
15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ
ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದಿಂದ ಎಲ್ಲ ರಾಜ್ಯಗಳಿಗೂ ನೋಟಿಫಿಕೇಶನ್ ಹೊರಡಿಸಲಾಗಿದ್ದು, ಹೊಸ ಕಾನೂನು ಪ್ರಕಾರ 15 ವರ್ಷಗಳ ಹಿಂದಿನ ಕಾರನ್ನು ರಿನೀವಲ್ ಮಾಡಿಸಲು ನಿಗದಿತ ಶುಲ್ಕಕ್ಕಿಂತ ಎಂಟು ಪಟ್ಟು ಮೊತ್ತವನ್ನು ಪ್ರಾಧಿಕಾರಕ್ಕೆ ಕೊಡಬೇಕಾಗುತ್ತದೆ. ಬಸ್, ಲಾರಿ ಇನ್ನಿತರ ಘನ ವಾಹನಗಳ ಮಾಲೀಕರು ಕೂಡ ಇದೇ ಮಾದರಿಯಲ್ಲಿ ತಮ್ಮ ವಾಹನಗಳ ಲೈಸನ್ಸ್ ರಿನೀವಲ್ ಮಾಡಿಸಲು ಎಂಟು ಪಟ್ಟು ಹೆಚ್ಚು ಶುಲ್ಕ ತರಬೇಕಾಗುತ್ತದೆ.