vijaya times advertisements
Visit Channel

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ ; ಬಿಸ್ಕೆಟ್ ಬಿಟ್ಟು ಬೇರೇನೂ ತಿನ್ನುವಂತಿಲ್ಲ ಈಕೆ!

biscuits

India : ಭಾರತೀಯರು ಸ್ವಭಾವತಃ ಆಹಾರ ಪ್ರಿಯರು, ವಿಧ ವಿಧದ ಆಹಾರ ಪದಾರ್ಥಗಳನ್ನು ಟೇಸ್ಟ್ (Talia Sinott Eats Biscuits as food) ಮಾಡಲು ಇಷ್ಟಪಡುತ್ತಾರೆ. ಆಹಾರದಲ್ಲಿಯೂ ಹಲವಾರು ಆಯ್ಕೆಗಳಿವೆ, ಸಸ್ಯಾಹಾರಿ, ಮಾಂಸಾಹಾರಿ, ಚಾಟ್ಸ್‌, ಸಲಾಡ್‌, ರೈಸ್, ಸ್ನ್ಯಾಕ್ಸ್ ಹೀಗೆ ಹಲವು ವಿಧಗಳಿವೆ.

Talia Sinott Eats Biscuits as food

ಆಹಾರ ಪ್ರಿಯರು(Talia Sinott Eats Biscuits as food) ಹೊಸ ಹೊಸ ಪ್ರದೇಶಗಳಿಗೆ ಹೋಗಿ ವಿಧ ವಿಧದ ಆಹಾರಗಳನ್ನು ಸವಿದು ಬರುತ್ತಾರೆ.

ಇತ್ತೀಚಿಗಂತೂ ವಿವಿಧ ದೇಶದ ಆಹಾರಗಳು, ಎಲ್ಲಾ ಕಡೆಯೂ ಲಭ್ಯವಿರುವ ಕಾರಣ ಸುಲಭವಾಗಿ ಎಲ್ಲಾ ಬಗೆಯ ಆಹಾರವನ್ನು ಸವಿಯಲು ಸಾಧ್ಯವಾಗುತ್ತದೆ.

ಆಹಾರಲ್ಲಿ ಹಲವಾರು ವೈವಿದ್ಯತೆಯಿದ್ದರೂ, ಎಲ್ಲರೂ ಎಲ್ಲವನ್ನೂ ತಿನ್ನಲು ಇಷ್ಟಪಡುವುದಿಲ್ಲ.

ಕೆಲವೊಬ್ಬರು ವಿಧ ವಿಧದ ಆಹಾರ ಪ್ರಯೋಗ ಮಾಡಲು ಬಯಸಿದರೆ, ಇನ್ನು ಕೆಲವರು ನಿರ್ಧಿಷ್ಟ ಆಹಾರಗಳಿಗೆ ಒಗ್ಗಿಕೊಂಡಿದ್ದು, ಅವುಗಳನ್ನು ಮಾತ್ರ ತಿನ್ನಲು ಇಷ್ಟಪಡುತ್ತಾರೆ.

ಇದನ್ನೂ ಓದಿ : https://vijayatimes.com/kantara-inspires-govt-officer/

ಅನಾರೋಗ್ಯದಿಂದ ಬಳಲುತ್ತಿರುವವರು ಎಲ್ಲಾ ರೀತಿಯ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಅಂತವರು ವೈದ್ಯರು(Doctor) ಸೂಚಿಸಿದ ಕೆಲವು ನಿರ್ದಿಷ್ಟ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ.

ಅದೇ ರೀತಿ, ಇಂಗ್ಲೆಂಡ್‌ನ ವೊಲ್ವರ್‌ಹ್ಯಾಂಪ್ಟನ್‌ನ ತಾಲಿಯಾ ಸಿನೋಟ್(Talia Sinote) ಎನ್ನುವ ಮಹಿಳೆಯೊಬ್ಬರು ಅಪರೂಪದ ಗ್ಯಾಸ್ಟ್ರೋಪರೆಸಿಸ್‌ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾರೆ.

https://youtu.be/lQMiDP-GDV4 ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಜನ ಜಾತ್ರೆ!

