‘ದೇವರುಗಳಲ್ಲೇ ಅತ್ಯಂತ ಬಲಶಾಲಿ ದೇವರು ಯಾರು?’ ಎಂದು ತಮಿಳುನಾಡಿನ(Tamilnadu) ಶಿಕ್ಷಕಿಯೊಬ್ಬಳು(Teacher) ವಿದ್ಯಾರ್ಥಿನಿಯನ್ನು ಪ್ರಶ್ನಿಸಿದ್ದು, ಅದಕ್ಕೆ ‘ನನಗೆ ಶಿವ ಅತ್ಯಂತ ಶಕ್ತಿಶಾಲಿ ದೇವರೆಂದು ಅನಿಸುತ್ತೇ’ ಎಂದು ವಿದ್ಯಾರ್ಥಿನಿ ನೀಡಿದ ಉತ್ತರವನ್ನು ಅಲ್ಲಗಳೆದು, ‘ದೇವರುಗಳಲ್ಲೇ ಜೀಸಸ್ ಅತ್ಯಂತ ಶಕ್ತಿ ಹೊಂದಿರುವ ದೇವರೆಂದು’ ಪಾಠ ಮಾಡಿದ ಶಿಕ್ಷಕಿಯ ವಿರುದ್ದ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ(Police Station) ದೂರು ನೀಡಿದ್ದಾಳೆ.

ತಮಿಳುನಾಡಿನ ತಿರುಪ್ಪೂರ್ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ‘ನಮ್ಮ ಶಾಲೆಯಲ್ಲಿ ನಮ್ಮನ್ನು ಬಲವಂತವಾಗಿ ಮತಾಂತರ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಧಾರ್ಮಿಕ ನಂಬಿಕೆಗಳನ್ನು ಅವಹೇಶನ ಮಾಡಲಾಗುತ್ತಿದೆ’ ಎಂದು ಶಾಲೆಯ ಕ್ರಿಶ್ಚಿಯನ್ ಶಿಕ್ಷಕಿಯ ವಿರುದ್ದ ಆರೋಪ ಮಾಡಿದ್ದಾಳೆ.
ನಾನು ಹಣೆಯ ಮೇಲೆ ವಿಭೂತಿ ಹಾಕಿದ್ದಕ್ಕೆ ನನ್ನನ್ನು ‘ವಿಭೂತಿ ಕತ್ತೆ’ ಎಂದು ಹೀಯಾಳಿಸಿದ್ದರು. ಅಲ್ಲದೇ ಒಂದು ಬಾರಿ ನನ್ನ ಕೈಯನ್ನು ನೀರಿನಲ್ಲಿರಿಸಿ ಬಲವಂತವಾಗಿ ಯೇಸುವಿನ ನಾಮ ಪಠಣ ಮಾಡಿಸಿದ್ದರು. ನಂತರ ನನ್ನ ಕೈಯನ್ನು ಹಿಂದೂ ಹುಡುಗಿರ ಹೊಟ್ಟೆಯನ್ನು ಮೂರು ಬಾರಿ ಮುಟ್ಟಿಸಿದ್ದರು. ಇನ್ನು ಪ್ರತಿದಿನ ತರಗತಿಯಲ್ಲಿ ಜೀಸಸ್ ಪ್ರಾರ್ಥನೆ ಮಾಡುವಂತೆ ಒತ್ತಡ ಹಾಕುತ್ತಿದ್ದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಇನ್ನು ಒಂದು ದಿನ ಶಿಕ್ಷಕಿ ತರಗತಿಯಲ್ಲಿ ‘ನಮಗೆ ಪ್ರಾಣ ನೀಡಿ ರಕ್ಷಣೆ ನೀಡುತ್ತಿರುವವರು ಯಾರು?’ ಎಂದು ಪ್ರಶ್ನಿಸಿದ್ದರು. ಆಗ ನಾವೆಲ್ಲರು ಬೇರೆಬೇರೆ ದೇವರುಗಳ ಹೆಸರುಗಳನ್ನು ಹೇಳಿದ್ದೇವು. ಆದರೆ ಅದೆಲ್ಲವನ್ನು ಅಲ್ಲಗಳೆದ ಶಿಕ್ಷಕಿ ‘ನಮಗೆ ಪ್ರಾಣ ನೀಡಿರುವುದು ಜೀಸಸ್, ನಮ್ಮನ್ನು ರಕ್ಷಿಸುತ್ತಿರುವುದು ಜೀಸಸ್’ ಎಂದು ಹೇಳಿದ್ದರು. ಹೀಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಶಿಕ್ಷಕಿ ವಿದ್ಯಾರ್ಥಿಗಳನ್ನು ಮತಾಂತರ ಮಾಡಲು ಪ್ರಯತ್ನ ನಡೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಶಿಕ್ಷಕಿಯನ್ನು ಈಗಲೇ ಕೆಲಸದಿಂದ ವಜಾ ಮಾಡಬೇಕು. ಡಿಎಂಕೆ ಸರ್ಕಾರ ಮತಾಂತರ ಮಾಡಲು ಕುಮ್ಮಕ್ಕು ನೀಡುತ್ತಿದೆ. ಪರೋಕ್ಷವಾಗಿ ಕ್ರಿಶ್ಚಿಯನ್ ಮಿಷನರಿಗಳ ಜೊತೆ ಕೆಲಸ ಮಾಡುತ್ತಿದೆ. ಮತಾಂತರವನ್ನು ಡಿಎಂಕೆ ಸರ್ಕಾರ ಮೂಖ ಪ್ರೇಕ್ಷಕರಂತೆ ವೀಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.