- ಕರ್ನಾಟಕದಿಂದ ₹13,495 ಕೋಟಿ ಸಂಗ್ರಹಿಸಿ ನೀಡಿದ್ದು ಮಾತ್ರ ₹3,705 ಕೋಟಿ
- ರಾಜ್ಯಕ್ಕೆ ಕೇಂದ್ರದಿಂದ ಕಡಿಮೆ ಮೊತ್ತದ ಹಣ ಬಿಡುಗಡೆ
- ಕರ್ನಾಟಕ ರಾಜ್ಯಕ್ಕೆ ಯಾಕಿಷ್ಟು ತಾರತಮ್ಯ (Tax distribution from the central govt to the states)
New delhi: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ 1.01 ಲಕ್ಷ ಕೋಟಿ ರೂ. ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿರುವ ಹಿನ್ನೆಲೆ, ಕರ್ನಾಟಕಕ್ಕೆ ಕೇವಲ ₹3,705 ಕೋಟಿ ಹಂಚಿಕೆಯಾಗಿದ್ದು,
ಸಾರ್ವಜನಿಕ ಚರ್ಚೆ ಆರಂಭವಾಗಿದೆ. ‘ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೆರಿಗೆ ಪಾಲನ್ನು ಸರಿಯಾಗಿ ಹಂಚುತ್ತಿಲ್ಲ. ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ’ ಎಂಬ ಆರೋಪಗಳು ಕೇಳಿ ಬರುತ್ತಿರುವ ಸಮಯದಲ್ಲಿಯೇ
ಈ ಹಂಚಿಕೆ ಬಿಡುಗಡೆ ಮಾಡಲಾಗಿದೆ.ಇನ್ನು ಈ ಸಲದ ಹಂಚಿಕೆಯ ಅಂಕಿಅಂಶಗಳನ್ನು ನೋಡಿದರೆ, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ, ಹಂಚಿಕೆಯಲ್ಲಿ 15ನೇ ಸ್ಥಾನ ಪಡೆಯುವುದು ಗಮನಾರ್ಹ.
ಉಳಿದ ಪ್ರಮುಖ ರಾಜ್ಯಗಳು, ಜನಸಂಖ್ಯೆ ಕಡಿಮೆ ಇದ್ದರೂ, ಕೇಂದ್ರ ಹಂಚಿಕೆಯಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಪ್ರಮಾಣ ಪಡೆದಿರುವುದು ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ.
ಉದಾಹರಣೆಗೆ, ಉತ್ತರ ಪ್ರದೇಶಕ್ಕೆ ₹18,227 ಕೋಟಿ, ಬಿಹಾರಕ್ಕೆ ₹10,219 ಕೋಟಿ, ಮಧ್ಯಪ್ರದೇಶಕ್ಕೆ ₹7,976 ಕೋಟಿ, ಪಶ್ಚಿಮ ಬಂಗಾಳಕ್ಕೆ ₹7,644 ಕೋಟಿ, ಮಹಾರಾಷ್ಟ್ರಕ್ಕೆ ₹6,418 ಕೋಟಿ,
ರಾಜಸ್ಥಾನಕ್ಕೆ ₹6,123 ಕೋಟಿ, ಆಂಧ್ರಪ್ರದೇಶಕ್ಕೆ ₹4,112 ಕೋಟಿ, ಒಡಿಶಾಕ್ಕೆ ₹4,601 ಕೋಟಿ, ತಮಿಳುನಾಡಿಗೆ ₹4,144 ಕೋಟಿ, ಜಾರ್ಖಂಡ್‌ಗೆ ₹3,360 ಕೋಟಿ ಹಂಚಿಕೆ ಮಾಡಲಾಗಿದೆ.

