• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಉಗ್ರ ಶಿಕ್ಷೆ ಜಾರಿಗೊಳಿಸಲು ತಾಲಿಬಾನಿಗಳು ಸಜ್ಜು

Preetham Kumar P by Preetham Kumar P
in ದೇಶ-ವಿದೇಶ
ಉಗ್ರ ಶಿಕ್ಷೆ ಜಾರಿಗೊಳಿಸಲು ತಾಲಿಬಾನಿಗಳು ಸಜ್ಜು
0
SHARES
0
VIEWS
Share on FacebookShare on Twitter

ಕಾಬೂಲ್ ಸೆ 25 : ತಾಲಿಬಾನ್‌ಗಳು ಅಫ್ಘಾನಿಸ್ತಾನದಲ್ಲಿ ಕ್ರೂರ ಶಿಕ್ಷೆ ಮುಂದುವರಿಸುವ ಬಗ್ಗೆ ಸ್ಪಷ್ಟಪಡಿಸಿದ್ದು, ಈ ಬಗ್ಗೆ ತಾಲಿಬಾನಿ ಮುಖಂಡ ಮುಲ್ಲಾ ನೂರೂದ್ಧೀನ್ ತುರಾಬಿ ನ್ಯೂಸ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ತಪ್ಪು ಮಾಡೋರನ್ನ ಕೊಲ್ಲುವುದು ಮತ್ತು ಅವರ ಅಂಗಾಂಗಗಳನ್ನು ಕತ್ತರಿಸುವ ಶಿಕ್ಷೆಗಳು ಶೀಘ್ರದಲ್ಲೇ ಜಾರಿಗೆ ಬರಲಿದೆ ಬಹುಶಃ ಈ ಬಾರಿ ಶಿಕ್ಷೆ ಸಾರ್ವಜನಿಕವಾಗಿ ನೀಡುವುದಿಲ್ಲ ಎಂದು ಹೇಳಿದ್ದಾರೆ

ಕ್ಯಾಬಿನೆಟ್‌ನಲ್ಲಿ ಶಿಕ್ಷೆ ಕುರಿತು ಚರ್ಚೆ

ಕೈ ಕತ್ತರಿಸುವಂತಹ ಶಿಕ್ಷೆಗಳು ಜನರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ಈ ರೀತಿಯ ಶಿಕ್ಷೆಗಳಿಂದ ಜನರಲ್ಲಿ ಭಯ ಹೆಚ್ಚಿಸುತ್ತದೆ. ಮುಂದೆ ಇಂತಹ ತಪ್ಪುಗಳನ್ನು ಮಾಡಬಾರದು ಎಂಬ ಸಂದೇಶ ರವಾನೆಯಾಗಲಿದೆ. ಈ ಸಂಬಂಧ ತಾಲಿಬಾನಿ ಕ್ಯಾಬಿನೆಟ್ ನಲ್ಲಿ ಶಿಕ್ಷೆ ಬಹಿರಂಗವಾಗಿ ನೀಡಬೇಕಾ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ನೀಡುವ ಕುರಿತ ಕಾನೂನಿನಲ್ಲಿ ಬದಲಾವಣೆ ತರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕಾನೂನು ಸಾಧಕ-ಬಾಧಕಗಳ ಕುರಿತು ಚರ್ಚಿಸಿ ತಮ್ಮ ಅಂತಿಮ ನಿರ್ಧಾರವನ್ನು ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆಗಳಿವೆ.

ಕುರಾನ್ ಆಧಾರದ ಮೇಲೆ ಕಾನೂನು ರಚನೆ

ಸ್ಟೇಡಿಯಂನಲ್ಲಿ ಬಹಿರಂಗವಾಗಿ ಶಿಕ್ಷೆ ನೀಡುವ ಕುರಿತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿರೋದು ಸತ್ಯ. ಆದ್ರೆ ಯಾರೂ ನಮ್ಮ ಕಾನೂನು ಮತ್ತು ಶಿಕ್ಷೆ ತಪ್ಪೆಂದು ಹೇಳಿಲ್ಲ. ಹಾಗಾಗಿ ಯಾರೂ ನಮ್ಮ ಕಾನೂನುಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಅಗತ್ಯವಿಲ್ಲ. ನಾವು ಇಸ್ಲಾಂ ಧರ್ಮವನ್ನು ಪಾಲಿಸುತ್ತೇವೆ ಮತ್ತು ಕುರಾನ್ ಆಧಾರದ ಮೇಲೆಯೇ ನಮ್ಮ ಕಾನೂನುಗಳು ರಚನೆಯಾಗಲಿವೆ ಎಂದು ಮುಲ್ಲಾ ನೂರೂದ್ಧೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮರುಕಳಿಸಲಿದೆ ಹಳೆಯ ಕಾನೂನು

