2022ನೇ ಸಾಲಿನ 15ನೇ ಇಂಡಿಯನ್ ಪ್ರೀಮಿಯರ್ ಲೀಗ್ನ (IPL ) ಹರಾಜು ಪ್ರಕ್ರಿಯೆ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ನಡೆಯತ್ತಿದೆ. ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ,ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಆರ್ಸಿಬಿ ತಂಡ 7 ಕೋಟಿ ಬಿಡ್ ಮಾಡಿದ್ದು ಉತ್ತಮ ಬ್ಯಾಟ್ಸ್ಮನ್ ಮತ್ತು ಫೀಲ್ಡರ್ ಅನ್ನು ಪಡೆದುಕೊಳ್ಳುವಲ್ಲಿ RCB ಯಶಸ್ವಿಯಾಗಿದೆ. ಶ್ರೇಯಸ್ ಅಯ್ಯರ್ ಕೆಕೆಆರ್ ತಂಡಕ್ಕೆ 12.25 ಕೋಟಿ ರೂ.ಗೆ ಹರಾಜಾಗಿದ್ದಾರೆ.
ಬೆಂಗಳೂರಿನಲ್ಲಿ 15ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿಯ ಐಪಿಎಲ್ ವಿಶೇಷವೆಂದರೆ ಎರಡು ಹೊಸ ತಂಡಗಳು ಟೂರ್ನಿಗೆ ಸೇರ್ಪಡೆಯಾಗಿದ್ದು, ಆಟಗಾರರಿಗೆ ಹೆಚ್ಚು ಅವಕಾಶಗಳು ದೊರೆಯಲಿದೆ.

ಈ ಪೈಕಿ ಭಾರತ ತಂಡದ ಆಟಗಾರರಾದ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 12.25 ಕೋಟಿ ರೂ ಬಿಡ್ ಮಾಡಿ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಅಯ್ಯರ್ ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ತಂಡಗಳ ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಕೆಕೆಆರ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಫಾಫ್ ಡುಪ್ಲೆಸಿಸ್ ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಕೋಟಿ ಬಿಡ್ ಮಾಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಇನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೊ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 4.40 ಕೋಟಿ ರೂ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.
ಹೆಚ್ಚು ಮೊತ್ತಕ್ಕೆ ಬಿಡ್ ಆದ ಆಟಗಾರರು :

ಶಿಮ್ರಾನ್ ಹೆಟ್ಮೆಯರ್
ತಂಡ: ರಾಜಸ್ಥಾನ್ ರಾಯಲ್ಸ್
ಬಿಡ್ಡಿಂಗ್ ಬೆಲೆ: 8.50 ಕೋಟಿ.
ದೇವದತ್ ಪಡಿಕ್ಕಲ್
ರಾಜಸ್ಥಾನ್ ರಾಯಲ್ಸ್
ಬಿಡ್ಡಿಂಗ್ ಬೆಲೆ: 7.75 ಕೋಟಿ ರೂ.
ಟ್ರೆಂಟ್ ಬೌಲ್ಟ್
ತಂಡ: ರಾಜಸ್ಥಾನ್ ರಾಯಲ್ಸ್
ಬಿಡ್ಡಿಂಗ್ ಬೆಲೆ: 8 ಕೋಟಿ ರೂ
ಆರ್ ಅಶ್ವಿನ್
ತಂಡ: ರಾಜಸ್ಥಾನ್ ರಾಯಲ್ಸ್
ಬಿಡ್ಡಿಂಗ್ ಬೆಲೆ: 5 ಕೋಟಿ ರೂ
ಪ್ಯಾಟ್ ಕಮಿನ್ಸ್
ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
ಬಿಡ್ಡಿಂಗ್ ಬೆಲೆ: 7.25 ಕೋಟಿ ರೂ
ಕಗಿಸೊ ರಬಾಡ
ತಂಡ: ಪಂಜಾಬ್ ಕಿಂಗ್ಸ್
ಬಿಡ್ಡಿಂಗ್ ಬೆಲೆ: 9.25 ಕೋಟಿ ರೂ

ಶಿಖರ್ ಧವನ್
ತಂಡ: ಪಂಜಾಬ್ ಕಿಂಗ್ಸ್
ಬಿಡ್ಡಿಂಗ್ ಬೆಲೆ: 8.25 ಕೋಟಿ ರೂ
ನಿತೀಶ್ ರಾಣಾ
ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
ಬಿಡ್ಡಿಂಗ್ ಬೆಲೆ: 8 ಕೋಟಿ ರೂ
ಫಾಫ್ ಡು ಪ್ಲೆಸಿಸ್
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಬಿಡ್ಡಿಂಗ್ ಬೆಲೆ: 7 ಕೋಟಿ ರೂ
ಹರ್ಷಲ್ ಪಟೇಲ್
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಬಿಡ್ಡಿಂಗ್ ಬೆಲೆ: 10.75 ಕೋಟಿ ರೂ
ಕ್ವಿಂಟನ್ ಡಿ ಕಾಕ್
ತಂಡ: ಲಕ್ನೋ ಸೂಪರ್ ಜೈಂಟ್ಸ್
ಬಿಡ್ಡಿಂಗ್ ಬೆಲೆ: 6.75 ಕೋಟಿ ರೂ
ಮನೀಶ್ ಪಾಂಡೆ
ತಂಡ: ಲಕ್ನೋ ಸೂಪರ್ ಜೈಂಟ್ಸ್
ಬಿಡ್ಡಿಂಗ್ ಬೆಲೆ: 4.6 ಕೋಟಿ ರೂ
ಜಾಸೊನ್ ಹೋಲ್ಡರ್
ಲಕ್ನೋ ಸೂಪರ್ ಜೈಂಟ್ಸ್
ಬಿಡ್ಡಿಂಗ್ ಬೆಲೆ: 8.75ಕೋಟಿ ರೂ
ದೀಪಕ್ ಹುಡಾ
ತಂಡ: ಲಕ್ನೋ ಸೂಪರ್ ಜೈಂಟ್ಸ್
ಬಿಡ್ಡಿಂಗ್ ಬೆಲೆ: 5.75 ಕೋಟಿ ರೂ

