ನವದೆಹಲಿ ಅ 9 : ಸ್ವಾಧೀನಪಡಿಸಿಕೊಳ್ಳುವ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದುಕೊಂಡಿದೆ. ಈ ಸಂದರ್ಭದಲ್ಲಿ ಟಾಟಾ ಸನ್ಸ್ ಮುಖ್ಯಸ್ಥ ರತನ್ ಟಾಟಾ ಅವರು ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ಜೆಆರ್‌ಡಿ ಟಾಟಾ ಅವರು ಏರ್ ಇಂಡಿಯಾ ವಿಮಾನದಿಂದ ಕೆಳಗಿಳಿಯುವ ಚಿತ್ರವನ್ನು ರತನ್ ಟಾಟಾ ಹಂಚಿಕೊಂಡಿದ್ದಾರೆ. ಇದು ಸುಮಾರು 70 ವರ್ಷಗಳ ಹಿಂದಿನ ಚಿತ್ರವಾಗಿದೆ.
ಟ್ವೀಟ್ ಮಾಡಿರುವ ರತನ್ ಟಾಟಾ, “ಟಾಟಾ ಗ್ರೂಪ್ ಇಂಡಿಯಾ ಬಿಡ್ ಗೆದ್ದಿರುವುದು ನಿಜಕ್ಕೂ ಉತ್ತಮ ಸುದ್ದಿ. ಏರ್ ಇಂಡಿಯಾವನ್ನು ಮರುನಿರ್ಮಾಣ ಮಾಡಲು ಸಾಕಷ್ಟು ಪ್ರಯತ್ನಗಳು ಅಗತ್ಯವಿದೆ ಎಂಬುದು ನಿಜ, ಇದು ವಿಮಾನ ಯಾನ ಉದ್ಯಮದಲ್ಲಿ ಟಾಟಾ ಗ್ರೂಪ್ ಪ್ರಸ್ತುತತೆಗೆ ಬಲಿಷ್ಠ ಮಾರುಕಟ್ಟೆ ಅವಕಾಶವನ್ನು ಒದಗಿಸುತ್ತದೆ ಎಂದು ನಂಬಿದ್ದೇನೆ” ಎಂದಿದ್ದಾರೆ.
ಭಾವನಾತ್ಮಕವಾಗಿ ಹೇಳುವುದಾದರೆ, ಜೆಆರ್‌ಡಿ ಟಾಟಾ ಅವರ ನಾಯಕತ್ವದಲ್ಲಿ ಒಂದು ಕಾಲದಲ್ಲಿ ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ವಿಮಾನಯಾನವಾಗಿತ್ತು. ಈ ಪ್ರತಿಷ್ಠೆಯನ್ನು ಮರುಸ್ಥಾಪಿಸುವ ಅವಕಾಶವನ್ನು ಮತ್ತೆ ಟಾಟಾ ಪಡೆದುಕೊಂಡಿದೆ. ಇಂದು ಜೆಆರ್‌ಡಿ ಟಾಟಾ ಇರುತ್ತಿದ್ದರೆ ಅತೀವ ಸಂತೋಷ ಪಡುತ್ತಿದ್ದರು ಎಂದಿದ್ದಾರೆ.