Visit Channel

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು!

kc rao

ತೆಲಂಗಾಣ(Telangana) ರಾಜ್ಯದ ಮುಖ್ಯಮಂತ್ರಿಗಳಾದ(Chief Minister) ಕೆ. ಚಂದ್ರಶೇಖರ್ ರಾವ್(K. Chandrashekhar Rao) ಅವರು ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 68 ವರ್ಷ ವಯಸ್ಸಿನ ಕೆ. ಚಂದ್ರಶೇಖರ್ ರಾವ್ ಅವರು ಕಳೆದ ವಾರದಿಂದ ಕೆಲಸಗಳಲ್ಲಿ ತೀವ್ರ ನಿರತರಾಗಿದ್ದರು ಜೊತೆಗೆ ದೆಹಲಿ, ಮುಂಬೈ, ಜಾರ್ಖಂಡ್ ದೇಶಗಳಿಗೆ ಫೆಡರಲ್ ಫ್ರಂಟ್ ರಚನೆಯ ಕಾರಣ, ಹೆಚ್ಚಾಗಿ ಪ್ರವಾಸ ಮಾಡಿದ್ದರು. ಪ್ರವಾಸ ಮುಗಿಸಿಕೊಂಡು ಬಂದ ಬಳಿಕ ಅವರ ಎಡಗೈನಲ್ಲಿ ತೀವ್ರ ನೋವು ಕಾಣಸಿದೆ.

telangana

ಕೂಡಲೇ ಕುಟುಂಬದವರು ಅವರನ್ನು ಹೈದ್ರಾಬಾದ್ ನಲ್ಲಿರುವ ಯಶೋಧಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಗೆ ಒಳಪಡಿಸಿದ ವೈದ್ಯರು, ಆಂಜಿಯೋಗ್ರಾಂ ಪರೀಕ್ಷೆ ನಡೆಸಿರುವುದಾಗಿ ತಿಳಿಸಿದ್ದಾರೆ. ಹೃದಯ ಸ್ಕ್ಯಾನ್ ಮತ್ತು ಎಂ.ಆರ್.ಐ ಸ್ಕ್ಯಾನ್ ಮಾಡಲು ಸಜ್ಜಾಗಿರುವುದಾಗಿ ಮಾಹಿತಿ ವರದಿಯಲ್ಲಿ ತಿಳಿದುಬಂದಿದೆ. ಚಂದ್ರಶೇಖರ್ ರಾವ್ ಅವರಿಗೆ ಮತ್ತಷ್ಟು ಸ್ಕ್ಯಾನ್ ಮಾಡುವುದು ಅಗತ್ಯವಾಗಿದೆ. ಹೆಚ್ಚು ಪ್ರಯಾಣ ಮಾಡಿರುವ ಕಾರಣ ಅವರಿಗೆ ಸ್ವಲ್ಪ ತೊಂದರೆಯಾಗಿದೆ ಬಿಟ್ಟರೆ, ತೀರ ಗಾಬರಿಪಡುವಂತ ವಿಷಯವೇನಿಲ್ಲ! ಕೆಸಿಆರ್ ಆರೋಗ್ಯದಲ್ಲಿ ಭಯಪಡುವಂತದ್ದೇನಿಲ್ಲ, ಶೀಘ್ರವೇ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರು ಹೇಳಿದರು.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.