• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

‘ಮೆಟ್ರೋ’ ಪಟ್ಟಿಗೆ ಬೆಂಗಳೂರನ್ನು ಸೇರಿಸಿ ; ಇದರಿಂದ ಮಧ್ಯಮ ಸಂಬಳದಾರ ವರ್ಗಕ್ಕೆ ಅನುಕೂಲವಾಗಲಿದೆ : ತೇಜಸ್ವಿ ಸೂರ್ಯ

Mohan Shetty by Mohan Shetty
in ರಾಜಕೀಯ, ರಾಜ್ಯ
‘ಮೆಟ್ರೋ’ ಪಟ್ಟಿಗೆ ಬೆಂಗಳೂರನ್ನು ಸೇರಿಸಿ ; ಇದರಿಂದ ಮಧ್ಯಮ ಸಂಬಳದಾರ ವರ್ಗಕ್ಕೆ ಅನುಕೂಲವಾಗಲಿದೆ : ತೇಜಸ್ವಿ ಸೂರ್ಯ
0
SHARES
4
VIEWS
Share on FacebookShare on Twitter

New Delhi : ಮಂಗಳವಾರ ಬಿಜೆಪಿ ಸಂಸದ(BJP MP) ತೇಜಸ್ವಿ ಸೂರ್ಯ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆದಾಯ ತೆರಿಗೆ ನಿಯಮಗಳಲ್ಲಿ ‘ಮೆಟ್ರೋ ನಗರ’ಗಳ ಪಟ್ಟಿಗೆ ಬೆಂಗಳೂರನ್ನು ಕೂಡ ಸೇರಿಸಿ ಎಂದು ಪ್ರಮುಖ ಕಾರಣ ನೀಡಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್(Tejasvi Surya Requests FM) ಕೂಡ ಮಾಡಿ ವಿನಂತಿಸಿದ್ದಾರೆ.

FM

ಆದಾಯ ತೆರಿಗೆ ನಿಯಮಗಳಲ್ಲಿ ಮಧ್ಯಮ ವರ್ಗದವರಿಗೆ ಸಹಾಯವಾಗಲಿ ಎಂಬ ಆಲೋಚನೆಯನ್ನು ಮುಂದಿಟ್ಟು ಮಾತನಾಡಿದ ಸಂಸದ ತೇಜಸ್ವಿ ಸೂರ್ಯ(Tejasvi Surya),

ಮಹಾನಗರಗಳ ಪಟ್ಟಿಗೆ ಬೆಂಗಳೂರನ್ನು ಕೂಡ ಸೇರ್ಪಡಿಸಬೇಕು. ಇದರಿಂದ ಹೆಚ್ಚಿನ ಸಂಬಳದ ಉದ್ಯೋಗಿಗಳು ಹೆಚ್ಚಿನ ಮನೆ ಬಾಡಿಗೆ ಭತ್ಯೆ(HRV) ಪಡೆಯಬಹುದು.

ಈ ಕ್ರಮವು ದೇಶಾದ್ಯಂತ ಕೋಟ್ಯಂತರ ಮಧ್ಯಮ ವರ್ಗದ ತೆರಿಗೆದಾರರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಒತ್ತಿ ಹೇಳಿದ್ದಾರೆ.

ಪ್ರಸ್ತುತ ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ, ನವದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈ ನಗರಗಳು ಮಾತ್ರ ಸೇರಿವೆ.

ಇದನ್ನೂ ಓದಿ : https://vijayatimes.com/hrithik-roshan-tweet-kantara/

ಇದರೊಟ್ಟಿಗೆ ಬೆಂಗಳೂರು ನಗರ(Bengaluru City) ಕೂಡ ಸೇರಿದರೇ ಸಂಬಳ ಪಡೆಯುವ ಉದ್ಯೋಗಿಗಳು ಶೇಕಡಾ 50% ರಷ್ಟು ಎಚ್‌ಆರ್‌ಎ ಪಡೆದಂತಾಗುತ್ತದೆ ಎಂದು ಹೇಳಿದರು.

ಈ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ, “ಈ ದೇಶದಲ್ಲಿ ಸಂಬಳ ಪಡೆಯುವ ಮಧ್ಯಮ ವರ್ಗದವರ ಬಗ್ಗೆ ನಾನು ಬಹಳ ಮುಖ್ಯವಾದ ವಿಷಯವನ್ನು ಮುನ್ನೆಲೆಗೆ ತರಲು ಬಯಸುತ್ತಿದ್ದೇನೆ.

ಸ್ಪೀಕರ್ ಸರ್, ನಾನು ಬೆಂಗಳೂರಿನಿಂದ ಬಂದಿದ್ದೇನೆ, ಇದು ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಜನಸಂಖ್ಯೆಯನ್ನು ಹೊಂದಿರುವ ನಗರ.

ಆದ್ರೆ ಸರ್, ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ಕೇವಲ ನಾಲ್ಕು ನಗರಗಳಾದ ನವದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈ ಮಾತ್ರ ಇವೆ.

https://fb.watch/hpbH2Gn5F6/ “ನಾವು ಬುದ್ದಿವಂತರಾದರೇ ಈ ಸರ್ಕಾರ ತರಬಾರದು” : ಜನಾಭಿಪ್ರಾಯ

ಸಂಬಳ ಪಡೆಯುವ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ(HRA) ಕಡಿತದ ಉದ್ದೇಶಕ್ಕಾಗಿ 50 ಪ್ರತಿಶತದವರೆಗೆ ಮೆಟ್ರೋ ನಗರಗಳಾಗಿ ಪರಿಗಣಿಸಲಾಗುತ್ತದೆ.

