ಇದು ಕರಾಟೆ ಕಲೆಯ ಗತವೈಭವ. ಆತ್ಮರಕ್ಷಣೆಗೆ ಅತ್ಯಂತ ಸೂಕ್ತವಾಗಿರುವ ಕರಾಟೆ ಕಲೆ ಪ್ರತಿ ಶಾಲೆಯಲ್ಲೂ ಕಲಿಸಲಾಗುತ್ತಿತ್ತು. ಅದ್ರಲ್ಲೂ ನಿರ್ಭಯಾ ಪ್ರಕರಣದ ನಂತರ ಹೆಣ್ಣುಮಕ್ಕಳಿಗೆ ಕರಾಟೆ ಕಲಿಕೆಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದರಿಂದ ಕರಾಟೆಗೆ ಇನ್ನಷ್ಟು ಬೇಡಿಕೆ ಬಂತು.
ಆದ್ರೆ ಸರ್ಕಾರ ಕೂಡ ಎಲ್ಲಾ ಕರಾಟೆ ಮೇಷ್ಟ್ರುಗಳಿಗೆ ಮಣೆ ಹಾಕಿ ಕರಾಟೆಗೆ ಉತ್ತೇಜನ ನೀಡಿತು. ಕರಾಟೆ ಟೀಚರ್‌ಗಳು ತಮ್ಮ ಕಲೆಯನ್ನು ಕಲಿಸಿ ಜೀವನದಲ್ಲಿ ಆರಾಮವಾಗಿದ್ರು. ಆದ್ರೆ ಯಾವಾಗ ಕೊರೋನಾ ಮಹಾಮಾರಿ ಒಕ್ಕರಿಸಿತೋ ಆಗ ಎಲ್ಲರ ಬದುಕು ಬದಲಾಯಿತು.
ಕೊರೋನಾದಿಂದಾಗಿ ಶಾಲಾ ಚಟುವಟಿಕೆಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಯಿತು. ಕರಾಟೆಯನ್ನೂ ಬ್ಯಾನ್ ಮಾಡಿದ್ದರಿಂದ ಕಳೆದ ಒಂದೂವರೆ ವರ್ಷದಿಂದ ದುಡಿಮೆ ಇಲ್ಲದೆ ಕರಾಟೆ ಮೇಷ್ಟ್ರುಗಳು ಕಂಗಾಲಾಗಿದ್ದಾರೆ. ಒಂದೂವರೆ ವರ್ಷದಿಂದ ಕೆಲಸ ಇಲ್ಲದೆ, ವೇತನ ಇಲ್ಲದೆ ಶಿಕ್ಷಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಕೊರೋನಾ, ಲಾಕ್ಡೌನ್‌ನಿಂದಾಗಿ ಕರಾಟೆ ಮೇಷ್ಟ್ರಗಳು ಮನೆಯಲ್ಲೇ ಇದ್ದಾರೆ. ದುಡಿಮೆ ಇಲ್ಲದೆ ಮನೆ ಬಾಡಿಗೆ ಕಟ್ಟಲಾಗದೆ ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ.
ಕರಾಟೆ ಮೇಷ್ಟ್ರುಗಳು ಮಕ್ಕಳು ಕೊಡುತ್ತಿದ್ದ ಶುಲ್ಕ ಮತ್ತು ಖಾಸಗಿ ಶಾಲೆಗಳು ನೀಡುತ್ತಿದ್ದ ವೇತನವನ್ನೇ ನಂಬಿ ಬದುಕುತ್ತಿದ್ದವರು. ಆದ್ರೆ ಈಗ ಶಾಲೆಗಳಲ್ಲಿ ಕರಾಟೆ ಕ್ಲಾಸ್‌ಗಳೇ ನಡೆಯುತ್ತಿಲ್ಲ. ಹಾಗಾಗಿ ವೇತನವೂ ಇಲ್ಲದೆ, ಸಾಲ ಕಟ್ಟಲಾಗದೆ ತುಂಬಾ ಸಮಸ್ಯೆಯಲ್ಲಿದ್ದಾರೆ.