ಹೀಗಾಗಿ ಈಕೆ ಕೇವಲ ಬಿಸ್ಕೆಟ್‌ಗಳನ್ನು(Biscuits) ಮಾತ್ರ ತಿನ್ನಬಹುದು. ಅಷ್ಟಕ್ಕೂ ಈ ಗ್ಯಾಸ್ಟ್ರೋಪರೆಸಿಸ್‌ ಕಾಯಿಲೆ ಎಂದರೇನು ಎನ್ನುವುದನ್ನು ನೋಡುವುದಾದರೆ,

ಇದು ಹೊಟ್ಟೆಯಿಂದ ಸಣ್ಣ ಕರುಳಿಗೆ ಆಹಾರದ ಚಲನೆಯನ್ನು ನಿಧಾನಗೊಳಿಸುತ್ತದೆ ಅಥವಾ ಸಂಪೂರ್ಣ ನಿಲ್ಲಿಸುತ್ತದೆ.

Who Eats Biscuits

ಇಂತಹ ಅಪರೂಪದ ಸ್ಥಿತಿಯ ಕಾರಣದಿಂದ, ಈ ಮಹಿಳೆ ಕೇವಲ ಜೀರ್ಣಕಾರಿ ಬಿಸ್ಕತ್ತುಗಳನ್ನು ಮಾತ್ರ ತಿನ್ನಲು ಸಾಧ್ಯ. ಅವಳು ಸಾಮಾನ್ಯರಂತೆ ಊಟ ಮಾಡಲು ಪ್ರಯತ್ನಿಸಿದರೆ ವಾಂತಿ ಮಾಡಿಕೊಳ್ಳುತ್ತಾಳೆ.

ಬಿಸ್ಕೆಟ್ ಬಿಟ್ಟು ಬೇರೆ ಏನನ್ನಾದರೂ ತಿಂದರೆ ಅಥವಾ ಕುಡಿದರೆ ಬಹಳ ಹೊಟ್ಟೆ ನೋವು ಅಥವಾ ವಾಕರಿಕೆಯಂತಹ ತೊಂದರೆಯುಂಟಾಗುತ್ತದೆ ಎಂದು ಮಹಿಳೆ ಅಳಲು ತೋಡಿಕೊಳ್ಳುತ್ತಾರೆ.

ಇದನ್ನೂ ಓದಿ : https://vijayatimes.com/karnataka-maharashtra-border/

ತಾಲಿಯಾ ತನ್ನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವುದಕ್ಕಾಗಿ ಫೀಡಿಂಗ್ ಟ್ಯೂಬ್ ಅನ್ನೇ ಅವಲಂಬಿಸಿದ್ದಾಳೆ. ಈಕೆ 2018 ರಲ್ಲಿ ಈ ರೋಗಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದಳು.

ಈ ಸ್ಥಿತಿಯು ಬಹಳ ಅಪರೂಪವಾಗಿದ್ದು, ವೈದ್ಯರಿಗೂ ಕೂಡ ಕಾರಣವನ್ನು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.

Disease

“ನಾನು ಸಾಮಾನ್ಯವಾಗಿ ಊಟ ಮಾಡಿದರೂ ಸಹ, ಅದು ವಾರಗಟ್ಟಲೆ ಹೊಟ್ಟೆಯಲ್ಲಿಯೇ ಇರುವಂತೆ ಭಾಸವಾಗುತ್ತದೆ. ಹೀಗಾಗಿ ಇಂತಹ ನೋವನ್ನು ತಡೆಯಲಾಗದೇ, ನಾನು ಬರೀ ಬಿಸ್ಕೆಟ್ ತಿನ್ನಲು ಆರಂಭಿಸಿದೆ” ಎಂದು ತಾಲಿಯಾ ಹೇಳಿದ್ದಾಳೆ.