ಕರ್ನಾಟಕದ ಹಣಕಾಸು ಆಧಾರಿತ ಹಂಚಿಕೆ ಮತ್ತು ಅದರ ಹಕ್ಕುಗಳ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಿದರೆ, ರಾಜ್ಯವು ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದ್ದು,
ಆದರೂ ಹಂಚಿಕೆಯ ದೃಷ್ಟಿಯಿಂದ 15ನೇ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರ ಹಂಚಿಕೆ ನಿರ್ಧಾರದಲ್ಲಿ ಜನಸಂಖ್ಯೆ, ಹಂಚಿಕೆಯ ಇತಿಹಾಸ, ರಾಜ್ಯದ ತೆರಿಗೆ ಸಂಗ್ರಹ ಸಾಮರ್ಥ್ಯ,
ಆರ್ಥಿಕ ಅವಶ್ಯಕತೆ ಎಲ್ಲ ಅಂಶಗಳನ್ನು ಪರಿಗಣಿಸುತ್ತದೆ. ಆದರೂ ಕರ್ನಾಟಕದ ಹಂಚಿಕೆಯ ಪ್ರಮಾಣವನ್ನು ಇತರ ಕೆಲ ಕಡಿಮೆ ಹಂಚಿಕೆ ಪಡೆದ ರಾಜ್ಯಗಳಿಗಿಂತ ಕಡಿಮೆ ನೀಡಿರುವುದು ತಾರತಮ್ಯವನ್ನು
ಉಂಟುಮಾಡಿದೆ. ಸೆಪ್ಟೆಂಬರ್ 2025 ತಿಂಗಳಲ್ಲಿ ದೇಶಾದ್ಯಾಂತ ಜಿಎಸ್‌ಟಿ ಸಂಗ್ರಹವು ₹1.89 ಲಕ್ಷ ಕೋಟಿ ತಲುಪಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ಗೂ ಹೋಲಿಸಿದರೆ ಶೇಕಡಾ 9.1ರಷ್ಟು ಹೆಚ್ಚಾಗಿದೆ.
ಇದು ಮಾರಾಟದ ಏರಿಕೆಯಿಂದಾಗಿ, ಸರ್ಕಾರಗಳಿಗೆ ಆದಾಯವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ದೇಶದ ಒಟ್ಟು ಆರ್ಥಿಕ ಸ್ಥಿತಿ,
ಆಮದು ತೆರಿಗೆ ಶೇಕಡಾ 15.6ರಷ್ಟು ಏರಿಕೆಯೊಂದಿಗೆ ₹52,492 ಕೋಟಿ ಸಂಗ್ರಹವಾಗಿದೆ.
2025ರಲ್ಲಿ ಜಿಎಸ್‌ಟಿ ಸಂಗ್ರಹದ ಅಂಕಿಅಂಶಗಳನ್ನು ನೋಡಿದರೆ, ಕರ್ನಾಟಕವು ₹13,495 ಕೋಟಿ ಸಂಗ್ರಹಿಸಿತ್ತು, ಆದರೆ ಹೆಚ್ಚುವರಿ ಹಂಚಿಕೆಗೆ ಕೇವಲ ₹3,705 ಕೋಟಿ ಪಡೆದಿದೆ.
ಅದರ ವಿರುದ್ಧ, ಉತ್ತರ ಪ್ರದೇಶವು ₹8,967 ಕೋಟಿ ಜಿಎಸ್‌ಟಿ ಸಂಗ್ರಹಿಸಿದರೂ, ಹೆಚ್ಚಿನ ಪ್ರಮಾಣದಲ್ಲಿ ₹18,227 ಕೋಟಿ ಪಡೆಯಿತು. ಬಿಹಾರವು ₹1,753 ಕೋಟಿ ಸಂಗ್ರಹಿಸಿತು,
ಆದರೆ ಕೇಂದ್ರದಿಂದ ₹10,219 ಕೋಟಿ ಹಂಚಿಕೆ ಪಡೆದಿದೆ. ಪಶ್ಚಿಮ ಬಂಗಾಳವು ₹5,682 ಕೋಟಿ ಸಂಗ್ರಹಿಸಿದ್ದರೂ, ₹7,644 ಕೋಟಿ ಹಂಚಿಕೆ ಪಡೆದಿದೆ. ರಾಜಸ್ಥಾನವು ₹4,306 ಕೋಟಿ ಸಂಗ್ರಹಿಸಿ,
₹6,123 ಕೋಟಿ ಹಂಚಿಕೆ ಪಡೆದರೆ, ಮಧ್ಯಪ್ರದೇಶವು ₹3,737 ಕೋಟಿ ಸಂಗ್ರಹಿಸಿ ₹7,976 ಕೋಟಿ ಹೆಚ್ಚುವರಿ ಹಂಚಿಕೆ ಪಡೆದಿದೆ.
ಇದನ್ನು ಓದಿ : ಕೇಂದ್ರದಿಂದ ಎಲ್ಲಾ ರಾಜ್ಯಗಳಿಗೂ ವಿಜಯದಶಮಿಗೆ ಬಂಪರ್ ಉಡುಗೊರೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಈ ಅಂಕಿಅಂಶಗಳು ರಾಜ್ಯಗಳ ಜಿಎಸ್‌ಟಿ ಸಂಗ್ರಹ ಮತ್ತು ಕೇಂದ್ರದಿಂದ ನೀಡಲಾದ ಹೆಚ್ಚುವರಿ ಹಂಚಿಕೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತವೆ. (Tax distribution from the central govt to the states)