Tamilnadu : ತಮಿಳುನಾಡಿನ(Tamilnadu Honour Killing) ತಿರುನಲ್ವೇಲಿಯಲ್ಲಿ ಮಹಿಳೆಯೊಬ್ಬಳು ತನ್ನ 19 ವರ್ಷದ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ಒಂದೇ ಕಾರಣಕ್ಕೆ ಮಗಳನ್ನೇ ಹತ್ಯೆಗೈದು ತಾನು ಸಾವಿಗೆ ಶರಣಾಗಲು ಯತ್ನಿಸಿದ್ದಾರೆ.
ಪ್ರೀತಿಯಲ್ಲಿ ಬಿದ್ದು, ಅನ್ಯ ಜಾತಿಯ ಯುವಕನೊಂದಿಗೆ ಸಂಪರ್ಕದಲ್ಲಿದ್ದ ಕಾರಣ, ತಾಯಿ ಮಗಳಿಗೆ ಪದೇ ಪದೇ ಎಚ್ಚರಿಸಿದ್ದಾರೆ.
ಆದ್ರೆ, ಮಗಳು ಪ್ರೀತಿಯನ್ನು ನಿರಾಕರಿಸದ ಕಾರಣ ಆಕೆಯನ್ನು ಹತ್ಯೆಗೈದು ತಾನು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದ್ರೆ, ಅಕ್ಕಪಕ್ಕದವರು ಕೂಡಲೇ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
https://youtu.be/cGcAHe7IqIA ಕೆ.ಆರ್ ರಸ್ತೆಯಲ್ಲಿ ಚೆಂದದ ಬಿದಿರು ಮಾರುವ ಬಡ ಕುಟುಂಬಗಳು.
ಆರೋಪಿ ಮಹಿಳೆಯನ್ನು ಆರುಮುಗ ಕಣಿ ಎಂದು ಗುರುತಿಸಲಾಗಿದ್ದು, ಸಿವಾಲ್ಪೇರಿ ಗ್ರಾಮದವರು ಎನ್ನಲಾಗಿದೆ.
ಮಹಿಳೆ ಚೆನ್ನೈನಲ್ಲಿ(Chennai) ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪಿಚೈ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಇಬ್ಬರಿಗೆ 19 ವರ್ಷದ ಅರುಣಾ ಎಂಬ ಮಗಳಿದ್ದಳು.
ಅರುಣಾ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು, ವಿದ್ಯಾಭ್ಯಾಸದ ಮಧ್ಯೆ ತಾನು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ್ದಾಳೆ ಹಾಗೂ ತಾನು ಪ್ರೀತಿಸುತ್ತಿರುವುದಾಗಿ ತನ್ನ ತಾಯಿಯ ಬಳಿ ಹೇಳುವ ಮೂಲಕ ಒಪ್ಪಿಕೊಂಡಿದ್ದಾಳೆ.
ಅರುಣಾ ತೇವರ್ ಸಮುದಾಯದವಳಾಗಿದ್ದು, ನಾಡಾರ್ ಸಮುದಾಯದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ : https://vijayatimes.com/uttarakhand-madarasa/
ಮಗಳು ಈ ವಿಷಯ ಹೇಳಿಕೊಳ್ಳುತ್ತಿದ್ದಂತೆ ಸಂಚು ರೂಪಿಸಿದ ತಾಯಿ, ಈ ವಿಷಯದ ಬಗ್ಗೆ ಮಾತನಾಡುವ ನೆಪದಲ್ಲಿ ಆರುಮುಗ ಕಣಿ ತನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಾಳೆ.
ಅರುಣಾ ಮನೆಗೆ ಹೋದಾಗ, ಅವಳ ತಾಯಿ ಮಗಳು ಅನ್ಯ ಜಾತಿಯ ಹುಡುಗನೊಂದಿಗೆ ಪ್ರೀತಿ ಮಾಡಿರುವುದನ್ನು ಕೇಳಿ ಆಘಾತಕೊಳಗಾಗಿದ್ದಾಳೆ.
ನವೆಂಬರ್ 23, ಬುಧವಾರದಂದು ಅರುಣಾ ತಾಯಿ ಆರುಮುಗ ಕಣಿ ಮಗಳಿಗೆ ಬೇರೆ ಹುಡುಗನೊಂದಿಗೆ ಮದುವೆ ಮಾಡಲು ವರನನ್ನು ಮನೆಗೆ ಭೇಟಿ ನೀಡಲು ಮುಂಚಿತವಾಗಿಯೇ ಹೇಳಿದ್ದಾರೆ.
ಆದ್ರೆ, ಅರುಣಾ ಹಠವಾಗಿ ನಿಂತು ತಾನು ಬೇರೊಬ್ಬರನ್ನು ಪ್ರೀತಿಸುತ್ತಿರುವ ಬಗ್ಗೆ ವರನ ಮನೆಯವರಿಗೆ ತಿಳಿಸುವುದಾಗಿ ತನ್ನ ತಾಯಿಗೆ ಬೆದರಿಕೆ ಹಾಕಿದ್ದಾಳೆ.

ಇದರಿಂದ ಮನನೊಂದ ತಾಯಿ ಆರುಮುಗ ಕಣಿ ಸಿಟ್ಟಿನಿಂದ ಮಗಳು ಅರುಣಾಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ಮಗಳನ್ನು ಕೊಂದೆ ಎಂಬ ಅರಿವಾದಾಗ ಆರುಮುಗ ಕಣಿ ಕೂದಲಿಗೆ ಹಚ್ಚುವ ಡೈ ಪೌಡರ್ ಅನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಇದನ್ನೂ ಓದಿ : https://vijayatimes.com/kantara-effect/
ಆದ್ರೆ, ಆಕೆಯನ್ನು ನೆರೆಹೊರೆಯವರು ಕೂಡಲೇ ಓಡಿ ಬಂದು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿ ಆಕೆಯ ಜೀವವನ್ನು ಉಳಿಸಿದ್ದಾರೆ. ಈ ಪ್ರಕರಣ ಶಿವಲಪೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಈ ಪ್ರಕರಣ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.