kannada news

ಮೃತ ವ್ಯಕ್ತಿ ಹೆಸರಿಗೆ 125 ಕೋಟಿ ರೂ. ಮೌಲ್ಯದ ಜಮೀನು ಮಂಜೂರು! ಮೌನ ಮುರಿದ ಸಚಿವ ಆರ್. ಅಶೋಕ್!

ವ್ಯಕ್ತಿಯೊಬ್ಬರು ಸತ್ತು 23 ವರ್ಷಗಳ ಕಳೆದಿದ್ದರು ಕೂಡ ಆತನ ಹೆಸರಿನಲ್ಲಿ 125 ಕೋಟಿ ಮೌಲ್ಯದಷ್ಟು ಬೆಲೆಬಾಳುವ ಸೈಟನ್ನು ಮಂಜೂರು ಮಾಡಿರುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ

ಪುನೀತ್‌ಗೆ ( Punith Rajkumar) ಮರಣೋತ್ತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಇತ್ತೀಚೆಗೆ ಮರೆಯಾದ ಕನ್ನಡ ಚಿತ್ರಲೋದ ಧ್ರುವ ತಾರೆ ಪುನೀತ್‌ ರಾಜ್‌ಕುಮಾರ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Basavaraj Bommai) ಅವರು ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಅವರು ಘೋಷಿಸಿದ್ದಾರೆ.

ಒಎನ್‌ಜಿಸಿ 313 ಹುದ್ದೆಗಳಿಗೆ ನೇಮಕಾತಿ

ದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತ ಮೆಕ್ಯಾನಿಕಲ್ ಇಂಜಿನಿಯರಿಂಗ್, ಪೆಟ್ರೋಲಿಯಂ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಇಂಜಿನಿಯರಿಂಗ್, ಎಲೆಕ್ನಿಕಲ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಇನ್ನುಮೆಂಟೆಷನ್ ಇಂಜಿನಿಯರಿಂಗ್, ಕಿಮಿಕಲ್ ಇಂಜಿನಿಯರಿಂಗ್, ಜಿಯೋಲಾಜಿ, ಜಿಯೋ ಫಿಸಿಕ್ಸ್ ಪದವೀಧರರಾಗಿರಬೇಕು

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ – ಡಿ.ಕೆ. ಶಿವಕುಮಾರ್

ಹಾನಗಲ್ ಉಪ ಚುನಾವಣೆ ಸಂಬಂಧ ಕಳೆದ ಎರಡು ದಿನಗಳಿಂದ ಪಕ್ಷದ ನಾಯಕರ ಜತೆ ಚರ್ಚೆ ಮಾಡುತ್ತಿದ್ದು, ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟ ಪಡಿಸಿದ್ದಾರೆ

ಬಲವಂತ ಮತಾಂತರ ನಿಷೇಧಕ್ಕೆ ಚಿಂತನೆ – ಬಸವರಾಜ ಬೊಮ್ಮಾಯಿ

ಕೆಲವು ದಿನಗಳ ಹಿಂದೆ ಬೆಂಗಳೂರಿನ ನಾರಾಯಣಸ್ವಾಮಿ ಎಂಬುವವರ ಮನೆಯಲ್ಲಿ 80ಕ್ಕೂ ಅಧಿಕ ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿಸಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ

ರಾಜ್ಯದಲ್ಲಿ ಭಯಾನಕವಾಗಿ ನಡೀತಿದೆ ಗೊಬ್ಬರ ಮಾಫಿಯಾ! ಎಚ್ಚರ, ಗೊಬ್ಬರ ಮಾಫಿಯಾಕ್ಕೆ ಬಲಿಯಾಗಬೇಡಿ ! ಮಂಡ್ಯದಲ್ಲೇ ಇದೆ ಮಾಫಿಯಾ ಕೇಂದ್ರ. ಎರೆಗೊಬ್ಬರ ಹೆಸರಲ್ಲಿ ರೈತನಿಗೆ ನಡೀತಿದೆ ಭಾರೀ ಮೋಸ

ಎಸ್‌.ಎಲ್‌.ವಿ ಅನ್ನೋ ಎರೆಗೊಬ್ಬರ ಫ್ಯಾಕ್ಟರಿಯಲ್ಲಿ ನಕಲಿ ಎರೆಗೊಬ್ಬರ ತಯಾರಾಗ್ತಿದೆ ಅನ್ನೋ ಪಕ್ಕಾ ಮಾಹಿತಿ ನಮಗೆ ಸಿಕ್ತು. ಈ ಮಾಹಿತಿಯ ಬೆನ್ನತ್ತಿ ಹೊರಟಾಗ ಬಯಲಾಯ್ತು ಬೆಚ್ಚಿ ಬೀಳಿಸೋ ರಹಸ್ಯಗಳು.

ಹಂದಿ ಕಾಟಕ್ಕೆ ಬೆಳೆ ನಾಶ. ಗದಗ ಜಿಲ್ಲೆಯ ಡೋಣಿ ಗ್ರಾಮದ ಮಂದಿಗೆ ವಿಚಿತ್ರ ಸಂಕಟ. ತಾಳಲಾಗುತ್ತಿಲ್ಲ ಹಂದಿ ಉಪಟಳ. ಅರಣ್ಯ ಇಲಾಖೆ ಕ್ಯಾರೇ ಅಂತಿಲ್ಲ

ಇದು ಒಂದೆರೆಡು ದಿನಗಳ ಕತೆಯಲ್ಲ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹಂದಿಗಳು ಬೆಳೆಯನ್ನು ನಾಶಪಡಿಸುತ್ತಿವೆ. ಇದರಿಂದ ರೈತರಿಗೆ ಭಾರೀ ನಷ್ಟವುಂಟಾಗುತ್ತಿದೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ಈ ರೀತಿ ಕಣ್ಣಾರೆ ನಾಶ ಆಗುತ್ತಿರುವುದನ್ನು ಕಂಡು ಮರುಗುವಂತಾಗಿದೆ ಅನ್ನೋದು ಅನ್ನದಾತನ ಅಳಲು.

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ

ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಕಂದಾಯ, ಭೂಮಾಪನ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 5,689 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ನಿರ್ಧರಿಸಲಾಗಿದೆ