಬದಲಾವಣೆಯ ಸೂಚಕವಾಗಿದೆ. ನಗರಪ್ರದೇಶದಲ್ಲಿ ಲಿಂಗಾನುಪಾತ 1000:985 ಇದೆ. ಗ್ರಾಮೀಣ ಪ್ರದೇಶದಲ್ಲಿ 1000: 1037ಕ್ಕೇರಿದೆ. ಸರಾಸರಿ ಲಿಂಗಾನುಪಾತ 1000:1020ರಷ್ಟಿದೆ.