ಟೀಮ್ ಇಂಡಿಯಾದ (Team India) 2025ರ ಟೆಸ್ಟ್ ವೇಳಾಪಟ್ಟಿ ಪ್ರಕಟಗೊಂಡಿದೆ. 2024 ರಲ್ಲಿ 15 ಟೆಸ್ಟ್ ಪಂದ್ಯಗಳನ್ನ ಟೀಮ್ ಇಂಡಿಯಾ ಆಡಿದೆ. ಅದರಲ್ಲಿ ಟೀಮ್ ಇಂಡಿಯಾ (Team India) 8 ಪಂದ್ಯಗಳಲ್ಲಿ ಗೆದ್ದಿದ್ದು ಇನ್ನುಳಿದ 6 ಪಂದ್ಯಗಳಲ್ಲಿ ಸೋತಿದೆ. ಇನ್ನೂ 2025 ರಲ್ಲಿ ಟೀಮ್ ಇಂಡಿಯಾ ಕೇವಲ 10 ಪಂದ್ಯಗಳನ್ನ ಆಡಲಿದೆ.
ಈ 10 ಪಂದ್ಯದಲ್ಲಿ 5 ಮ್ಯಾಚ್ಗಳು ಇಂಗ್ಲೆಂಡ್ (England) ವಿರುದ್ಧ ಎಂಬುದು ವಿಶೇಷ ಸಂಗತಿ. ಈಗ ಪ್ರಕಟಗೊಂಡಿರೋ ವೇಳಾಪಟ್ಟಿಯಂತೆ 10 ಟೆಸ್ಟ್ ಪಂದ್ಯಗಳನ್ನ (Test matches) ಮಾತ್ರ ಆಡಲಿದೆ. . ಈ ಹತ್ತು ಮ್ಯಾಚ್ಗಳಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧದ ಒಂದು ಪಂದ್ಯ ಕೂಡ ಸೇರಿದೆ. 2024 ರ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಜನವರಿ 3 ರಿಂದ ಶುರುವಾಗಲಿದೆ. ಭಾರತ v/s ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸಿಡ್ನಿಯಲ್ಲಿ ನಡೆಯಲಿದೆ.

ಭಾರತ v/s ಇಂಗ್ಲೇಂಡ್ (India v/s England) ಪಂದ್ಯ ಜೂನ್ 20 ರಿಂದ ನಡೆಯಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ 5 ಪಂದ್ಯಗಳನ್ನಾಡಲಿದ್ದಾರೆ.
ಭಾರತ v/s ವೆಸ್ಟ್ ಇಂಡೀಸ್ (India v/s West Indies) ಪಂದ್ಯ ಅಕ್ಟೋಬರ್ನಲ್ಲಿ (October) ನಡೆಯಲಿದ್ದು, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದರ ದಿನಾಂಕ ಇನ್ನೂ ಕೂಡ ನಿಗದಿಯಾಗಿಲ್ಲ.
ಭಾರತ vs ಸೌತ್ ಆಫ್ರಿಕಾ (India vs South Africa) ಪಂದ್ಯವು ನವೆಂಬರ್ ಮತ್ತು ಡಿಸೆಂಬರ್ ನಡುವೆ ನಡೆಯಲಿದೆ. ವಿಂಡೀಸ್ ವಿರುದ್ಧದ ಸರಣಿಯ ಬಳಿಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ (South Africa) ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.