
ವಿಶ್ವವಿಖ್ಯಾತ ದಸರಾ ಆಚರಣೆಗೆ ರಾಜ್ಯ ಸರ್ಕಾರದಿಂದ ಗೈಡ್ಲೈನ್ಸ್ ಬಿಡುಗಡೆ
ಮೈಸೂರು ದಸರಾ ಆಚರಣೆಗೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅರಮನೆ ಆವರಣದಲ್ಲಿ ದಸರಾ ಆಚರಣೆ ನಡೆಸಬೇಕು. ಜನರು ಮಾಸ್ಕ್, ಸ್ಯಾನಿಟೈಸ್ನ ಕಡ್ಡಾಯವಾಗಿ ಬಳಸಬೇಕು. ವರ್ಚುವಲ್ ಮೂಲಕ ಜಂಬೂಸವಾರಿ ವೀಕ್ಷಣೆ ಮಾಡಬೇಕು. ಅ.7ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ 100 ಜನರಿಗೆ ಅನುಮತಿ ನೀಡಲಾಗಿದೆ.