ಈ ವ್ಯಕ್ತಿಯ ಹೆಸರು ಲಕ್ಷ್ಮಣ ರಾವ್(Lakshman Rao). ಇವರ ವೃತ್ತಿ ಬೀದಿಯಲ್ಲಿ ಚಹಾ ವ್ಯಾಪಾರ(Tea Buisness) ಮಾಡುವುದು. ಆದರೆ ಇವರು ಮಾಡಿದ ಸಾಧನೆ ಸ್ನಾತಕೋತ್ತರ ಪದವೀಧದರನ್ನೂ ನಾಚಿಸುವಂತಿದೆ.

ಹೌದು, ದೆಹಲಿಯಲ್ಲಿ(Delhi) ರಸ್ತೆ ಬದಿ ಚಹಾ ಮಾರುವ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಇಪ್ಪತ್ತೈದು ಪುಸ್ತಕಗಳನ್ನು ಬರೆದಿದ್ದಾರೆ. ಸಾಧಿಸಬೇಕೆನ್ನುವ ಛಲ ಇದ್ದರೆ ಎಲ್ಲವೂ ಸಾಧ್ಯ. ಎಂತೆಂಥಾ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೇ ಸ್ವಂತವಾಗಿ ನಾಲ್ಕು ಸಾಲು ಬರೆಯಲು ಬರುವುದಿಲ್ಲ. ಆದರೆ ಅಷ್ಟೇನೂ ವಿದ್ಯಾವಂತರಲ್ಲದ ಲಕ್ಷ್ಮಣ ರಾವ್ ಅವರ ಈ ಕೆಲಸ ಜನರ ಮೆಚ್ಚುಗೆಯನ್ನು ಗಳಿಸಿದೆ. ಇವರು ಬರೆದ ಪುಸ್ತಕಗಳು ಆಸಕ್ತಿದಾಯಕವಾಗಿವೆ ಎನ್ನುವುದು ಓದಿದವರ ಅಭಿಪ್ರಾಯ. ಎಷ್ಟೆಲ್ಲಾ ಸೌಕರ್ಯಗಳಿದ್ದು, ಸಮಯವಿದ್ದೂ, ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳುವ ವ್ಯಕ್ತಿಗಳಿಗೆ ಲಕ್ಷ್ಮಣ ರಾವ್ ಅವರು ಮಾದರಿಯಾಗಿದ್ದಾರೆ.
ವಿದ್ಯೆಗೂ ಪ್ರತಿಭೆಗೂ ಸಂಬಂಧವಿಲ್ಲ ಎನ್ನುವುದು ಇವರ ವಿಚಾರದಲ್ಲಿ ನಿಜವಾಗಿದೆ. ಈ ವಯಸ್ಸಿನಲ್ಲಿಯೂ ಬರೆಯಬೇಕೆಂಬ ಹಂಬಲವಿರುವ ಲಕ್ಷ್ಮಣ ರಾವ್ ಅವರ ಜೀವನೋತ್ಸಾಹವನ್ನು ನಿಜಕ್ಕೂ ಮೆಚ್ಚಲೇ ಬೇಕು. ಚಿಕ್ಕ ಪುಟ್ಟ ವಿಷಯಗಳಿಗೆ ನಿರಾಶರಾಗುತ್ತಾ, ನನ್ನಿಂದ ಈ ಕೆಲಸ ಸಾಧ್ಯವಿಲ್ಲ ಎಂದು ಕೈಚೆಲ್ಲುವ ವ್ಯಕ್ತಿಗಳಿಗೆ ಲಕ್ಷಣ ರಾವ್ ಮಾದರಿಯಾಗಿದ್ದಾರೆ.