India : ಭಾರತ ತಂಡ(Team India) ಸಪ್ಟೆಂಬರ್ 26ರಂದು ಬಲಿಷ್ಠ ಆಸ್ಟ್ರೇಲಿಯಾ(Australia) ತಂಡವನ್ನು ಸೋಲಿಸಿ, ಮೂರು ಪಂದ್ಯಗಳ ಟಿ-20 ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಇದೀಗ ಇಂದಿನಿಂದ ದಕ್ಷಿಣ ಆಫ್ರಿಕಾ(South Africa) ತಂಡದೊಂದಿಗೆ ಮೂರು ಟಿ-20 ಪಂದ್ಯಗಳನ್ನು ಆಡಲಿದೆ.

ಈ ಸರಣಿಯು ವಿಶ್ವಕಪ್ನ ಪೂರ್ವ ಸಿದ್ಧತಾ ಪಂದ್ಯವೆಂದು ಪರಿಗಣಿಸಲಾಗಿದೆ. ಈ ಸರಣಿಗೂ ರೋಹಿತ್ ಶರ್ಮಾ(Rohit Sharma) ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಪಂದ್ಯದ ವೇಳೆ, ನೇರಪ್ರಸಾರ, ತಂಡಗಳ ವಿವರಗಳನ್ನು ತಿಳಿಯೋಣ ಬನ್ನಿ.
ಪಂದ್ಯದ ವಿವರ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿಯ ಮೊದಲ ಪಂದ್ಯವು ಇಂದು ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂನಲ್ಲಿ ನಡೆಯಲಿದೆ.
ವೇಳೆ : ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.
ನೇರಪ್ರಸಾರ : ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರ ಪ್ರಸಾರವಾಗಲಿದ್ದು, ಡಿಸ್ನಿ+ ಹಾಟ್ಸ್ಟಾರ್ ಅಪ್ಲಿಕೇಶನ್ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್.
ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (C), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಕಗಿಸೊ ರಬಡಾ, ರಿವ್ಸಿ ರಬಾಡಾ, ಟ್ರಿಸ್ಟಾನ್ ಸ್ಟಬ್ಸ್/ ಜಾರ್ನ್ ಫಾರ್ಟುಯಿನ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆನ್ರಿಚ್ ನಾರ್ಟ್ಜೆ.
https://fb.watch/fOCpSPZeSs/ ದಿನಚರಿಯಲ್ಲಿ ಬಳಸುವ ಆಂಗ್ಲ ಪದಗಳ ಅರ್ಥ ಕನ್ನಡದಲ್ಲಿ ನಿಮಗೆಷ್ಟು ಗೊತ್ತು?
ಸರಣಿಯ ವೇಳಾಪಟ್ಟಿ
- ಸೆಪ್ಟೆಂಬರ್ 28, 1ನೇ ಟಿ-20 (ತಿರುವನಂತಪುರಂ)
- ಅಕ್ಟೋಬರ್ 2, 2 ನೇ ಟಿ-20 (ಗುವಾಹಟಿ)
- 4 ಅಕ್ಟೋಬರ್, 3ನೇ ಟಿ-20 (ಇಂಧೋರ್)