English English Kannada Kannada

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ !

ಸೇರಿನಾಯಕನ ಪಾಳ್ಯಂ ಪಂಚಾಯತ್ ಕ್ಷೇತ್ರದ 9 ನೇ ವಾರ್ಡ್‌ಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಕಾರ್ತಿಕ್ ಎನ್ನುವರು ಒಂದೇ ಒಂದು ಮತ ಗಳಿಸಿದ್ದಾರೆ, ಗಮನಾರ್ಹವೆಂದರೆ ಕಾರ್ತಿಕ್ ಕುಟುಂಬದಲ್ಲಿ ಅವರ ಹೆಂಡತಿಯೂ ಸೇರಿದಂತೆ 6ಜನ ಇದ್ದಾರೆ.
Share on facebook
Share on google
Share on twitter
Share on linkedin
Share on print

ಚೆನ್ನೈ ಅ 13 : ತಮಿಳುನಾಡು ರಾಜಕಾರಣದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಸಾಧಿಸಲು ಪದೇ ಪದೇ ವಿಫಲವಾಗುತ್ತಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಣ್ಣಾಮಲೈ ಸೇರಿದಂತೆ ಹಲವು ಆಭ್ಯರ್ಥಿಗಳು ಸೋಲನುಭವಿಸಿದ್ದರು.

ಇದಕ್ಕೆ ಉದಾಹರಣೆ ಎಂಬಂತೆ ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಕೇವಲ ಒಂದೇ ಒಂದು ಮತ ಮಡೆದು ಹೀನಾಯವಾಗಿ ಸೋಲನುಭವಿಸಿದ್ದಾರೆ. ಕುಟುಂಬದಲ್ಲಿ ಅವರ ಸದಸ್ಯರಿದ್ದರೂ ತನ್ನದೇ ಒಂದೇ ಒಂದು ಮತ ಪಡೆಯುವ ಮೂಲಕ ಸೋಲನುಭವಿಸಿದ್ದಾರೆ

ಇತ್ತೀಚೆಗೆ ನಡೆದ ಕೊಯಮತ್ತೂರು ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೇರಿನಾಯಕನ ಪಾಳ್ಯಂ ಪಂಚಾಯತ್ ಕ್ಷೇತ್ರದ 9 ನೇ ವಾರ್ಡ್‌ಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಕಾರ್ತಿಕ್ ಎನ್ನುವರು ಒಂದೇ ಒಂದು ಮತ ಗಳಿಸಿದ್ದಾರೆ, ಗಮನಾರ್ಹವೆಂದರೆ ಕಾರ್ತಿಕ್ ಕುಟುಂಬದಲ್ಲಿ ಅವರ ಹೆಂಡತಿಯೂ ಸೇರಿದಂತೆ 6ಜನ ಇದ್ದಾರೆ.

1,551 ಮತಗಳಲ್ಲಿ 991 ಮತಗಳು ಚಲಾವಣೆಗೊಂಡಿದ್ದವು. ಅದರಲ್ಲಿ ಡಿಎಂಕೆ ಅನುರಾಜ್ 387 ಮತ ಪಕ್ಷೇತರ ಅಭ್ಯರ್ಥಿ ಜಯರಾಜ್ 240 ಮತ ಪಡಿಸಿದ್ದಾರೆ. ವೈಥಿಯಾಲಿಂಗಂ 198 ಮತ ಹಾಗೂ 3 ಮತಗಳು ತಿರಸ್ಕೃತಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ 84 ಮತ ಪಡೆದಿದ್ದರು, ಆದರೆ ವಬಿಜೆಪಿಯಿಂದ ಸ್ಪರ್ಧಿಸಿದ್ದ ಕಾರ್ತಿಕ್ ಅವರು 1 ಮತ ಪಡೆದಿದ್ದಾರೆ. ಕಾರ್ತಿಕ್ ಅವರು ಕೊಯಮತ್ತೂರು ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರು ಕೂಡ ಹೌದು, ಬಿಜೆಪಿಯ ರಾಷ್ಟ್ರೀಯ ಪಕ್ಷದಲ್ಲಿದ್ದರೂ ಕೇವಲ ಒಂದು ಮತ ಪಡೆದ ಕಾರ್ತಿಕ್ ಅವರನ್ನು ಹಲವರು ಟ್ರೋಲ್ ಮಾಡಿದ್ದು ಇದೀಗ ವೈರಲ್ ಆಗಿದೆ.

Submit Your Article