Bangalore: ದೇಶೀಯ ಕಾರು ಉತ್ಪಾದನಾ ಕಂಪನಿ (Car manufacturing company) ಟಾಟಾ ಮೋಟಾರ್ಸ್ (Tata Motors) 40 ವರ್ಷಗಳ ಬಳಿಕ ಮಾರುತಿ ಕಂಪನಿಯ (Maruti Company) ದಾಖಲೆಯನ್ನು ಹಿಂದಿಕ್ಕಿದೆ. ಕಳೆದ 40 ವರ್ಷಗಳಿಂದ ಭಾರತದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಮಾರುತಿ ಕಂಪನಿಯ ಕಾರುಗಳೇ (Maruti company cars) ಮಾರಾಟವಾಗುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ 2024ರಲ್ಲಿ ಟಾಟಾ ಕಂಪನಿಯ ಪಂಚ್ ಕಾರು (Punch car of Tata company) ಅತಿ ಹೆಚ್ಚು ಮಾರಾಟವಾಗುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ.

2024ರಲ್ಲಿ ಯಾವ ಕಾರು ಎಷ್ಟು ಮಾರಾಟ (Which car will sell how much in 2024?)
- ಟಾಟಾ ಪಂಚ್ (Tata Punch) – 2,02,030
- ವ್ಯಾಗನ್ ಆರ್ (Wagon R) – 1,90,091
- ಮಾರುತಿ ಎರ್ಟಿಗಾ (Maruti Ertiga) – 1,88,160
- ಮಾರುತಿ ಬ್ರೀಜಾ (Maruti Breeza) – 1,88, 160
- ಹುಂಡೈ ಕ್ರೇಟಾ (Hyundai Creta) – 1,86,919
ಟಾಪ್-5 ರಲ್ಲಿ ಮೂರು ಸ್ಥಾನ ಪಡೆಯುವಲ್ಲಿ ಮಾರುತಿ ಸುಜುಕಿ (Maruti Suzuki) ಯಶಸ್ವಿಯಾಗಿದೆ. ಇನ್ನುಳಿದ ಎರಡು ಸ್ಥಾನಗಳಲ್ಲಿ ಒಂದು ಟಾಟಾ (Tata) ಹಾಗೂ ಹುಂಡೈ (Hyundai) ಕಂಪನಿಗಳ ಪಾಲಾಗಿದೆ. ಮಾರುತಿ ಕಾರುಗಳ ಮಾರುಕಟ್ಟೆ ಶೇ41ಕ್ಕೆ ಕುಸಿದಿದೆ. 2018ರಲ್ಲಿ ಒಟ್ಟು 33.49 ಲಕ್ಷ ಕಾರುಗಳು ಮಾರಾಟವಾಗಿತ್ತು. ಇದರಲ್ಲಿ ಟಾಪ್-5 ಒಳಗಡೆ ಎಲ್ಲಾ ಮಾರುತಿ ಕಂಪನಿಯ ಕಾರುಗಳೇ ಸ್ಥಾನ ಪಡೆದಿದ್ದವು.

ಹೆಚ್ಚು ವರ್ಷಗಳ ಕಾಲ ಮೊದಲ ಸ್ಥಾನದಲ್ಲಿದ್ದ ಕಾರುಗಳು :
1957 – 1984 : ಅಂಬಾಸಿಡರ್( ಹಿಂದೂಸ್ಥಾನ್ ಮೋಟಾರ್ಸ್)1985-2004 – ಮಾರುತಿ 800
2005-2017 – ಮಾರುತಿ ಅಲ್ಟೋ (Maruti Alto)
ಯಾವ ವರ್ಷ ಯಾವ ಕಾರು ಹೆಚ್ಚು ಮಾರಾಟ?
2018 – ಮಾರುತಿ ಡಿಸೈರ್ (Maruti Desire) – 2,64,612
2019 – ಮಾರುತಿ ಅಲ್ಟೋ (Maruti Alto) – 2,08,087
2020 – ಮಾರುತಿ ಸ್ವಿಫ್ಟ್ (Maruti Swift) – 1,60,765
2021 – ಮಾರುತಿ ವ್ಯಾಗನ್ ಆರ್ (Maruti Wagon R) – 1,83,851
2022 – ಮಾರುತಿ ವ್ಯಾಗನ್ ಆರ್ (Maruti Wagon R) – 2,17,317
2023 – ಮಾರುತಿ ಸ್ವಿಫ್ಟ್ (Maruti Swift) – 2,03,469
2024 – ಟಾಟಾ ಪಂಚ್ (Tata Punch) – 2,02,030