
ಡ್ರಗ್ಸ್ ನಂಟು ಹಿನ್ನಲೆ ಅನನ್ಯಾ ಪಾಂಡೆ ಮನೆ ಮೇಲೆ ದಾಳಿ
ಮೂಲಗಳ ಪ್ರಕಾರ, ನ್ಯಾಯಾಲಯದಲ್ಲಿ ಸಲ್ಲಿಸಿದ ಚಾಟ್‌ನಲ್ಲಿ, ಆರ್ಯನ್ ಖಾನ್ (Aryan Khan) ಒಬ್ಬ ನಟಿಯೊಂದಿಗೆ ಮಾತುಕತೆ ನಡೆಸುತ್ತಿದ್ದು, ಇಬ್ಬರೂ ಡ್ರಗ್ಸ್ (Drugs) ಬಗ್ಗೆಯೇ ಚರ್ಚಿಸುತ್ತಿದ್ದರು ಎನ್ನಲಾಗಿದೆ. ಆರ್ಯನ್ ಖಾನ್ ಜಾಮೀನಿನ ವಿಚಾರಣೆಗೆ ಮುನ್ನ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜೊತೆ ಮುಂಬೈ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಗ್ಗೆ ಚರ್ಚಿಸಿರುವ ವಾಟ್ಸಾಪ್ ಚಾಟ್ ಅನ್ನು ಸಲ್ಲಿಸಿದೆ.