
ಮಂತ್ರಿ ಮಾಲ್‌ನಿಂದ 39ಕೋಟಿ ತೆರಿಗೆ ಬಾಕಿ
ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಮಂತ್ರಿ ಮಾಲ್ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿದೆ. 2017ರಿಂದ ಇದೂವರೆಗೂ ಆಸ್ತಿ ತೆರಿಗೆ ಕಟ್ಟಿಲ್ಲ. ಮಂತ್ರಿ ಮಾಲ್‌ಗೆ ನೋಟಿಸ್ ಕೊಟ್ಟು ಬಿಬಿಎಂಪಿ ಸುಸ್ತಾಗಿದೆ. ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಎಷ್ಟೇ ಹೇಳಿದರೂ ಮಂತ್ರಿ ಮಾಲ್ ನ ಆಡಳಿತಾಧಿಕಾರಿ ಮಾತ್ರ ಕೇಳುತ್ತಿಲ್ಲ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.