ಜೂನ್ 22 ರವರೆಗೆ (Telegram ban till NEET exam) ಟೆಲಿಗ್ರಾಮ್ ನಿಷೇಧ
ಪೇಪರ್ ಲೀಕ್ ತಡೆಯಲು ಕ್ರಮ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ಪ್ರಕಟಣೆ
New Delhi: NEET UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ದೇಶದ ಹಲವೆಡೆ (Telegram ban till NEET exam) ವಿದ್ಯಾರ್ಥಿಗಳು, ಪೋಷಕರು, ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ಮರುಪರೀಕ್ಷೆಯನ್ನು ಯಾವುದೇ ಲೋಪವಿಲ್ಲದೆ ನಡೆಸಲು ಕಟ್ಟುನಿಟ್ಟಿನ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಪರೀಕ್ಷಾ ಅಕ್ರಮಗಳು ಮತ್ತೊಮ್ಮೆ ಮರುಕಳಿಸದಂತೆ ತಡೆಯಲು ದೇಶದಲ್ಲಿ ಟೆಲಿಗ್ರಾಮ್ ಆ್ಯಪ್ (Telegram App) ಅನ್ನು ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಲೋಪವನ್ನು ಗಂಭೀರವಾಗಿ (Telegram ban till NEET exam) ಪರಿಗಣಿಸಿರುವ ಸುಪ್ರೀಂ ಕೋರ್ಟ್ (Supreme Court) , ಇದಕ್ಕೆ ಕಾರಣರಾದವರ
ವಿರುದ್ಧ ತನಿಖೆ ನಡೆಸಿ ವಶಕ್ಕೆ ಪಡೆಯುವಂತೆ ಆದೇಶಿಸಿದೆ. ಅಲ್ಲದೆ, ಕೇಂದ್ರ ಸರ್ಕಾರ ಹಾಗೂ ಟೆಲಿಗ್ರಾಮ್ ಸಂಸ್ಥೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಈ ಸಂಬಂಧ ಎಲೆಕ್ಟ್ರಾನಿಕ್ಸ್ (Electronics) ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎರಡು ಪ್ರತ್ಯೇಕ ನಿರ್ದೇಶನಗಳನ್ನು ನೀಡಿದೆ. ಪರೀಕ್ಷಾ ಅವಧಿ ಮತ್ತು ಅದರ
ತಕ್ಷಣದ ಪರಿಣಾಮಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳನ್ನು ಎಡಿಟ್ ಮಾಡುವ ಫೀಚರ್ ನ ಜೂನ್ 30 ರವರೆಗೆ ಭಾರತದಲ್ಲಿ ನಿಷ್ಕ್ರಿಯಗೊಳಿಸುವಂತೆ ಟೆಲಿಗ್ರಾಮ್ ಸಂಸ್ಥೆಗೆ ಸೂಚಿಸಲಾಗಿದೆ.
ಸಂಘಟಿತ ವಂಚನೆ ಮತ್ತು ಸೈಬರ್ ಕ್ರೈಂ ಜಾಲಗಳು ಟೆಲಿಗ್ರಾಮ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ತಿಂಗಳುಗಟ್ಟಲೆ ನಿಗಾ ವಹಿಸಿದ ಬಳಿಕ ಎನ್‌ಟಿಎ (NTA) ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಭಾರತವು ಟೆಲಿಗ್ರಾಮ್ ಆ್ಯಪ್‌ಗೆ ಅತಿ ದೊಡ್ಡ ಜಾಗತಿಕ ಮಾರುಕಟ್ಟೆಯಾಗಿದ್ದು, ದೇಶದಲ್ಲೇ ಸುಮಾರು 220 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
ಇಂತಹ ಬೃಹತ್ ವೇದಿಕೆಯಲ್ಲಿ ಅತಿ ಸುಲಭವಾಗಿ ನೀಟ್ ಪ್ರಶ್ನೆಪತ್ರಿಕೆಗಳು ಡಾಕ್ಯುಮೆಂಟ್ ರೂಪದಲ್ಲಿ ಹರಿದಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಟೆಲಿಗ್ರಾಮ್‌ನಲ್ಲಿರುವ ಗೌಪ್ಯತೆ ಮತ್ತು ಚಾನೆಲ್‌ಗಳ ಅಡ್ಮಿನ್‌ಗಳ ಗುರುತು ಸುಲಭವಾಗಿ ಪತ್ತೆಯಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಅಕ್ರಮ ಚಟುವಟಿಕೆಗಳಿಗೆ ಇದನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿದ್ದಾರೆ.
ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳ ಮಾರಾಟ ಮತ್ತು ವಂಚನೆಯ ಗ್ರೂಪ್‌ಗಳು ಟೆಲಿಗ್ರಾಮ್‌ನಲ್ಲಿ ಸಕ್ರಿಯವಾಗಿದ್ದವು. ಇದನ್ನು ನಂಬಿ ಈಗಾಗಲೇ ಹಲವು ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ ಎಂಬ ಆರೋಪಗಳಿವೆ.
ಈಗಾಗಲೇ ಈ ಅಕ್ರಮಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂಬರುವ ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ಈ ತಾತ್ಕಾಲಿಕ ನಿರ್ಬಂಧ ಅತ್ಯಗತ್ಯ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.
ಇದನ್ನು ಓದಿ : https://vijayatimes.com/unemployment-increase-in-india/