• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಟೀನೇಜ್ ಗರ್ಭಧಾರಣೆ ಪ್ರಕರಣಗಳ ಏರಿಕೆ: ಕೇವಲ ಆರು ತಿಂಗಳಲ್ಲಿ 22,000 ಪ್ರಕರಣ!

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಕರ್ನಾಟಕದಲ್ಲಿ ಟೀನೇಜ್ ಗರ್ಭಧಾರಣೆ ಪ್ರಕರಣಗಳ ಏರಿಕೆ: ಕೇವಲ ಆರು ತಿಂಗಳಲ್ಲಿ 22,000 ಪ್ರಕರಣ!
0
SHARES
23
VIEWS
Share on FacebookShare on Twitter
  • ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಭಾರೀ ಏರಿಕೆ
  • ಬೆಚ್ಚಿ ಬೀಳಿಸುವಂತಿದೆ ಆರೋಗ್ಯ ಇಲಾಖೆ ಅಂಕಿ ಅಂಶ
  • ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆಗಳಿಗೆ ಸಿಎಂ ಸೂಚನೆ

Bengaluru: ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನಲ್ಲೇ(young age) ಗರ್ಭಿಣಿಯಾಗುತ್ತಿರುವ ಬಾಲಕಿಯರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು,

ಇದರಿಂದಾಗಿ ಆರೋಗ್ಯ ಇಲಾಖೆ(Department of Health) ಹಾಗೂ ಮಕ್ಕಳ ಹಕ್ಕುಗಳ ಆಯೋಗ ಗಂಭೀರ ಚಿಂತೆಗೆ ಒಳಗಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ,

ಕಳೆದ ಕೆಲ ವರ್ಷಗಳಲ್ಲಿ ಕರ್ನಾಟಕದಲ್ಲಿ(Karnataka) ಟೀನೇಜ್ ಪ್ರೆಗ್ನೆನ್ಸಿ(Teenage Pregnancy) ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ. ತಾಯ್ತನಕ್ಕೆ ತಕ್ಕ ವಯಸ್ಸಿಗೂ ಮುನ್ನವೇ ಗರ್ಭಧಾರಣೆ ಆಗುತ್ತಿರುವ

ಘಟನೆಗಳು ಸಮಾಜದಲ್ಲಿ ಅಲಾರ್ಮ್ ಮೂಡಿಸಿದೆ. ಮುಖ್ಯಮಂತ್ರಿಗಳೇ ಖುದ್ದಾಗಿ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಕಲ್ಯಾಣ ಇಲಾಖೆಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದು,

ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕೆಲವು ಪೋಷಕರು ಹೆಣ್ಣು ಮಕ್ಕಳನ್ನು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತರಾಗಬೇಕು ಎಂಬ ಭಾವನೆಯಿಂದ ಬಾಲ್ಯ ವಿವಾಹಕ್ಕೆ ಮುಂದಾಗುತ್ತಾರೆ.

Teenage Pregnancy increases in state
CM Siddaramaiah
ಶಿಕ್ಷಣದ ಕೊರತೆ, ಬಡತನ, ಮೂಢನಂಬಿಕೆಗಳೂ ಈ ಸಮಸ್ಯೆಗೆ ಕಾರಣವಾಗಿವೆ. ಅಲ್ಲದೆ, ಕಾನೂನು ಬಾಹಿರ(Illegal) ಸಂಬಂಧಗಳು, ದೌರ್ಜನ್ಯಗಳು ಹಾಗೂ

ಕಿಶೋರ-ಕಿಶೋರಿಯರ ಪ್ರೇಮ ಸಂಬಂಧಗಳೂ ಕೂಡಾ ಟೀನೇಜ್ ಪ್ರೆಗ್ನೆನ್ಸಿ ಏರಿಕೆಗೆ ಕಾರಣವಾಗುತ್ತಿರುವುದಾಗಿ ತಜ್ಞರು ಹೇಳುತ್ತಾರೆ.

ರಾಜ್ಯದೆಲ್ಲೆಡೆ ಈ ಸಮಸ್ಯೆ ಹೆಚ್ಚಾಗುತ್ತಿದ್ದರೂ, ಬೆಂಗಳೂರು ಅರ್ಬನ್(Bangalore Urban) ಜಿಲ್ಲೆಯಲ್ಲಿ ಮಾತ್ರವೇ ಕಳೆದ ಮೂರು ವರ್ಷಗಳಲ್ಲಿ 8,891 ಪ್ರಕರಣಗಳು ದಾಖಲಾಗಿವೆ.

ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ, ರಾಜ್ಯದಾದ್ಯಂತ ಒಂದೇ ಮೂರು ವರ್ಷಗಳಲ್ಲಿ 3,36,000 ಕ್ಕೂ ಹೆಚ್ಚು ಟೀನೇಜ್ ಪ್ರೆಗ್ನೆನ್ಸಿ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆಯ ಇತ್ತೀಚಿನ ಅಂಕಿಅಂಶ ಪ್ರಕಾರ, ಕಳೆದ ಆರು ತಿಂಗಳಲ್ಲಿ ಮಾತ್ರವೇ ರಾಜ್ಯದಲ್ಲಿ 22,000 ಕ್ಕೂ ಹೆಚ್ಚು ಬಾಲ್ಯ ಗರ್ಭಧಾರಣೆ ಪ್ರಕರಣಗಳು ವರದಿಯಾಗಿವೆ. ಇಷ್ಟು ವೇಗವಾಗಿ ಪ್ರಕರಣಗಳು ಏರಿಕೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.


ಇನ್ನು ಟೀನೇಜ್ ಪ್ರೆಗ್ನೆನ್ಸಿಗೆ ಹಲವಾರು ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು ಕಾರಣವಾಗಿವೆ.

  • ಬಾಲ್ಯ ವಿವಾಹ
  • ಶಿಕ್ಷಣದ ಕೊರತೆ ಮತ್ತು ಅಕ್ಷರಾಸ್ಯತೆ
  • ಬಡತನ ಹಾಗೂ ವಲಸೆ
  • ಕುಟುಂಬ ಯೋಜನೆ ವಿಧಾನಗಳ ಅರಿವು ಇಲ್ಲದಿರುವುದು
  • ಹುಡುಗಿಯರ ಅಭಿಪ್ರಾಯವನ್ನು ಕಡೆಗಣಿಸುವುದು
  • ಸುರಕ್ಷಿತ ಲೈಂಗಿಕ ಶಿಕ್ಷಣದ ಕೊರತೆ

ಹೆಚ್ಚಿನ ಪ್ರಕರಣಗಳಲ್ಲಿ 14 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯಾಗುತ್ತಿರುವುದು ದಾಖಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲೇ ತಾಯ್ತನ ಅನುಭವಿಸುವುದರಿಂದ ತಾಯಿ ಹಾಗೂ

ಹುಟ್ಟುವ ಮಗುವಿನ ಆರೋಗ್ಯ ಎರಡರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ರಕ್ತಹೀನತೆ, ಅಧಿಕ ರಕ್ತದೊತ್ತಡ, ಶಾರೀರಿಕ ಹಾಗೂ ಮಾನಸಿಕ ಒತ್ತಡಗಳು ಬಾಲ ತಾಯಿಯರಲ್ಲಿ ಸಾಮಾನ್ಯವಾಗುತ್ತವೆ.

ಹುಟ್ಟುವ ಮಕ್ಕಳಲ್ಲೂ ಪೌಷ್ಠಿಕ ಕೊರತೆ ಹಾಗೂ ಸಾವಿನ ಅಪಾಯ ಹೆಚ್ಚಿರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಅಂಕಿಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು(State Govt) ಆರೋಗ್ಯ ಇಲಾಖೆ,

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(Women and Child Welfare Department) ಹಾಗೂ ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಜಾಗೃತಿ ಅಭಿಯಾನ ನಡೆಸುವ ಯೋಜನೆ ರೂಪಿಸುತ್ತಿದೆ.

ಇದನ್ನು ಓದಿ :  ಆನ್‌ಲೈನ್‌ ಗೇಮಿಂಗ್‌ ನಿಯಂತ್ರಣ ಮಸೂದೆ: ಬೆಟ್ಟಿಂಗ್‌ ಮೇಲೆ ಕಟ್ಟುನಿಟ್ಟಿನ ಕಾನೂನು, 7 ವರ್ಷ ಜೈಲು ಶಿಕ್ಷೆ ಸಾಧ್ಯತೆ

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ತಡೆಗೆ ಬಿಗಿ ಕ್ರಮ ಕೈಗೊಳ್ಳಲು ಸಿಎಂ ಸಿದ್ಧರಾಮಯ್ಯ(CM Siddaramaiah) ಸೂಚನೆ ನೀಡಿದ್ದಾರೆ.

Tags: bengaluruCM siddaramaiahdepartment of educationDepartment of HealthKarnatakaState GovtTeenage PregnancyWomen and Child Welfare Department

Related News

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025
2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ
ದೇಶ-ವಿದೇಶ

2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.