ಜನವರಿ ತಿಂಗಳಲ್ಲಿ ತಾಲಿಯಾ ವೈರಸ್‌ಗೆ ತುತ್ತಾಗಿದ್ದಳು, ಅದು ಅವಳ ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ.

ಪ್ರಸ್ತುತ ತೀವ್ರ ರೋಗಲಕ್ಷಣಗಳೊಂದಿಗೆ ಅವಳನ್ನು ಇದು ಕಾಡುತ್ತಿದೆ” ಎಂದು ವೈದ್ಯರು ಹೇಳಿದ್ದಾರೆ. ಈಕೆಯ ತಂದೆ, ಇಂತಹ ರೋಗಲಕ್ಷಣಗಳ ಬಗ್ಗೆ ಸಾಕಷ್ಟು ಸಂಶೋಧಿಸಿ ಲಂಡನ್‌ನಲ್ಲಿ ತಜ್ಞವೈದ್ಯರನ್ನು ಸಂಪರ್ಕಿಸಿದಾಗ,

ಅವರು ಇದು ಗ್ಯಾಸ್ಟ್ರೋಪರೆಸಿಸ್ ರೋಗ ಎಂದು ನಿರ್ಣಯ ಮಾಡಿದರು.

https://fb.watch/gYrk6qP-ec/ ಕೋಲಾರದಲ್ಲಿ ಸಾಗಿದ ‘ಪಂಚರತ್ನ’

ಗ್ಯಾಸ್ಟ್ರೋಪರೆಸಿಸ್ ನಂತಹ ಸಮಸ್ಯೆಗೆ ಇರುವ ಚಿಕಿತ್ಸೆ ಎಂದರೆ, ಹೊಟ್ಟೆಯ ಸ್ನಾಯುಗಳಿಗೆ ಪ್ರಚೋದನೆಗಳನ್ನು ಕಳುಹಿಸಲು ಗ್ಯಾಸ್ಟ್ರಿಕ್ ಪೇಸ್‌ಮೇಕರ್ ಅನ್ನು ಅಳವಡಿಸುವುದು. ಇದು ಆಕೆಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

Latest News

ದೇಶ-ವಿದೇಶ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ರಾಜಕೀಯ

“ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ

ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್  ಎಂಬುದು ಜನರೇ ನೀಡಿರುವ ಬಿರುದು,

ರಾಜಕೀಯ

‘ಇದು ನನ್ನ ಸವಾಲು, ಕಾಂಗ್ರೆಸ್ಸಿಗರೇ ನಿಮ್ಮ ರಾಹುಲ್ ಗಾಂಧಿಯ ಒಂದೇ ಒಂದು ಸಾಧನೆಯನ್ನು ಹೇಳಿ ನೋಡೋಣ’ : ಸಿ.ಟಿ ರವಿ

ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaih) ಅವರ ವಿರುದ್ಧ ಸಿಡಿದೇಳುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(C.T.Ravi),

ದೇಶ-ವಿದೇಶ

ಭಾರತ್ ಜೋಡೋ ಯಾತ್ರೆಯಲ್ಲಿ ‘ಮೋದಿ, ಮೋದಿ’ ಎಂದು ಕೂಗಿದವರಿಗೆ ಮುತ್ತು ಕೊಟ್ಟ ರಾಹುಲ್ ಗಾಂಧಿ

ಜನ ಸಮೂಹ ಕೂಗುತ್ತಿದ್ದ ಜೈಕಾರಗಳನ್ನು ಆಲಿಸಿದ ರಾಹುಲ್ ಗಾಂಧಿ ಅವರ ಬಳಿ ಮೊದಲು ಕೈಬೀಸುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.