ಯಾವುದು ಆಕ್ಷೇಪಾರ್ಹ, ಯಾವುದು ಅವಹೇಳನಕಾರಿ ಎಂದು ಸರ್ಟಿಫಿಕೇಟ್ ಕೊಡುವುದು ಕಾಂಗ್ರೆಸ್ ಸರ್ಕಾರದ ಕೆಲಸವಲ್ಲ. ಕರ್ನಾಟಕದಲ್ಲಿ (Taliban rule in Karnataka) ತಾಲಿಬಾನ್ ಅಡಳಿತ
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಛಾಟಿ ಏಟು ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ (Taliban rule in Karnataka) ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಇದರಲ್ಲಿ ಮೂಗು ತೂರಿಸುತ್ತಿರುವ ಸಿದ್ದರಾಮಯ್ಯರವರ ಸರ್ಕಾರ
ಪೂರ್ವಾಗ್ರಹ ಪೀಡಿತವಾಗಿದೆ. ರಾಜ್ಯದಲ್ಲಿ ಎಟಿಎಂ ಸರ್ಕಾರದ ವಿದ್ಯುತ್ ದರ ಏರಿಕೆ ವಿರುದ್ಧ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಸಮರ ಸಾರಿರುವ ಜನತೆಯ ಕೂಗು,
ಇದನ್ನು ಓದಿ : ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ.. ವಿದ್ಯಾರ್ಥಿಗಳಿಗೆ 20 ರಿಂದ 35 ಸಾವಿರ ಬಹುಮಾನ
ಸಿದ್ದರಾಮಯ್ಯರವರ ಕಿವುಡು ಎಟಿಎಂ ಸರ್ಕಾರಕ್ಕೆ ಕೇಳುತ್ತಿಲ್ಲ. ಖಜಾನೆ ತುಂಬಿದರೆ ಸಾಕು ಎನ್ನುವ ಹಿಟ್ಲರ್ ಸರ್ಕಾರದ ಮನಸ್ಥಿತಿಗೆ ಧಿಕ್ಕಾರ ಎಂದು ಟೀಕಿಸಿದೆ.
ಇನ್ನೊಂದು ರಾಜ್ಯದಲ್ಲಿ ಹಿಟ್ಲರ್ ಸರ್ಕಾರದಿಂದ ತಾಲಿಬಾನ್ ಅಡಳಿತಕ್ಕೆ ಒತ್ತು ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದ ಮೇಲೆ ನಿರ್ಬಂಧ, ರಾಜಕೀಯ ವಿರೋಧಿಗಳ ಮೇಲೆ ನಕಲಿ ಕೇಸ್,
ಸರ್ಕಾರವನ್ನು ಪ್ರಶ್ನಿಸುವ ಸರ್ಕಾರಿ ನೌಕರರ ಅಮಾನತು, ಕ್ರಾಂತಿಕಾರಿಗಳ ಬಗೆಗಿನ ಪಾಠಕ್ಕೆ ಕೂಕ್, ತುಷ್ಟೀಕರಣದ ಪರಿಣಾಮ ಹದಗೆಟ್ಟ ಕಾನೂನು ಸುವ್ಯವಸ್ಥೆ ಎಂದು ವಾಗ್ದಾಳಿ ನಡೆಸಿದೆ.
ಮೈಮರೆತ ಸಿದ್ದರಾಮಯ್ಯರವರ ಎಟಿಎಂ ಸರ್ಕಾರದಿಂದ ಎದುರಾದ ಸಂಕಷ್ಟಕ್ಕಿಲ್ಲ ಪರಿಹಾರ. ಚಂಡಮಾರುತದ ಅಬ್ಬರಕ್ಕೆ ಕಂಗಾಲಾದ ಮೀನುಗಾರರನ್ನು ಕೇಳುವರರಿಲ್ಲ. ಜಲಾಶಯ ಬರಿದಾಗಿ ಬಿತ್ತನೆ
ಮಾಡಲಾಗದೆ ಕೈಕಟ್ಟಿ ಕೂತ ಅನ್ನದಾತನ ಕಣ್ಣೀರು ಒರೆಸುವವರಿಲ್ಲ. ಜನಸಾಮಾನ್ಯನ ಮೇಲೆ ಬೆಲೆ ಏರಿಕೆಯ ಬರೆ. ಕೈಗಾರಿಕೆಗಳು ಮುಚ್ಚುವ ಭೀತಿ, ಉದ್ಯೋಗ ನಷ್ಟಕ್ಕೆ ಕ್ಯಾರೇಯಿಲ್ಲ ಎಂದು ಟೀಕಿಸಿದೆ.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಕೆಲ ಸರ್ಕಾರಿ ನೌಕರರ ಮೇಲೆ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶಿಸಲಾಗಿದೆ.
ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹ ಮಾಡುವ ಸಲುವಾಗಿ ವಿದ್ಯುತ್, ನೀರು, ಮಧ್ಯ, ತೈಲ ಸೇರಿದಂತೆ ಅನೇಕ ವಸ್ತುಗಳ ಮೇಲಿನ ರಾಜ್ಯ ತೆರಿಗೆಯನ್ನು ಹೆಚ್ಚಿಸಲಾಗಿದೆ.
ಕಾಂಗ್ರೆಸ್ ಸರ್ಕಾರದ ಈ ಕ್ರಮಗಳ ವಿರುದ್ದ ವಿಪಕ್ಷ ಬಿಜೆಪಿ ಪ್ರತಿಭಟನೆಗಳನ್ನು ನಡೆಸುತ್ತಿದೆ.