ಅಫ್ಘಾನಿಸ್ತಾನ ತಾಲಿಬಾನಿಗಳ ಕ್ರೂರ ರಾಕ್ಷಸ ವರ್ತನೆಯನ್ನು ಇನ್ನೂ ಮರೆತಿಲ್ಲ. 90ರ ದಶಕದಲ್ಲಿ ಅಫ್ಘಾನಿಸ್ತಾನ ತಾಲಿಬಾನಿಗಳ ವಶದಲ್ಲಿತ್ತು. ಅಂದು ತಾಲಿಬಾನಿಗಳನ್ನು ಕಾಬೂಲ್ ನಗರದ ಸ್ಟೇಡಿಯಂ ಮತ್ತು ಈದ್ಗಾ ಮೈದಾನದಲ್ಲಿ ಕ್ರೂರ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಈ ಶಿಕ್ಷೆಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದ್ರೆ ಈಗ ಅಧಿಕಾರಕ್ಕೆ ಬಂದಿರುವ ತಾಲಿಬಾನಿಗಳು ಆರಂಭದಲ್ಲಿ ನಾವು ಬದಲಾಗಿದ್ದೇವೆ ಎಂದು ಹೇಳಿದ್ದರು. ಆದ್ರೆ ಮತ್ತೆ ತಮ್ಮ ಹಳೆಯ ಅಮಾನವೀಯ, ಕ್ರೂರ ಶಿಕ್ಷೆಯ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರೋದು ಅಫ್ಘಾನಿಸ್ತಾನದ ಆತಂಕಕ್ಕೆ ಕಾರಣವಾಗಿದೆ.

ಉಗ್ರರ ಸರ್ಕಾರ

ಅಫ್ಘಾನಿಸ್ತಾನಕ್ಕೆ ವಶಕ್ಕೆ ಪಡೆದುಕೊಂಡಿರುವ ತಾಲಿಬಾನಿಗಳು ವಿಶ್ವದ ಮುಂದೆ ಸಹಾಯ ಕೇಳುತ್ತಿದ್ದಾರೆ. ಸಂಯುಕ್ತ ರಾಷ್ಟ್ರಗಳ ಜೊತೆ ಸಭೆ ನಡೆಸಲು ತಾಲಿಬಾನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಭಾರತ, ಅಮೆರಿಕ ಸೇರಿದಂತೆ ಪ್ರಪಂಚದ ಹಲವು ಪ್ರಮುಖ ರಾಷ್ಟ್ರಗಳು ಅಫ್ಘಾನಿಸ್ತಾನದ ತಾಲಿಬಾನಿ ಸರ್ಕಾರವನ್ನು ಮಾನ್ಯ ಮಾಡಿಲ್ಲ. ಕಾರಣ ತಾಲಿಬಾನಿ ಸರ್ಕಾರದಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಹಕ್ಕಾನಿ ನೆಟ್ ವರ್ಕ್ ಸದಸ್ಯರು ಭಾಗಿಯಾಗಿದ್ದಾರೆ. ಇದರಲ್ಲಿ ಬಹುತೇಕರು ಅಮೆರಿಕ ಮತ್ತು ಸಂಯುಕ್ತ ರಾಷ್ಟ್ರಗಳ ಭಯೋತ್ಪಾದಕರ ಪಟ್ಟಿಯಲ್ಲಿದ್ದಾರೆ.

Tags: crime and punishment in Afghanistanstrict punishment executions will return in Afghanistantaliban amputation punishmenttaliban amputationsTaliban leader Mullah Nooruddin statementtaliban public punishment

Related News

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು
ದೇಶ-ವಿದೇಶ

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು

March 31, 2023
ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !
ದೇಶ-ವಿದೇಶ

ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !

March 28, 2023
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ
ದೇಶ-ವಿದೇಶ

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ

March 20, 2023
ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?
ದೇಶ-ವಿದೇಶ

ಇಬ್ಬರು ಹೆಂಡತಿಯರ ಮುದ್ದಿನ ಗಂಡ ಮಾಡಿಕೊಂಡಿದ್ದಾನೆ ಒಪ್ಪಂದ! ; ಮಾಡಿಕೊಂಡಿರುವ ಒಪ್ಪಂದವೇನು ಗೊತ್ತಾ?

March 15, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.