
ಭಾರತದಲ್ಲಿ ಗುಲಾಬಿ ಬಣ್ಣದ ಚಿರತೆ ಪ್ರತ್ಯಕ್ಷ
ಸ್ಟ್ರಾಬೆರಿ ಬಣ್ಣದ ಚುಕ್ಕೆಗಳಿರುವ ಈ ಅಪರೂಪದ ಚಿರತೆಯನ್ನು ಆಗಾಗ್ಗೆ ಕಂಡಿರುವುದಾಗಿ ರಾಣಕ್ಪುರ ಮತ್ತು ಕುಂಭಾಲಗಡ ನಿವಾಸಿಗಳು ತಿಳಿಸಿದ್ದಾರೆ. ಇದು ಈ ಗ್ರಾಮಗಳ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಪತ್ತೆಯಾಗಿದೆ. ಇಲ್ಲಿನ ಅಗಾಧ ವಿಸ್ತಾರದ ಅರಣ್ಯ ಪ್ರದೇಶದಿಂದಾಗಿ ಈ ಗುಲಾಬಿ ಚಿರತೆ ಎಲ್ಲಾ ಕಡೆ ಓಡಾಡುತ್ತಿದೆ ಎಂದು ರಾಜಸಮಂದ್ ಡಿಸಿಎಫ್ ಫತೇಹ್ ಸಿಂಗ್ ರಾಥೋರ್ ಹೇಳಿದ್ದಾರೆ.