
ಬೇವು ಮತ್ತು ಅರಿಶಿನದ ಉಪಯೋಗಗಳು ನಮ್ಮ ಆರೋಗ್ಯಕ್ಕೆ ಎಷ್ಟು ಲಾಭಕಾರಿ ಗೊತ್ತಾ?
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಅಡಿಗೆ ಪದಾರ್ಥವಾದ ಅರಿಶಿನ ಮತ್ತು ಬೇವು ಇದ್ದೇ ಇರುತ್ತದೆ. ಇದನ್ನ ಬಳಸಿಕೊಂಡರೆ ನಮ್ಮ ತ್ವಚೆಯ ಮತ್ತು ದೇಹದ ಆರೋಗ್ಯ ಕಾಪಾಡಬಹುದು. ಅರಿಶಿನವು ನೈಸರ್ಗಿಕವಾಗಿ ಮನೆ ಮದ್ದು ಎಂದು ಹೇಳಬಹುದು. ಅರಿಶಿನದ ಫೇಸ್ ಪ್ಯಾಕ್ ಅನ್ನು ಮನೆಯಲ್ಲಿ ತಯಾರಿಸಿ ಅದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹಾಗೂ ಹೊಳಪು ಹೆಚ್ಚುತ್ತದೆ.