ಮರದಲ್ಲಿ ಬಿಟ್ಟಿರುವ ಹುಣಸೆ ಹಣ್ಣು (Tamarind fruit) ತಿನ್ನೋದು ಅಂದರೆ ಬಹುತೇಕರಿಗೆ ಇಷ್ಟ. ಸಾಂಬಾರ್ ಮಸಾಲೆಗೂ ಕೂಡ (Tamarind seeds contain super vitamins) ಹುಣಸೆಹಣ್ಣು ಹಾಕುತ್ತಾರೆ. ಇನ್ನೂ ಕೆಲವರು ಹುಣಸೆ ಹಣ್ಣಿನ ರಸ ತೆಗೆದು ಜ್ಯೂಸ್ ರೀತಿಯಲ್ಲೂ ಕೂಡ ಕುಡಿಯುತ್ತಾರೆ. ಆದರೆ ಹುಣಸೆ ಹಣ್ಣಿನ ಬೀಜ (Tamarind seed) ಅಷ್ಟಾಗಿ ಯಾರೂ ತಿನ್ನೋದಿಲ್ಲ.
ಆದರೆ ಹುಣಸೆ ಹಣ್ಣಿನ ಬೀಜದದಲ್ಲಿರುವ ಆರೋಗ್ಯ ಲಾಭ ತಿಳಿದಿರುವರು ವಾರಕ್ಕೊಮ್ಮೆ ಇಲ್ಲ ಎರಡು ಬಾರಿಯಾದರೂ ಹುಣಸೆ ಹಣ್ಣು ಬೀಜ ಸೇವನೆ ಮಾಡುತ್ತಾರೆ. ಬಹಳ ಹಿಂದಿನ ಕಾಲದಿಂದಲೂ ಸಹ ಹುಣಸೆ ಹಣ್ಣನ್ನು ಆಯುರ್ವೇದ (Ayurveda) ಪದ್ಧತಿಯಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ (Health problems) ಔಷಧಿಯಾಗಿ ಬಳಕೆ ಮಾಡಿಕೊಂಡು ಬಂದಿದ್ದಾರೆ.
ನಾವು ಪ್ರತಿದಿನ ಹುಣಸೆಹಣ್ಣನ್ನು ಬಳಕೆ ಮಾಡುವುದರಿಂದ ನಮಗೆ ಗೊತ್ತಿಲ್ಲದೆ ನಮ್ಮ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳಿವೆ.

ಹುಣಸೆ ಹಣ್ಣಿನಲ್ಲಿ ಖನಿಜಾಂಶಗಳು (Minerals), ವಿಟಮಿನ್ ಸಿ, ಫಾಸ್ಪರಸ್, ಪೊಟ್ಯಾಶಿಯಂ (Potassium), ಮೆಗ್ನೀಷಿಯಂ, ಕ್ಯಾಲ್ಸಿಯಂ, ವಿಟಮಿನ್ ಎ, ಜಿಂಕ್, ನಯಾಸಿನ್, ರಿಬೋಫ್ಲಾವಿನ್ (Riboflavin) ಮತ್ತು ಕಬ್ಬಿಣದ ಅಂಶ ಇದರಲ್ಲಿ ಅಪಾರ ಪ್ರಮಾಣದಲ್ಲಿ ಸಿಗುತ್ತದೆ. ರೋಗ ನಿರೋಧಕ ವ್ಯವಸ್ಥೆಯನ್ನು (Immune system) ಅಭಿವೃದ್ಧಿ ಪಡಿಸುವಲ್ಲಿ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು (Digestive system) ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಹುಣಸೆ ಹಣ್ಣಿನ ಬೀಜವನ್ನ ನಿಯಮಿತವಾಗಿ ಸೇವನೆ ಮಾಡೋದರಿಂದ ಹೃದಯದ ಸಮಸ್ಯೆಗಳು (Heart problems) ನಿವಾರಣೆ ಆಗಲಿದೆ. ಮುಖ್ಯವಾಗಿ ದೇಹದ ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ (Bad cholesterol) ಅಂಶದ ಮೇಲೆ ಪರಿಣಾಮ ಬೀರುವ ಮೂಲಕ ಹೃದಯದ ಅಪಧಮನಿಗಳನ್ನು ಸ್ವಚ್ಛಗೊಳಿಸಿ ಅತ್ಯುತ್ತಮವಾದ ರಕ್ತಸಂಚಾರ ಇಡೀ ದೇಹದ ತುಂಬಾ ಉಂಟಾಗುವಂತೆ ಸರಾಗವಾಗಿ ನೋಡಿಕೊಳ್ಳುತ್ತದೆ.
