Visit Channel

"Petrol

ಮತ್ತೆ ದಾಖಲೆಯ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು ಶನಿವಾರ ದೇಶದಾದ್ಯಂತ ಇಂಧನ ದರವನ್ನು ಮತ್ತೆ ಹೆಚ್ಚಳ ಮಾಡಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 35 ಪೈಸೆ ಏರಿಕೆಯಾಗಿದ್ದು, 105.49 ರೂ.ಗೆ ತಲುಪಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರವು 35 ಪೈಸೆ ಏರಿಕೆಯಾಗಿದ್ದು, 94.22 ರೂ. ತಲುಪಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 36 ಪೈಸೆ ಏರಿಕೆಯಾಗಿದ್ದು, 109.16 ರೂ.ಗೆ ತಲುಪಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರವು 37 ಪೈಸೆ ಏರಿಕೆಯಾಗಿ, ಶತಕ(100) ಭಾರಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ

 ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಜೊತೆ ಗ್ಯಾಸ್‌ ದರವೂ ಕೂಡ ಏರಿಕೆ ಯಾಗಿದ್ದು ಪ್ರತಿ ಸಿಲಿಂಡರ್ ಮೇಲೆ 15 ರೂ ಗಳಷ್ಟು ಏರಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ 14.2 ಕೆಜಿಗೆ 899 ರೂಪಾಯಿ 50 ಪೈಸೆಯಾಗಿದೆ. 5 ಕೆಜಿ ಸಿಲಿಂಡರ್ ಬೆಲೆ 502 ರೂಪಾಯಿಯಾಗಿದೆ.