ಟಾಟಾ(Tata IPL) ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022 ರಲ್ಲಿ ಇದು ದೊಡ್ಡ ಡಬಲ್-ಹೆಡರ್ ದಿನವಾಗಲಿದೆ ಎಂದೇ ಹೇಳಬಹುದು. ಹೌದು, ಏಕೆಂದರೆ ಇತಿಹಾಸದಲ್ಲಿ ಎರಡು ಅತ್ಯಂತ ಯಶಸ್ವಿ ತಂಡಗಳಾದ ಕ್ಯಾಪ್ಟನ್ ಕೂಲ್(Captain Cool) ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ಮುಂದಾಳತ್ವದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತು ರೋಹಿತ್ ಶರ್ಮಾ(Rohit Sharma) ನಾಯಕತ್ವದಲ್ಲಿರುವ ಮುಂಬೈ ಇಂಡಿಯನ್ಸ್(Mumbai Indians) ತಂಡಗಳು ಇದೇ ಶನಿವಾರ ಮತ್ತು ಭಾನುವಾರ ತಮಗೆ ಎದುರಾಗಿರುವ ತಂಡಗಳ ಜೊತೆಗೆ ಸೆಣಸಾಡುವ ಮೂಲಕ ಹೊಸ ಸೀಸನ್ ನಲ್ಲಿ ತಮ್ಮ ಖಾತೆ ತೆರೆಯಲು ವಿಶೇಷ ಹೋರಾಟ ನಡೆಸಲು ಸಜ್ಜಾಗಿವೆ.
CSK ದಕ್ಷಿಣ ಭಾರತದ ಡರ್ಬಿಯಲ್ಲಿ ಎದುರಾಳಿ ತಂಡವಾಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದೊಟ್ಟಿಗೆ ಸೆಣಸಾಡಲಿದೆ. ಆದ್ರೆ ಮುಂಬೈ ಇಂಡಿಯನ್ಸ್ ತಂಡ ತಮ್ಮ ಹಳೆಯ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗಿದೆ. ಟಾಟಾ ಐಪಿಎಲ್ 2022 ರ ಹೊಸ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಸತತ 3 ಸೋಲಿನ್ನು ಅನುಭವಿಸಿ ಇನ್ನು ತಮ್ಮ ಖಾತೆಯನ್ನು ತೆರೆದಿಲ್ಲ, ಇದು ರೋಹಿತ್ ಶರ್ಮಾ ‘ಅವರನ್ನು ಹತಾಶೆಗೆ ನೂಕಿದೆ ಎಂದೇ ಹೇಳಬಹುದು.
ಮತ್ತೊಂದೆಡೆ, ರವೀಂದ್ರ ಜಡೇಜಾ ನಾಯಕತ್ವದಲ್ಲಿ ಮುನ್ನುಗ್ಗುತ್ತಿರುವ ಸಿಎಸ್ಕೆ ತಂಡ ಕೂಡ ಸತತ 3 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಹಿಂದುಳಿದಿದೆ. CSK ತಂಡದಲ್ಲಿ ಜಡೇಜಾ ನಾಯಕತ್ವದ ಅವಧಿಯನ್ನು ಪ್ರಾರಂಭಿಸಿದ ನಂತರ ತಂಡ ಒತ್ತಡದಲ್ಲಿದೆ ಎಂಬ ಅನಿಸಿಕೆಗಳು ವ್ಯಕ್ತವಾಗುತ್ತಿದೆ. ಯಾವುದೇ ಐಪಿಎಲ್ ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ಸಿಎಸ್‌ಕೆ ಸೋತಿರುವುದು ಇದೇ ಮೊದಲು ಎಂಬುದು ದಾಖಲೆಯ ಉತ್ತರ.
ಸದ್ಯ ಸತತ ಸೋಲನ್ನು ನೋಡುತ್ತಿರುವ ಸಿಎಸ್ಕೆ ಮತ್ತು ಮುಂಬೈ ತಂಡಗಳು ವಾರಾಂತ್ಯದ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ತಮ್ಮ ಗೆಲುವಿನ ಖಾತೆಯನ್ನು ತೆರೆಯಲಿದೆಯಾ ಕಾದು ನೋಡಬೇಕಿದೆ.