ಕರಾಟೆಯನ್ನು ನಂಬಿ ರಾಜ್ಯದಲ್ಲಿ ಸಾವಿರಾರು ಮಂದಿ ಜೀವನ ನಡೆಸುತ್ತಿದ್ದರು. ಆದ್ರೆ ಕೊರೋನಾದಿಂದಾಗಿ ಕೆಲಸ ಇಲ್ಲದೆ ಸಂಸಾರ ಬಂಡಿ ಸಾಗಿಸಲಾಗಿದೆ ಬದುಕು ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ ಅನ್ನೋದು ಇವರ ಅಳಲು.
ಕೊರೋನಾ ಕೊಟ್ಟ ಏಟಿಗೆ ರಾಜ್ಯದಲ್ಲಿ ಸಾವಿರಾರು ಕರಾಟೆ ಕ್ಲಾಸ್‌ಗಳು ನಿಂತು ಹೋಗಿವೆ. ಬಾಡಿಗೆ ಕಟ್ಟಲಾಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೆಲ ಟೀಚರ್‌ಗಳಿಗೆ ಊಟಕ್ಕೂ ಕಷ್ಟ ಆಗಿದೆ ಅಂತಾರೆ ಇವರು.
ನಾವು ಬೇರೆ ಉದ್ಯೋಗ ಗೊತ್ತಿಲ್ಲ. ಇದನ್ನೇ ನಂಬಿದ್ದೇವೆ. ಆದ್ರೆ ಕೊರೋನಾದಿಂದಾಗಿ ಮತ್ತೆ ಯಾವಾಗ ಕರಾಟೆ ತರಗತಿಗಳು ಪ್ರಾರಂಭ ಆಗ್ತವೆ ಅನ್ನೋ ಗ್ಯಾರಂಟಿ ಇಲ್ಲ. ಕರಾಟೆ ನಂಬಿ ಇನ್ನು ಮುಂದೆ ಜೀವನ ಸಾಗಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ ಅನ್ನೋದು ಇವರ ನೋವು.
ಮಕ್ಕಳ ಕೊಡುವ ಫೀಸನ್ನು ನಂಬಿದ್ದೀವಿ. ಖಾಸಗಿ ಶಾಲೆಗಳು ನಮಗೆ ಫೀಸ್ ಕೊಡುತ್ತಿಲ್ಲ. ಸರ್ಕಾರ ಕಣ್ತೆರೆದು ನಮ್ಮ ನೋವು ಆಲಿಸಲಿ. ನಮಗೂ ಪ್ಯಾಕೇಜ್ ಘೋಷಿಸಲಿ ಅನ್ನೋದು ಇವರ ಮನವಿ.
ಕರಾಟೆ ಶಿಕ್ಷಕರ ನೋವನ್ನು ಅರ್ಥ ಮಾಡಿಕೊಳ್ಳಿ. ಪರಿಸ್ಥಿತಿ ಗಂಭೀರ ಆಗಿದೆ. ಕೊರೋನಾ ಮುಗಿದ್ರೂ ನಮ್ಮ ಬದುಕು ಸರಿಯಾಗುತ್ತೆ ಅನ್ನೋ ನಂಬಿಕೆ ಇಲ್ಲ. ಹಾಗಾಗಿ ತಮಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ ಅನ್ನೋ ಒತ್ತಾಯ ಇವರದ್ದು.
ರಾಜ್ಯದ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡೋ ಪ್ರತಿ ಶಿಕ್ಷಕರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಅವರಲ್ಲಿ ಕರಾಟೆ ಟೀಚರ್‌ಗಳು ಸ್ಥಿತಿ ಇನ್ನೂ ದಯನೀಯವಾಗಿದೆ. ಸರ್ಕಾರ ಆದಷ್ಟು ಬೇಗ ಇವರ ನೋವಿಗೆ ಸ್ಪಂದಿಸಿ ಇವರಿಗೆ ಪರಿಹಾರ ಘೋಷಿಸಲಿ.