ಬೆಂಗಳೂರು, ಹೈದರಾಬಾದ್ ಮತ್ತು ಇತರ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ವೇತನದಾರರು ಇದ್ದಾರೆ. ಆದರೆ ಅವರೆಲ್ಲಾ ಕೇವಲ 40% ಪ್ರತಿಶತದವರೆಗೆ ಮಾತ್ರ ಕಡಿತವನ್ನು ಪಡೆಯುತ್ತಿದ್ದಾರೆ ಎಂದು ಪ್ರತಿಪಾದಿಸಿದರು.

Tejasvi surya

ಸದ್ಯ ಆದಾಯ ತೆರಿಗೆ ನಿಯಮಗಳ ಪ್ರಕಾರ, ‘ಮೆಟ್ರೋ ನಗರ’ದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು ತಮ್ಮ ವೇತನದ ಶೇಕಡಾ 50% ರಷ್ಟು HRA ಕಡಿತಕ್ಕಾಗಿ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಶೇಕಡಾ 40% ರವರೆಗೆ ಮಾತ್ರ ಪಡೆದುಕೊಳ್ಳಬಹುದಾಗಿದೆ. ಆದಾಯ ತೆರಿಗೆ ನಿಯಮಗಳನ್ನು ದಯೆಯಿಂದ ಪರಿಶೀಲಿಸಿ.

https://twitter.com/Tejasvi_Surya/status/1602705809238274048?s=20&t=U9Th0Em7iFZtIq9zxoYxVg

ಬೆಂಗಳೂರು ಮತ್ತು ಅದೇ ಸ್ಥಾನದಲ್ಲಿರುವ ಇತರ ನಗರಗಳನ್ನು ಸೇರಿಸಲು ಹಣಕಾಸು ಸಚಿವರಿಗೆ ನಾನು ವಿನಂತಿಸುತ್ತೇನೆ.

ಇದರಿಂದ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳು ಶೇಕಡಾ 50% ರಷ್ಟು ಕಡಿತವನ್ನು ಪಡೆಯಬಹುದು. ಹೊಸ ನಗರಗಳು ಬೆಳವಣಿಗೆ ಮತ್ತು ಹೆಚ್ಚಿನ ಸಂಬಳ ಪಡೆಯುವ ವರ್ಗವು ಬೆಂಗಳೂರು ಮತ್ತು ಇತರ ನಗರಗಳಲ್ಲಿ ವಸತಿ ವೆಚ್ಚ ಹೆಚ್ಚಿರುವುದರಿಂದ,

https://twitter.com/Tejasvi_Surya/status/1602705815592632321?s=20&t=uHFx4EIrheX_dySscXVtaQ

ನಮ್ಮ ನಗರಗಳನ್ನು ಸಹ ‘ಮೆಟ್ರೋ’ ಎಂದು ಪರಿಗಣಿಸುವುದು ಅವಶ್ಯ ಎಂದು ತೇಜಸ್ವಿ ಸೂರ್ಯ ಸ್ಪೀಕರ್ ಬಳಿ ಮನವಿ ಮಾಡಿದ್ದಾರೆ.

Related News

‘ಶಕ್ತಿ’ಯೋಜನೆ ಉದ್ಘಾಟನೆಗೆ ಕ್ಷಣಗಣನೆ: ನಾಳೆ ಮಧ್ಯಾಹ್ನ 1 ಗಂಟೆ ನಂತರ ಮಹಿಳೆಯರಿಗೆ ಫ್ರೀ ಬಸ್‌ ಪ್ರಯಾಣ
Vijaya Time

‘ಶಕ್ತಿ’ಯೋಜನೆ ಉದ್ಘಾಟನೆಗೆ ಕ್ಷಣಗಣನೆ: ನಾಳೆ ಮಧ್ಯಾಹ್ನ 1 ಗಂಟೆ ನಂತರ ಮಹಿಳೆಯರಿಗೆ ಫ್ರೀ ಬಸ್‌ ಪ್ರಯಾಣ

June 10, 2023
bill
ರಾಜ್ಯ

ಇಂಧನ ಹೊಂದಾಣಿಕೆ ಶುಲ್ಕ ನೆಪ, ಡಬಲ್ ಆಯ್ತು ಕರೆಂಟ್ ಬಿಲ್ ; ಹಲವೆಡೆ ಪ್ರತಿಭಟನೆ

June 10, 2023
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ : 8 ತಿಂಗಳಲ್ಲಿ 7 ಭಯಾನಕ ಹತ್ಯೆ
ರಾಜ್ಯ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ : 8 ತಿಂಗಳಲ್ಲಿ 7 ಭಯಾನಕ ಹತ್ಯೆ

June 9, 2023
ಊಟಿಯಲ್ಲಿ ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು : ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ
ರಾಜ್ಯ

ಊಟಿಯಲ್ಲಿ ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು : ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ

June 9, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.