
ಪಶ್ಚಿಮ ಬಂಗಾಳದ ಬಿಜೆಪಿ ಯುವಮೋರ್ಚಾ ನಾಯಕನ ಹತ್ಯೆ
ಈ ಕೃತ್ಯ ಟಿಎಂಸಿ ಕಾರ್ಯಕರ್ತರದ್ದೇ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಬಿಜೆಪಿ ನಾಯಕ ಸುವೇಂದು ಟ್ವಿಟ್ ಮಾಡಿ, ಮಿಥುನ್ ಘೋಷ್ ಅವರು ಬಿಜೆಪಿ ಯುವ ಮೋರ್ಚಾದ ಉತ್ತರ ದಿನಾಜ್ಪುರ ಜಿಲ್ಲೆಯ ಉಪಾಧ್ಯಕ್ಷರಾಗಿದ್ದರು. ಇಟಾಹಾರ್ನಲ್ಲಿ ಅವರನ್ನು ದುಷ್ಕರ್ಮಿಗಳು ಹತ್ಯ ಮಾಡಿದ್ದಾರೆ. ಇದರಲ್ಲಿ ಖಂಡಿತ ಟಿಎಂಸಿ ಕೈವಾಡವಿದೆ. ಅವರು ತಮ್ಮ ಯಜಮಾನನ ಅಣತಿಗೆ ಅನುಸಾರವಾಗಿ ಇಂಥ ಕೃತ್ಯ ಮಾಡಿದ್ದಾರೆ. ಎಂದು ಆರೋಪಿಸಿದ್ದಾರೆ.