
50ರೂ ಗಿಂತ ಹೆಚ್ಚಿನ ರೀಚಾರ್ಜ್ ಮೇಲೆ ಪ್ರೊಸೆಸಿಂಗ್ ಶುಲ್ಕ ವಿಧಿಸಲಿರುವ ಫೋನ್ ಪೇ
ಫೋನ್ ಪೇ ಮೂಲಕ ರೀಚಾರ್ಜ್ ಮಾಡುವವರಿಗೆ ಶುಲ್ಕ ವಿಧಿಸುವ ಸಣ್ಣ ಪ್ರಮಾಣದ ಪ್ರಯೋಗ ಇದಾಗಿದ್ದು, ಇದರಲ್ಲಿ ಕೆಲವು ಬಳಕೆದಾರರು ಮೊಬೈಲ್ ರೀಚಾರ್ಜ್ ಗಳಿಗೆ ಚಾರ್ಜಿಂಗ್ ಶುಲ್ಕ ಪಾವತಿಸಬೇಕಿದೆ ಎಂದು ಫೋನ್ ಪೇ ಹೇಳಿಕೊಂಡಿದೆ. ಅಂದರೆ, ಅದು ನಿಮ್ಮ ಖಾತೆಯು ಪ್ರಾಯೋಗಿಕ ಗುಂಪಿನ ಅಡಿಯಲ್ಲಿ ಬರುತ್ತದೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಶೀಘ್ರದಲ್ಲೇ ಫೋನ್ ಪೇ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಫೋನ್ ಪೇ ಎಲ್ಲಾ ಪಾವತಿ ಸೇವೆಗಳ ಮಾದರಿಯಲ್ಲಿಯೇ ಕ್ರೆಡಿಟ್ ಕಾರ್ಡ್ ಗಳ ಮೂಲಕ ಮಾಡಿದನು ಎಲ್ಲಾ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿದೆ. ಆದರೆ ಇತರೆ ಪಾವತಿ ಸೇವೆಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಫೋನ್ ಪೇ ಹೇಳಿದೆ.