Bengaluru : ಹಳೆ ಪಿಂಚಣಿ ವ್ಯವಸ್ಥೆ(Old pension scheme) ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿದ್ದ “ಮಾಡು ಇಲ್ಲವೇ ಮಡಿʼ ಅನಿರ್ಧಿಷ್ಟಾವಧಿ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್‌ಬಿದ್ದಿದೆ. ಕಳೆದ 14 ದಿನಗಳಿಂದ ಬೆಂಗಳೂರಿನಲ್ಲಿ(Temporary break to OPS struggle) ನಡೆಯುತ್ತಿದ್ದ ಹೋರಾಟವನ್ನು ಹಿಂಪಡೆಯಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಸುಧಾಕರ್(Dr Sudhakar), ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ, ಸರ್ಕಾರದ ಪ್ರತಿನಿಧಿಯಾಗಿ ಇಂದು ಫ್ರೀಡಂ ಪಾರ್ಕ್(Freedom park) ನಲ್ಲಿ ಮುಷ್ಕರ ನಿರತರಾಗಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರನ್ನು ಭೇಟಿಯಾಗಿ ನೌಕರರ ಪರ ಸರ್ಕಾರದ ಕಳಕಳಿಯನ್ನು ಮನವರಿಕೆ ಮಾಡಿಕೊಟ್ಟು ಮುಷ್ಕರ ಕೈಬಿಡುವಂತೆ ಮನವಿ ಮಾಡಲಾಯಿತು ಎಂದಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ, ಹಳೆ ಪದ್ಧತಿಯಂತೆ ಪಿಂಚಣಿ ಜಾರಿಗೊಳಿಸಲು ನೌಕರರು ಇಟ್ಟಿರುವ ಬೇಡಿಕೆಯನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದ್ದು,
ರಾಜ್ಯದ ಹಣಕಾಸು ಪರಿಸ್ಥಿತಿಯ ಸಾಧಕ ಬಾಧಕಗಳನ್ನು ಪರಿಗಣಿಸಿ ನೌಕರರ ಹಿತಾಸಕ್ತಿ ಕಾಪಾಡಲು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್‌ಬೊಮ್ಮಾಯಿ(Basavaraj Bommai) ಅವರು ಈಗಾಗಲೇ ನಿವೃತ್ತ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಏಳನೆ ವೇತನ ಆಯೋಗ ಜಾರಿಗೆ ಸಮಿತಿ ರಚಿಸಿದ್ದು, ಸರ್ಕಾರಿ ನೌಕರರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಇನ್ನು ಹೊಸ ಪಿಂಚಣಿ(Temporary break to OPS struggle) ವ್ಯವಸ್ಥೆಯೂ ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿದೆ. ಪ್ರಸ್ತುತ ಒಬ್ಬ ಮನುಷ್ಯನ ಜೀವಿತಾವಧಿ ಸರಾಸರಿ 72 ವರ್ಷಗಳು. 60 ವರ್ಷಕ್ಕೆ ನಾವು ನಿವೃತ್ತಿಯಾದರೆ 12 ವರ್ಷಗಳು ಮಾತ್ರ ಪಿಂಚಣಿಯನ್ನು ಸರ್ಕಾರ ಕೊಡಬೇಕಾಗುತ್ತದೆ.
https://vijayatimes.com/chandrababu-2024-last-election/
ಸರ್ಕಾರ ಮತ್ತು ಸಮಾಜಕ್ಕಾಗಿ ದುಡಿದ ವರ್ಗಕ್ಕೆ ಒಪಿಎಸ್ ನೀಡಲು ಸಾಧ್ಯವಿಲ್ಲವಾ? ಎಷ್ಟೋ ಮಂದಿ ನೌಕರರು ಈಗ 500, 1000 ಪಿಂಚಣಿ ಪಡೆಯುತ್ತಾ, ಇಳಿ ವಯಸ್ಸಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯುತ್ತಿದ್ದಾರೆ . ಹೀಗಾಗಿ ಸರ್ಕಾರ ಕೂಡಲೇ ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡಲು ಹಳೆ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ.
-ಮಹೇಶ್.ಪಿ.ಎಚ್