ಹಲ್ಲುಗಳಿಗೆ ಪ್ರಯೋಜನಕಾರಿ: ಹುಣಸೆ ಬೀಜದ ಪುಡಿಯನ್ನು ನಿಮ್ಮ ವಸಡು ಮತ್ತು ಹಲ್ಲುಗಳ ಮೇಲೆ ಉಜ್ಜುವುದರಿಂದ ಹಲ್ಲುಗಳು ಗಟ್ಟಿಗೊಳಿಸುತ್ತವೆ.ತಂಪು ಪಾನೀಯಗಳ (Soft drinks) ಅತಿಯಾದ ಸೇವನೆ ಮತ್ತು ಧೂಮಪಾನ ಮಾಡುವುದರಿಂದ ವಸಡುಗಳ ಸಮಸ್ಯೆ ಉಂಟಾಗಿರುತ್ತದೆ. ಈ ಸಮಸ್ಯೆಗಳು ನಿವಾರಣೆ ಆಗಲಿದೆ.
ಜೀರ್ಣಕ್ರಿಯೆ ಸುಧಾರಣೆ: ಹುಣಸೆ ಬೀಜದ ರಸ ನಿಯಮಿತವಾಗಿ ಸೇವನೆ ಮಾಡೋದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. (Tamarind seeds contain super vitamins) ಆಹಾರದ ನಾರಿನಂಶದಲ್ಲಿ ಸಮೃದ್ಧವಾಗಿದ್ದು, ಕೊಲೆಸ್ಟ್ರಾಲ್ ಸಮಸ್ಯೆ (Cholesterol problem) ನಿವಾರಣೆ ಆಗಲಿದೆ.
ಇದನ್ನೂ ಓದಿ: ಕುಂಬಳಕಾಯಿ ಬೀಜ ಸೇವಿಸಿ ಕರುಳಿನ ಆರೋಗ್ಯ ಹಾಗೂ ಜೀರ್ಣಕ್ರಿಯೆ ಕಾಪಾಡಿಕೊಳ್ಳಿ
ಸೋಂಕುಗಳನ್ನು ತಡೆಯಬಹುದು: ಹುಣಸೆ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ (Antibacterial property) ಗುಣಗಳಿಂದಾಗಿ, ಅವು ನಿಮ್ಮ ಚರ್ಮವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕರುಳು ಮತ್ತು ಮೂತ್ರನಾಳದ ಸೋಂಕಿನಿಂದಲೂ ನಿಮ್ಮನ್ನು ರಕ್ಷಿಸುತ್ತದೆ.
ಮಧುಮೇಹವನ್ನು ನಿರ್ವಹಿಸಲು ಸಹಾಯ: ಹುಣಸೆ ಬೀಜದ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar levels) ನೈಸರ್ಗಿಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ಇನ್ನೂ ಹುಣಸೆ ಬೀಜ ಹಾಗೂ ಅದರ ಬೀಜ ಸೇವನೆ ಮಾಡುವುದರಿಂದ ಹೊಟ್ಟೆನೋವು, ಮಲಬದ್ಧತೆ, ಅತಿಸಾರ ಸಮಸ್ಯೆಗಳು ಪರಿಹಾರವಾಗಲಿದೆ. ಹುಣಸೆ ಬೀಜದ ಪುಡಿಯನ್ನು ಪ್ರತಿದಿನ ಸೇವಿಸುವುದರಿಂದ ಕೆಮ್ಮು, ಕಫ ಸಮಸ್ಯೆ (Cough, phlegm problem) ನಿವಾರಣೆ ಆಗುತ್ತದೆ.