ಡೇವಿಡ್ ವಾರ್ನರ್
ತಂಡ: ಡೆಲ್ಲಿ ಕ್ಯಾಪಿಟಲ್ಸ್
ಬಿಡ್ಡಿಂಗ್ ಬೆಲೆ: 6.25 ಕೋಟಿ ರೂ
ಮೊಹಮ್ಮದ್ ಶಮಿ
ತಂಡ: ಗುಜರಾತ್ ಟೈಟನ್ಸ್
ಬಿಡ್ಡಿಂಗ್ ಬೆಲೆ: 6.25 ಕೋಟಿ ರೂ
ಜಾಸನ್ ರಾಯ್
ತಂಡ: ಗುಜರಾತ್ ಟೈಟನ್ಸ್
ಬಿಡ್ಡಿಂಗ್ ಬೆಲೆ: 2 ಕೋಟಿ ರೂ
ರಾಬಿನ್ ಉತ್ತಪ್ಪ
ತಂಡ: ಚೆನ್ನೈ ಸೂಪರ್ ಕಿಂಗ್ಸ್
ಬಿಡ್ಡಿಂಗ್ ಬೆಲೆ: 2 ಕೋಟಿ ರೂ
ಡ್ವೇನ್ ಬ್ರಾವೋ
ತಂಡ: ಚೆನ್ನೈ ಸೂಪರ್ ಕಿಂಗ್ಸ್ ಬಿಡ್ಡಿಂಗ್ ಬೆಲೆ: 4.40 ಕೋಟಿ ರೂ
ಮನೀಶ್ ಪಾಂಡೆ
ತಂಡ: ಲಖನೌ ಸೂಪರ್ ಜೈಂಟ್ಸ್
ಬಿಡ್ಡಿಂಗ್ ಬೆಲೆ: 4.6 ಕೋಟಿ ರೂ

ಲಕ್ನೋಗೆ ಕ್ರುನಾಲ್ ಕ್ರುನಾಲ್ ಪಾಂಡ್ಯ ಖರೀದಿಗೆ ಚೆನ್ನೈ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತು. ಸನ್ರೈಸರ್ಸ್ ಹೈದರಾಬಾದ್ ಕೂಡ ಇದರ ಸಾಲಿಗೆ ಸೇರಿತು. ಅಂತಿಮವಾಗಿ ಇವರು 8.25 ಕೋಟಿಗೆ ಲಕ್ನೋ ಪಾಲಾದರು. ಬರೋಬ್ಬರಿ 8.75 ಕೋಟಿಗೆ ಸುಂದರ್ ಅವರನ್ನು ಬರೋಬ್ಬರಿ 8.75 ಕೋಟಿಗೆ ಖರೀದಿ ಮಾಡಿದ ಸನ್ರೈಸರ್ಸ್ ಹೈದರಾಬಾದ್. ಆರ್ಸಿಬಿ ಪಾಲಾದ ಹಸರಂಗ.
ಹಸರಂಗ ಖರೀದಿಗೆ ಪಟ್ಟು ಹಿಡಿದ ಆರ್ಸಿಬಿಗೆ ಕೊನೆಗೂ ಗೆಲುವು ದಕ್ಕಿತು. ಪಂಜಾಬ್ ಕಿಂಗ್ಸ್ ಜೊತೆಗಿನ ಕಾಳಗದಲ್ಲಿ ಅಂತಿಮವಾಗಿ ಹಸರಂಗ 10 ಕೋಟಿ 75 ಲಕ್ಷಕ್ಕೆ ಆರ್ಸಿಬಿ ಪಾಲಾಗಿದ್ದಾರೆ.

ಅನ್ ಸೋಲ್ಡ್ ಆದ ಪ್ರಮುಖ ಆಟಗಾರರು :
IPL ಹರಾಜು 2022 ರ ಮೊದಲ ಸುತ್ತಿನಲ್ಲಿ, ಸುರೇಶ್ ರೈನಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ. ಇವರ ಜೊತೆಗೆ ಸ್ಟೀವ್ ಸ್ಮಿತ್ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. ಡೇವಿಡ್ ಮಿಲ್ಲರ್ ಕೂಡ ಯಾವುದೇ ಖರೀದಿದಾರರನ್ನು ಕಾಣಲಿಲ್ಲ. ಶಕೀಬ್ ಅಲ್ ಹಸನ್ ಕೂಡ ಅನ್ ಸೋಲ್ಡ್ ಆಗಿದ್ದಾರೆ. ಹರ್ಷಲ್ ಪಟೇಲ್ ಖರೀದಿಸಿದ ಆರ್ಸಿಬಿ, ಹರ್ಷಲ್ ಪಟೇಲ್ ಖರೀದಿಗೆ ಆರ್ಸಿಬಿ ಜೊತೆ ಸನ್ರೈಸರ್ಸ್ ಹೈದರಾಬಾದ್ ಪಟ್ಟುಬಿಡದೆ ನಿಂತಿತು. ಅಂತಿಮವಾಗಿ ಬರೋಬ್ಬರಿ 10.75 ಕೋಟಿಗೆ ಇವರನ್ನು ಆರ್ಸಿಬಿ ಖರೀದಿಸಿದೆ.