ಕಾಬೂಲ್ ಸೆ 16 : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮದೇ ಸರ್ಕಾರ ರಚಿಸಲು ಸಿದ್ದಾರಿಗಿದ್ದು, ಈ ಹಿನ್ನಲೆಯಲ್ಲಿ ಅವರು ಹಲವಾರು ಹೊಸ ಹೊಸ ಕಾನೂನುಗಳನ್ನು ತರುತ್ತಿದ್ದಾರೆ. ಶರಿಯಾ ನಿಯಮದ ಪ್ರಕಾರ ನಿಯಮಗಳನ್ನು ಜಾರಿ ಮಾಡಲು ಹೊರಟಿರುವ ಉಗ್ರರು, ಇದೀಗ ತಮ್ಮ ಶಿಕ್ಷೆ ಪಟ್ಟಿಯನ್ನು ಪ್ರಕಟ ಮಾಡಿದ್ದು ಇನ್ನು ಮುಂದೆ ಅವರ ಕಾನೂನಿನಂತೆ ನಿಯಮಗಳು ನಡೆಯಲಿದೆ ಎಂದು ತಿಳಿದುಬಂದಿದೆ.
- ಉದ್ದೇಶಪೂರ್ವಕವಾಗಿ ಕೊಲೆ ಮಾಡಿದವರನ್ನು ಹತ್ಯೆ ಮಾಡುವುದು
- ಕಳ್ಳತನ ಮಾಡಿದವರ ಕೈ ಕತ್ತರಿಸುವುದು
- ಅನೈತಿಕ ಸಂಬಂಧ ಹೊಂದಿದವನ್ನು ಕಲ್ಲಿನಿಂದ ಹೊಡೆದು ಸಾಯಿಸುವುದು
- ಯಾವುದೇ ಉದ್ದೇಶವಿಲ್ಲದೆ ಕೊಲೆ ಮಾಡಿದರೆ ದಂಡ ವಿಧಿಸುವುದು
- ಮಹಿಳೆ ಮತ್ತು ಪುರುಷ ಅನೈತಿಕ ಸಂಬಂಧ ಹೊಂದಿದ್ದಲ್ಲಿ ಅವರನ್ನು ಸಾರ್ವಜನಿಕವಾಗಿ ಹತ್ಯೆಗೈಯುವುದು.
ಹೀಗೆ ಇನ್ನೂ ಹಲವು ಕಠಿಣ ಕಾನೂನನ್ನು ತಾಲಿಬಾನಿಗಳು ಜಾರಿಗೊಳಿಸಲಾಗಿದೆ.